ಸಿದ್ದಾಪುರ: ತಾಲೂಕಿನ ಹೆಗ್ಗಾರಿನ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಆನಂದ ವೆಂಕಟರಮಣ ಭಟ್ಟ ಕಳೆದ ಮೇ ತಿಂಗಳಿನಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಯಾಗಿದ್ದಾನೆ.
ತಾಲೂಕಿನ ಹೆಗ್ಗಾರಿನ ಕೃಷ್ಣ ಭಟ್ಟ ಮೊಮ್ಮಗನಾದ ಈತ, ರಾಣಿಬೆನ್ನೂರಿನ ಎಲ್‌ಐಸಿ ಕಚೇರಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದ ದಿ.ವಿ.ಕೆ.ಭಟ್ಟ ಹಾಗೂ ವೀಣಾ ಭಟ್ಟ ದಂಪತಿಯ ಪುತ್ರನಾಗಿದ್ದಾನೆ. ಪಿಯುಸಿಯಲ್ಲಿ ಶೇ.೯೫ ಅಂಕಗಳಿಸಿದ ಈತ, ಭಗವದ್ಗೀತೆ ಪಠಣ, ತಬಲಾ, ಹಾರ್ಮೋನಿಯಂ, ಟ್ರಪೆಂಟ್ ವಾದನ, ಕಥೆ ಹೇಳುವುದು, ನೃತ್ಯ, ಚರ್ಚಾ ಸ್ಪರ್ಧೆ, ಲಘು ಸಂಗೀತ, ನಾಡಗೀತೆ, ಶೆಟಲ್, ಮೈಸೂರಿನ ಅರ್ಥ ಶಾಸ್ತ್ರ ಅಕಾಡೆಮೆಯು ನಡೆಸಿದ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಸೇರಿದಂತೆ ಹಲವು ಪ್ರತಿಭೆಗಳ ಪುಂಜವಾದ ಆನಂದ ಭಟ್ಟ, ಹಲವು ಅಡೆ-ತಡೆಗಳ ನಡುವೆ ಸಿಎ ಪರೀಕ್ಷೆಯಲ್ಲಿ ಉತ್ತಮ ಅಂಕದೊಂಗಿಗೆ ಉತ್ತೀರ್ಣನಾಗಿದ್ದಾನೆ. ಸಾಧನೆಗೆ ಗಣೇಶ ಕೆ.ಹೆಗಡೆ ಹಾಗೂ ಆನಂದನ ಪತ್ನಿ ಅಪೂರ್ವಳ ಸಹಕಾರ ಸ್ತ್ಯುತ್ಯಾರ್ಹ. ಆನಂದನ ಉನ್ನತ ಸಾಧನೆಗೆ ಕುಟುಂಬಸ್ಥರು, ಹಿತೈಷಿಗಳು ಹಾಗೂ ಊರಿನವರು ಹರ್ಷ ವ್ಯಕ್ತಪಡಿಸಿದ್ದಾರೆ.