Slide
Slide
Slide
previous arrow
next arrow

ಶ್ರೀವಿಷ್ಣು ಸಹಸ್ರ ನಾಮದ ವಿಶಿಷ್ಟ ಸ್ತೋತ್ರಗಳು

300x250 AD

ವೇದ್ಯೋ ವೈದ್ಯಃ ಸದಾಯೋಗೀ ವೀರಹಾ ಮಾಧವೋ ಮಧುಃ|  ಅತೀಂದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ ||

ಭಾವಾರ್ಥ:

ನಿಃಶ್ರೇಯಸ್(ಮೋಕ್ಷ)ವನ್ನು  ಬಯಸುವವವರು ಅರಿತುಕೊಳ್ಳುವದಕ್ಕೆ ತಕ್ಕವನಾಗಿದ್ದರಿಂದ ‘ವೇದ್ಯನು’ ಎಲ್ಲಾ ವಿದ್ಯೆಗಳನ್ನು ಬಲ್ಲವನಾಗಿದ್ದರಿಂದ ‘ವೈದ್ಯನು’ ಸದಾ ಹೊರತೋರಿಕೊಂಡ ಸ್ವರೂಪನೇ ಆಗುವದರಿಂದ  ‘ಸದಾಯೋಗಿಯು’ ಧರ್ಮವನ್ನು ಕಾಪಾಡುವುದಕ್ಕಾಗಿ ವೀರರಾದ ಅಸುರರನ್ನು ಕೊಲ್ಲುತ್ತಾನೆ. ಆದ್ದರಿಂದ ‘ವೀರಹಾ’ ಎನಿಸಿರುತ್ತಾನೆ.’ಮಾ’ಎಂದರೆ ವಿದ್ಯೆ,’ಧವ’ ಎಂದರೆ ಸ್ವಾಮಿ ಅಥವಾ ಒಡೆಯ ಅಥವಾ ಪತಿ ಎಂದರ್ಥ.ಹಾಗಾಗಿ ‘ಮಾಧವ’ ಎಂದರೆ ವಿದ್ಯಾಧಿಪತಿ. ಅಥವಾ ‘ಮಾ’ ಎಂಬುದು ಹರಿಯ ವಿದ್ಯೆಯನ್ನು ಹೇಳುತ್ತದೆ. ಆ ವಿದ್ಯೆಗೆ ಆತನು (ಹರಿಯು) ಪತಿಯಾಗಿರುವನು.(ಒಡೆಯನಾಗಿರುವನು).ಹೇಗೆ ಮಧು  (ಜೇನುತುಪ್ಪವು)ಹೆಚ್ಚು ಸಂತೋಷವನ್ನುಂಟು ಮಾಡುವುದೋ, ಈತನೂ ಹಾಗೆಯೇ. ಆದ್ದರಿಂದ ಈತನು (ಮಾಧವನು) ‘ಮಧುವು’ ಶಬ್ಧಾದಿಗಳಿಲ್ಲದವನಾಗಿದ್ದರಿಂದ ಇಂದ್ರಿಯಗಳಿಗೆ (ಈತನು)ವಿಷಯನಲ್ಲ.ಆದ್ದರಿಂದ ‘ಅತೀಂದ್ರಿಯನು’ ಶಬ್ದವಿಲ್ಲದ್ದು, ಸ್ಪರ್ಶವಿಲ್ಲದ್ದು ಎಂಬ ಶ್ರುತಿಯು ಇದಕ್ಕೆ ಪ್ರಮಾಣ. ಮಾಯಾವಿಗಳಿಗೂ ಮಾಯೆಯನ್ನು ಮಾಡುವಾತನಾದ್ದರಿಂದ ‘ಮಹಾಮಾಯನು’ ನನ್ನ  ಮಾಯೆ ದಾಟುವದಕ್ಕೆ ಅವಶಕ್ಯವಾದದ್ದು ಎಂದು ಭಗವದ್ಗೀತೆಯಲ್ಲೇ ಹೇಳಿದ್ದಾನೆ(ಭ.ಗೀ.೭-೧೪). ಜಗತ್ತಿನ ಉತ್ಪತ್ತಿ,ಸ್ಥಿತಿ,ಲಯ ಇವುಗಳಿಗೋಸ್ಕರ ಉದ್ಯುಕ್ತನಾಗಿರುವದರಿಂದ ‘ಮಹೋತ್ಸಾಹನು’ . ಬಲಶಾಲಿಗಳಿಗೆಲ್ಲರಿಗಿಂತಲೂ  ಹೆಚ್ಚಿನ ಬಲವುಳ್ಳ ವನಾಗಿದ್ದರಿಂದ ‘ಮಹಾಬಲನು’ ಆಗಿದ್ದಾನೆ.

300x250 AD

ಈ ಶ್ಲೋಕದ ವೈಶಿಷ್ಟ್ಯತೆ ಈ ಮೇಲಿನ ಶ್ಲೋಕವು ಮೃಗಶಿರಾ 2 ನೇ ಪಾದದಲ್ಲಿ ಜನಿಸಿದವರು ಪ್ರತಿನಿತ್ಯ 11 ಬಾರಿ ಹೇಳಿಕೊಳ್ಳುವ ಶ್ಲೋಕ.ಆದರೆ ಆಲಸ್ಯ, ಸೋಮಾರಿತನ, ಬೇಸರ, ಜಿಗುಪ್ಸೆ, ಯಾವಾಗಲೂ ನಿದ್ರೆ ಮಂಪರು, ವಿದ್ಯಾರ್ಥಿಗಳು ಪುಸ್ತಕ ಹಿಡಿದೊಡನೆಯೇ ತೂಕಡಿಕೆ, ಆಕಳಿಕೆ,  ನಿದ್ರೆ, ಏನೂ ಬೇಕಾಗಿಲ್ಲ ಎಂಬ ಭಾವನೆ. ಇಂತಹ ಎಲ್ಲ ತಾಮಸಗಳನ್ನು ಹೋಗಲಾಡಿಸಲು, ಲವಲವಿಕೆ, ಚಟುವಟಿಕೆ,ಎಚ್ಚರ,ಆಸಕ್ತಿ, ಸಾಧನೆ ಕಡೆಗೆ ದೃಷ್ಟಿ ಬರಲು ಯಾವದೇ ನಕ್ಷತ್ರದಲ್ಲಿ ಹುಟ್ಟಿದ್ದರೂ ಸಹ ಹೇಳಿಕೊಳ್ಳಬಹುದಾದ ಸ್ತೋತ್ರವಿದು. 

(ಸಂ:-ಡಾ. ಚಂದ್ರಶೇಖರ.ಎಲ್. ಭಟ್.ಬಳ್ಳಾರಿ)

Share This
300x250 AD
300x250 AD
300x250 AD
Back to top