ಸಿದ್ದಾಪುರ : ಮೆಣಸಿ ಲಂಬಾಪುರ ರಸ್ತೆಯ ಅಳವಳ್ಳಿ ಬಳಿ ರಸ್ತೆ ದುರಸ್ತಿ ಕಾರ್ಯ ಬೇಸಿಗೆಯಿಂದ ಆರಂಭಗೊಂಡಿದ್ದು ಮಳೆಗಾಲ ಆರಂಭವಾದರೂ ಪೂರ್ಣಗೊಳ್ಳದೆ ಇರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ವಾಹನ ಸಂಚಾರಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಡದೇ ಇರುವುದರಿಂದ ಬಸ್ ಸಂಪರ್ಕ ಕಡಿತಗೊಂಡಿದ್ದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಅನಾನುಕೂಲತೆ ಉಂಟಾಗಿದೆ. ಕೂಡಲೆ ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.
ಬೇಸಿಗೆಯಲ್ಲಿ ಇಲ್ಲಿ ದುರಸ್ತಿ ಕಾರ್ಯ ಆರಂಭಗೊಂಡಿತ್ತು. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳು ಸರಿಯಾದ ಜವಾಬ್ದಾರಿ ವಹಿಸದೆ ಇರುವುದರಿಂದ ರಸ್ತೆ ವಾಹನಗಳು ಸಂಚರಿಸಲು ಆಗದ ಸ್ಥಿತಿಗೆ ತಲುಪಿದ್ದು ಈ ರಸ್ತೆ ಬಳಸಿ ಲಂಬಾಪುರ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ವಸತಿ ಬಸ್ ಸಂಪಖಂಡದಲ್ಲಿ ವಸತಿ ಮಾಡುತ್ತಿದೆ, ಬೈಲಳ್ಳಿ, ಅಳವಳ್ಳಿ, ದೊಡ್ಡಗದ್ದೆ, ಚಂದ್ರಘಟಿಗಿ ಸಂಪಖಂಡ, ಕಾನಳ್ಳಿ ಭಾಗದ ಸಾರ್ವಜನಿಕರು ಲಂಬಾಪುರಕ್ಕೆ ಹೋಗುವ ಹೈಸ್ಕೂಲ್ ವಿದ್ಯಾರ್ಥಿಗಳು ಬಸ್ ಸಂಪರ್ಕ ಇಲ್ಲದೆ ಇರುವುದು ಹಲವಾರು ಸಮಸ್ಯೆ ಎದುರಿಸುವಂತಾಗಿದೆ ಕೂಡಲೇ ಈ ರಸ್ತೆಯಲ್ಲಿ ಕಲ್ಲುಗಳನ್ನ ಹಾಕಿ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.
” ಗುತ್ತಿಗೆದಾರರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ಇಲ್ಲಿ ಸಮಸ್ಯೆ ಉಂಟಾಗಿದೆ ಕೂಡಲೇ ಅಧಿಕಾರಿಗಳು ಇಲ್ಲಿ ಸೂಕ್ತ ಕ್ರಮ ಕೈಗೊಂಡು ಬಸ್ ಸಂಚರಿಸಲು ಹಾಗೂ ವಾಹನ ಸುರಕ್ಷಿತವಾಗಿ ಸಂಚರಿಸಲು ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕು, ಕೆಎಸ್ಆರ್ಟಿಸಿ ಅಧಿಕಾರಿಗಳಿಗಳ ಗಮನಕ್ಕೆ ತಂದಿದ್ದೇವೆ, ಸ್ಥಳ ಪರಿಶೀಲಿಸಿದ್ದೇವೆ ಎಂದು ಹೇಳಿದ್ದಾರೆ ಆದಷ್ಟು ಬೇಗ ಕ್ರಮ ಕೈಗೊಂಡು ಜನರು ಎದುರಿಸುವ ಸಮಸ್ಯೆಗಳನ್ನು ಸರಿಪಡಿಸಿ. ಎಂ ಕೆ ತಿಮ್ಮಪ್ಪ ಸಿದ್ದಾಪುರ ತಾಲೂಕ ಬಿಜೆಪಿ ಮಂಡಲ ಅಧ್ಯಕ್ಷ.