Slide
Slide
Slide
previous arrow
next arrow

ಸಂಸದ ಕಾಗೇರಿ ಜನ್ಮದಿನ: ರಕ್ತದಾನ ಶಿಬಿರ

300x250 AD

ಸಿದ್ದಾಪುರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆಯವರ ಜನ್ಮದಿನ ಪ್ರಯುಕ್ತ ಪಟ್ಟಣದ‌ ಶ್ರೇಯಸ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ಜಾದವಜಿ ಛೆಡಾ ಮೆಮೋರಿಯಲ್ ರಾಷ್ಟ್ರೋತ್ಥಾನ ರಕ್ತದಾನ ಕೇಂದ್ರ ಹುಬ್ಬಳ್ಳಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಮಾನಿ ಬಳಗದ ವತಿಯಿಂದ ರಕ್ತದಾನ ಶಿಬಿರ ನಡೆಸುವ ಮೂಲಕ ಜನ್ಮದಿನವನ್ನು ಸರಳವಾಗಿ ಆಚರಿಸಲಾಯಿತು. ಇದಕ್ಕೂ ಮೊದಲು ಕೊಂಡ್ಲಿಯ ಕಾಳಿಕಾಂಬಾ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಶ್ರೇಯಸ್ ಆಸ್ಪತ್ರೆಯ ಡಾ. ಶ್ರೀಧರ ವೈದ್ಯ ಮಾತನಾಡಿ, ರಕ್ತದಾನ ಅತ್ಯಂತ ಶ್ರೇಷ್ಠವಾದ ಕಾರ್ಯವಾಗಿದೆ. ಹೆರಿಗೆ ಹಾಗೂ ಅಪಘಾತಕ್ಕೊಳಗಾದ ರೋಗಿಗೆ ರಕ್ತ ತುಂಬಾ ಮುಖ್ಯವಾಗಿದೆ. ಅಮೂಲ್ಯ ಜೀವ ಉಳಿಸಲು ಪ್ರತಿಯೊಬ್ಬರು ರಕ್ತದಾನ ಮಾಡಬೇಕು. ಜೀವ ಉಳಿಸಲು ಸಹಾಯಕವಾಗುವ ರಕ್ತವನ್ನು ಯುವಜನತೆ ದಾನ ಮಾಡಬೇಕು ಎಂದ ಅವರು, ಡೆಂಗ್ಯೂ ಖಾಯಿಲೆ ದಿನೇ ದಿನೇ ಉಲ್ಬಣಿಸುತ್ತಿದೆ. ಯಾರು ಕೂಡ ಇದನ್ನು ಹಗುರವಾಗಿ ಪರಿಗಣಿಸಬಾರದು ಎಂದರು.

  ಸಿದ್ದಾಪುರ ತಾಲೂಕಾ ಬಿಜೆಪಿ ಮಂಡಲದ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಮಾತನಾಡಿ, ಕಾಗೇರಿಯವರ ಸರಳತೆ ಹಾಗೂ ನಿಷ್ಠೆ ನಮಗೆಲ್ಲಾ ಸ್ಪೂರ್ತಿಯಾಗಿದೆ. ರಾಜ್ಯ ಕಂಡ ಅಪ್ರತಿಮ ನಾಯಕ ಕಾಗೇರಿಯವರ ಜನ್ಮದಿನವನ್ನು ರಕ್ತದಾನದಂತ ಶ್ರೇಷ್ಠ ಕಾರ್ಯದ ಮೂಲಕ ಹುಟ್ಟುಹಬ್ಬ ಆಚರಿಸುತ್ತಿದ್ದೇವೆ. ಪ್ರತಿಯೊಬ್ಬರು ರಕ್ತ ನೀಡಿ ಇನ್ನೊಂದು ಜೀವ ಉಳಿವಿಗೆ ಕಾರಣರಾಗಿ ಎಂದರು.‌

300x250 AD

 ಮಂಡಲದ ನಿಕಟಪೂರ್ವ ಅಧ್ಯಕ್ಷ ಮಾರುತಿ ನಾಯ್ಕ ಮಾತನಾಡಿ, ಕಾಗೇರಿಯವರ ಜನ್ಮದಿನವನ್ನು ಪ್ರತಿ ವರ್ಷದಂತೆ ರಕ್ತದಾನ ಶಿಬಿರದ ಮೂಲಕ ಸರಳವಾಗಿ ಆಚರಿಸಲಾಗಿದೆ ಎಂದರು.

 ಈ ಸಂದರ್ಭದಲ್ಲಿ ತಾಲೂಕಾ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ತೋಟಪ್ಪ ನಾಯ್ಕ, ಎಸ್.ಕೆ. ಮೇಸ್ತಾ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ,  ರಾಷ್ಟ್ರೋತ್ಥಾನ ರಕ್ತದಾನ ಕೇಂದ್ರದ ಸಿದ್ದು, ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಮಾನಿ ಬಳಗದ ಎ.ಜಿ.ನಾಯ್ಕ ಕಡಕೇರಿ, ಪ್ರಮುಖರಾದ ಮಂಜುನಾಥ ಭಟ್, ಸುರೇಶ ನಾಯ್ಕ, ಗುರುರಾಜ ಶಾನಭಾಗ ಮತ್ತಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top