Slide
Slide
Slide
previous arrow
next arrow

ಹದಗೆಟ್ಟಿರುವ ಮುಖ್ಯ ರಸ್ತೆಗಳ ದುರಸ್ತಿಗಾಗಿ ಮನವಿ ಸಲ್ಲಿಕೆ

300x250 AD

ದಾಂಡೇಲಿ : ನಗರದ ಪ್ರಮುಖ ರಸ್ತೆಗಳು ತೀವ್ರ ಹದಗೆಟ್ಟಿದ್ದು, ಹೊಂಡ ಗುಂಡಿಗಳಿಂದ ಈ ರಸ್ತೆಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ತೀವ್ರ ಸಂಕಷ್ಟ ಎದುರಾಗಿದೆ.‌ ಇದೇ ರಸ್ತೆಯಲ್ಲಿ ಸಂಚರಿಸುವ ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ರಸ್ತೆ ಅವ್ಯವಸ್ಥೆಯಿಂದ ಓಡಾಡಲು ತೊಂದರೆಯಾಗುತ್ತಿದೆ. ಪ್ರಸ್ತುತ ತೀವ್ರ ಹದಗೆಟ್ಟಿರುವುದರಿಂದ ವಾಹನ ಅಪಘಾತಗಳು ನಿರಂತರವಾಗಿ ನಡೆಯುವಂತಾಗಿದೆ. ಪ್ರವಾಸೋದ್ಯಮದಿಂಷ ಗಮನ ಸೆಳೆಯುತ್ತಿರುವ ದಾಂಡೇಲಿ ನಗರದ ಪ್ರಮುಖ ರಸ್ತೆಗಳಲ್ಲಿರುವ ಹೊಂಡ ಗುಂಡಿಗಳನ್ನು ಮುಚ್ಚಿ, ರಸ್ತೆ ದುರಸ್ತಿ ಮಾಡಿಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ನಾ) ಬಣವು ಮಂಗಳವಾರ ನಗರಸಭೆಯಲ್ಲಿ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರಿಗೆ ಲಿಖಿತ ಮನವಿ ನೀಡಿ ವಿನಂತಿಸಿದೆ.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾದ ಅಶೋಕ‌ ಮಾನೆ, ಕರವೇ ಜಿಲ್ಲಾ ಮಹಿಳಾ ಅಧ್ಯಕ್ಷರಾದ ನೀಲಾ ಮಾದರ, ತಾಲೂಕಾ ಮಹಿಳಾ ಘಟಕದ ಅಧ್ಯಕ್ಷೆ ಮುಜೀಬಾ ಛಬ್ಬಿ, ಸಂಘದ ಪ್ರಮುಖರುಗಳಾದ ಚಂದ್ರು ಮಾಳಿ, ರಾಜೇಶ್ವರಿ ಬೇಂದ್ರೆ, ರವಿ ಮಾಳಿ, ಸೈಯದ್ ಸಮೀರ್, ಉಮೇಶ ಬಡಿಗೇರ, ಶಿವರಾಜ ಜೆರಕಲ್, ಮೆಹಬೂಬ್ ಶೇಖ, ಶ್ಯಾಮ್ ಬೆಂಗಳೂರು, ಅಜಯ್ ಪಾಟನಕರ್, ಸಮೀರ್, ಮಂಜು ಶೀರೋಡ್ಕರ್, ರೇಣುಕಾ ಆಲೂರ್, ವಿಜಯಲಕ್ಷ್ಮಿ ಅಕ್ಕಿ, ಲೀಲಾವತಿ ಕೊಳಚಿ, ಈರಮ್ಮಾ ಉಳ್ಳಾಗಡ್ಡಿ, ಸಂಗೀತ ಅಂಬ್ರೆ, ಕಮಲಾ, ಅನುಸೂಯ ಮೊದಲಾದವರು ಉಪಸ್ಥಿತರಿದ್ದರು

300x250 AD
Share This
300x250 AD
300x250 AD
300x250 AD
Back to top