Slide
Slide
Slide
previous arrow
next arrow

ಶಿರಸಿ ಲಯನ್ಸ ಕ್ಲಬ್‌ಗೆ ಪ್ರಶಸ್ತಿಗಳ ಮಹಾಪೂರ

300x250 AD

ಶಿರಸಿ: 2023-24 ನೇ ಸಾಲಿನಲ್ಲಿ ಶಿರಸಿ ಲಯನ್ಸ ಕ್ಲಬ್‌ನ ಸೇವಾಕಾರ್ಯಗಳಿಗೆ ಅತ್ತ್ಯುತ್ತಮ ಕ್ಲಬ್ ಪ್ರಶಸ್ತಿ ಲಭಿಸಿದೆ. ಪರಿಸರ ಕಾಳಜಿ, ಯೂತ್ ಕಾರ್ಯಕ್ರಮ, ಡಯಾಬಿಟಿಸ್ ಕೇರ್, ಹ್ಯುಮಾನಿಟೇರಿಯನ್ ಕಾರ್ಯಕ್ರಮಗಳಿಗೆ ವಿವಿಧ ಪ್ರಶಸ್ತಿಗಳು ಹಾಗೂ ಮಳೆ ನೀರು ಕೊಯ್ಲು ಘಟಕ ಸ್ಥಾಪನೆಗೆ ವಿಶೇಷ ಪ್ರಶಸ್ತಿಗಳನ್ನು ಕೊಡಲಾಗಿದೆ.

ಅಧ್ಯಕ್ಷರಾದ ಲಯನ್ ಡಾ. ಅಶೋಕ ಹೆಗಡೆ ಇವರಿಗೆ ಡಿಸ್ಸ್ಟ್ರಿಕ್ಟ್ ಏಕೈಕ ಅತ್ತ್ಯುತ್ತಮ‌ ಅಧ್ಯಕ್ಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದಲ್ಲದೆ ಪ್ರತಿಷ್ಠಿತ ಇಂಟರ್ನ್ಯಾಶನಲ್ ಪ್ರೆಸಿಡೆಂಟ್ ಮೆಡಲ್ ಇವರಿಗೆ ನೀಡಲಾಯಿತು. ಲಯನ್ ಜ್ಯೋತಿ ಅಶ್ವಥ ಹೆಗಡೆ, ಅತ್ತ್ಯುತ್ತಮ ಕಾರ್ಯದರ್ಶಿ, ಲಯನ್ ಶರಾವತಿ ಭಟ್ ಎಮ್‌ಜೆಎಫ್  ಅತ್ಯುತ್ತಮ ಕೋಶಾಧ್ಯಕ್ಷೆ ಎಂದು ಗೌರವಿಸಲಾಯಿತು. ಲಯನ್ ಪ್ರದೀಪ ಯಲ್ಲನಕರ್ ಎಮ್‌ಜೆಎಫ್ ಇವರಿಗೆ ಜಂಟಿ ರಕ್ತದಾನ ಶಿಬಿರ ನಡೆಸಿದ್ದಕ್ಕಾಗಿ ಇಂಟರ್ನ್ಯಾಶನಲ್ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು. ಲಯನ್ ಎಮ್. ಐ. ಹೆಗಡೆ, ಲಯನ್ ವಿನಾಯಕ ಭಾಗ್ವತ್ ಎಮ್.ಜೆ. ಎಫ್, ಲಯನ್ ಗುರುರಾಜ ಹೊನ್ನಾವರ ಇವರಿಗೆ ವಿವಿಧ ಸೇವಾಕಾರ್ಯಗಳಿಗೆ ಜಿಲ್ಲಾ ಗವರ್ನರ್ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು. ಈ ಎಲ್ಲ ಪ್ರಶಸ್ತಿಗಳನ್ನು ಗೋವಾದಲ್ಲಿ ನಡೆದ ಲಯನ್ಸ ಪ್ರಶಸ್ತಿ ಪ್ರಧಾನ‌ ಸಮಾರಂಭದಲ್ಲಿ ಜಿಲ್ಲಾ ಪ್ರಾಂತ್ಯಪಾಲರಾದ ಲಯನ್ ಅರ್ಲ್ ಬ್ರಿಟೊ ಪಿಎಮ್‌ಜೆಎಫ್‌ರವರು ಕೊಡಮಾಡಿದರು.

300x250 AD
Share This
300x250 AD
300x250 AD
300x250 AD
Back to top