ಸಿದ್ದಾಪುರ: ಟಿಎಸ್‌ಎಸ್ ಸಂಸ್ಥೆಯಲ್ಲಿ ನಿರಂತರವಾಗಿ ವ್ಯವಹರಿಸುತ್ತ ಬರುತಿದ್ದ ಸಿದ್ದಾಪುರ ತಾಲೂಕಿನ ಊರತೋಟ(ನವೀಲಗೋಣ)ದ ಕೇಶವ ರಾಮಪ್ಪ ಹೆಗಡೆ ನಿಧನ ಹೊಂದಿದ್ದಾರೆ. ಅವರ ಅಂತ್ಯಸಂಸ್ಕಾರಕ್ಕಾಗಿ ಸದಸ್ಯರ ಕ್ಷೇಮನಿಧಿಯಿಂದ ಹತ್ತುಸಾವಿರ ರೂ.ಗಳ ಆರ್ಥಿಕ ಸಹಾಯವನ್ನು ಸಂಸ್ಥೆಯ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಹಾಗೂ ಸಿದ್ದಾಪುರ ಶಾಖೆಯ ಸಲಹಾ ಸಮಿತಿ ಸದಸ್ಯ ಡಾ.ರವೀಂದ್ರ ಹೆಗಡೆ ಹೊಂಡಗಾಸಿಗೆ ಮೃತರ ಮನೆಗೆ ತೆರಳಿ ಶಾರದಾ ಕೇಶವ ಹೆಗಡೆ ಅವರಿಗೆ ನಗದು ಹಣ ನೀಡಿದರು.
ಟಿಎಸ್ಎಸ್ ಸದಸ್ಯ ನಿಧನಕ್ಕೆ ಕ್ಷೇಮನಿಧಿಯಿಂದ ಧನಸಹಾಯ
