ಶಿರಸಿ: ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತಿನ ಉದ್ಘಾಟನೆ ಕಾರ್ಯಕ್ರಮ ಹಾಗೂ ದತ್ತಿನಿಧಿ ವಿತರಣಾ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.
ಪ್ರಜಾಪ್ರಭುತ್ವ ಮಾದರಿಯಲ್ಲಿ ಆರಿಸಿ ಬಂದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸುವುದರ ಮೂಲಕ ಹಾಗೂ ದೀಪ ಬೆಳಗುವುದರ ಮೂಲಕ ವಿದ್ಯಾರ್ಥಿ ಸಂಸತ್ತಿನ ಅಧಿಕೃತ ಉದ್ಘಾಟನೆ ಜರುಗಿತು.
ಇದೇ ಸಂದರ್ಭದಲ್ಲಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಕಿವಿ ಮೂಗು ಗಂಟಲು ತಜ್ಞರಾದ ಡಾಕ್ಟರ್ ವಿನಾಯಕ್ ಈಶ್ವರನ್ ತಮ್ಮ ತಾಯಿಯವರಾದ ಶ್ರೀಮತಿ ನಂದಿನಿ ಸುಬ್ರಮಣ್ಯಂ ಇವರು ನೀಡುವ ದತ್ತ ನಿಧಿಯನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಿದರು. ಹಾಗೂ ಶಾಲಾ ಸಂಸತ್ತಿನ ಉದ್ಘಾಟನೆ ಮಾಡಿ ಮಾತನಾಡುತ್ತಾ ತಮ್ಮ ತಾಯಿಯವರು ಅರ್ಹ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಈ ದತ್ತಿನಿದಿಯನ್ನು ನೀಡುತ್ತಾ ಬಂದಿದ್ದಾರೆ ಕಾರಣ ವಿದ್ಯಾರ್ಥಿಗಳಾದ ತಾವು ಈ ಮೊತ್ತದ ಸದ್ವಿನಿಯೋಗ ಮಾಡಿಕೊಂಡು ಕಲಿತ ಶಾಲೆ ಶಿಕ್ಷಕರನ್ನು ನೆನಪಿಸಿಕೊಳ್ಳಬೇಕು ಎಂದರು. ಅಲ್ಲವೇ ಯಾವುದೇ ಒಂದು ಉತ್ತಮ ಅಭ್ಯಾಸವನ್ನು ರೂಡಿಸಿಕೊಳ್ಳಬೇಕಾದರೆ ಸತತ ಪರಿಶ್ರಮ ಅಗತ್ಯ ಸೂರ್ಯನಾರಾಯಣ ಪ್ರೌಢಶಾಲೆ ಉತ್ತಮ ಪರಿಸರ ಹೊಂದಿದ್ದು ಉತ್ಸಾಹಿ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಶಿಕ್ಷಕ ವೃಂದದ ನಡುವೆ ನೀವು ಅಭ್ಯಾಸ ಮಾಡುತ್ತಿರುವುದು ನಿಮಗೆ ಉತ್ತಮ ಅವಕಾಶ ಎಂದರು .ಅಲ್ಲದೆ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳು ಜವಾಬ್ದಾರಿಯನ್ನ ಅರಿತು ಮಾದರಿ ಪ್ರತಿನಿಧಿಗಳಾಗಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಸೂರ್ಯನಾರಾಯಣ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷರಾದ ಪ್ರಭಾಕರ್ ಹೆಗಡೆ ಹುಗ್ಗಿಕೊಪ್ಪ ಮಾತನಾಡುತ್ತಾ ಬದುಕಿನಲ್ಲಿ ನೆನಪಿನ ಪುಟಗಳು ಸದಾ ತುಂಬಿರಬೇಕು ಅದು ಉತ್ತಮವಾದ ಅಂಶಗಳಿಂದ ಒಡಗೂಡಿದ್ದರೆ ವಿದ್ಯಾರ್ಥಿಗಳಿಗೆ ಶ್ರೇಯಸ್ಸು ಹಾಗೂ ವಿದ್ಯಾರ್ಥಿಗಳು ಸಾಧನೆ ಮಾಡಿ ತಮ್ಮ ಪ್ರತಿಭೆ ಮೆರೆಯಬೇಕು ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸೂರ್ಯನಾರಾಯಣ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಧರ ನಾಯಕ ಎಕ್ಕಂಬಿ ಇವರು ಇವರು ಮಾತನಾಡುತ್ತಾ ನಾವು ಭೌತಿಕ ವಸ್ತುಗಳನ್ನು ಪ್ರೀತಿಸುವ ಮೊದಲು ನಮ್ಮನ್ನ ನಾವು ಪ್ರೀತಿಸಿಕೊಳ್ಳಬೇಕು ಇದರಿಂದ ಜೀವನದಲ್ಲಿ ಶಿಸ್ತು ಬರುವುದು ವಿದ್ಯಾರ್ಥಿಗಳಾದ ನೀವು ಮಾನ್ಯರು ನೀಡಿದ ಮೊತ್ತವನ್ನು ವಿದ್ಯಾಭ್ಯಾಸಗೋಸ್ಕರ ಉಪಯೋಗಿಸಿ ಬಾಳಿರಿ ಎಂದು ಹಾರೈಸಿದರು ಅಲ್ಲದೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಸಿ ವಿದ್ಯಾರ್ಥಿ ಸಂಸತ್ತಿನ ಆಯ್ಕೆ ನಡೆದಿದ್ದು ವಿದ್ಯಾರ್ಥಿಗಳಿಗೆ ಜ್ಞಾನಕ್ಕೆ ಪೂರಕ ಎಂದರು.
ಪ್ರಾರಂಭದಲ್ಲಿ ಸರ್ವರನ್ನು ಸ್ವಾಗತಿಸಿ ಮಾತನಾಡಿದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗಣೇಶ್ ಭಟ್ ವಾನಳ್ಳಿ ಇವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಡಾಕ್ಟರನ್ನು ಭೇಟಿಯಾಗಿದ್ದೆ ಒಂದು ವಿಶೇಷ ಸಂದರ್ಭ ಹಾಗೂ ಅವರಲ್ಲಿ ಗ್ರಾಮೀಣ ಶಾಲೆಯಾದ ನಮಗೆ ತಾವು ದತ್ತಿ ನಿಧಿ ನೀಡಿ ಸಹಕರಿಸಬೇಕು ಎಂದಾಗ ತುಂಬು ಹೃದಯದಿಂದ ಒಪ್ಪಿಕೊಂಡು ಆಗಮಿಸಿದ್ದು ಅತ್ಯಂತ ಹರ್ಷದಾಯಕವಾಗಿದೆ ಕಾರಣ ಪ್ರೌಢಶಾಲೆಯ ತಮಗೆ ಸದಾ ಚಿರಋಣಿ ಎಂದರಲ್ಲದೆ ಪಡೆದಂತಹ ಮೊತ್ತ ಖಂಡಿತವಾಗಿಯೂ ವಿದ್ಯಾಬ್ಯಾಸಕ್ಕೆ ಉಪಯೋಗಿಸಿಕೊಂಡು ಅಭ್ಯಾಸದಲ್ಲಿ ಪ್ರಗತಿ ತೋರಬೇಕು ಎಂದು ಆಶಿಸಿದರು. ಶಿಕ್ಷಕರಾದ ಶ್ರೀ ಗಣೇಶ್ ಸಾಯಿ ಮನೆ ನಿರ್ವಹಿಸಿದರೆ ಶಿಕ್ಷಕರಾದ ಲೋಕನಾಥ್ ಹರಿಕಂತ್ರ ವಂದಿಸಿದರು.