Slide
Slide
Slide
previous arrow
next arrow

ಉಪೇಂದ್ರ ಪೈ ಹೇಳಿಕೆಗೆ ನಗರಸಭೆ ಸದಸ್ಯರ ವಿರೋಧ: ಕ್ಷಮೆಗೆ ಆಗ್ರಹ

300x250 AD

ಶಿರಸಿ: ಶಿರಸಿ ನಗರಸಭೆ ಸದಸ್ಯರ ಕುರಿತು ಜೆಡಿಎಸ್ ಮುಖಂಡ ಉಪೇಂದ್ರ ಪೈ ಮಾಡಿದ್ದ ಟೀಕೆಗೆ ಕಾಂಗ್ರೆಸ್, ಬಿಜೆಪಿ ಹೀಗೆ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಒಗ್ಗಟ್ಟಾಗಿ ವಿರೋಧ ವ್ಯಕ್ತಪಡಿಸಿದ್ದು, ಅಕ್ರಮವಾಗಿ ಕಟ್ಟಡ ನಿರ್ಮಿಸಿರುವ ಉಪೇಂದ್ರ ಪೈ ಮೊದಲು ತಮ್ಮ ವ್ಯವಹಾರ ಸರಿಪಡಿಸಿಕೊಳ್ಳಲಿ ಎಂದು ಆಗ್ರಹಿಸಿದ್ದಾರೆ.‌

ಇತ್ತೀಚಿಗೆ ಪೈ ಸುದ್ದಿಗೋಷ್ಠಿ ನಡೆಸಿ ಶಿರಸಿ ನಗರಸಭೆಯ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ರಾತ್ರಿ 6-7 ಗಂಟೆಯ ನಂತರ ನಗರಸಭೆಗೆ ಹೋಗಿ ಕೆಲಸ ಮಾಡುತ್ತಾರೆ‌. ಫಾರ್ಮ ನಂ. 3ಮಾಡಿಕೊಡಲು ಹಣ ಪಡೆಯುತ್ತಾರೆ ಸೇರಿದಂತೆ ಇನ್ನಿತರ ಟೀಕೆ ಮಾಡಿದ್ದರು. ಇದರಿಂದ ಈ ಕುರಿತು ನಗರಸಭೆಯಲ್ಲಿ ಶುಕ್ರವಾರ ಬಹುತೇಕ ಎಲ್ಲಾ ಸದಸ್ಯರು ಒಗ್ಗಟ್ಟಾಗಿ ಸುದ್ದಿಗಾರರೊಂದಿಗೆ ಮಾತನಾಡಿ, ಪೈ ಹೇಳಿಕೆಯನ್ನು ಖಂಡಿಸಿದರು.

ಮಾಜಿ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ, ಉಪೇಂದ್ರ ಪೈ ಅವರ ಹೇಳಿಕೆಯನ್ನು ನಾವೆಲ್ಲರೂ ಖಂಡಿಸುತ್ತೇವೆ. ಯಾರೂ ಸಹ ವಯಕ್ತಿಕ ಕೆಲಸಗಳಿಗಾಗಿ ನಗರಸಭೆಗೆ ಬರುವುದಿಲ್ಲ. ಫಾರ್ಮ ನಂ. 3 ವಿಷಯದಲ್ಲಿ ಯಾವ ಸದಸ್ಯರೂ ಮೂಗು ತೂರಿಸುವುದಿಲ್ಲ.‌ ಇಲ್ಲಿ ಜನರಿಗಾಗಿ ಸದಸ್ಯರು ಸಾಮಾಜಿಕ ಕೆಲಸ ಮಾಡುತ್ತಾರೆ. ಅನಿವಾರ್ಯತೆ ಇದ್ದಾಗ ಸಂಜೆಯ ವೇಳೆ ವಾರ್ಡಿನ ಕೆಲಸಗಳಿಗಾಗಿ ಭೇಟಿ ನೀಡುತ್ತಾರೆ. ಯಾರೂ ಸಹ ಭ್ರಷ್ಟಾಚಾದಲ್ಲಿ ತೊಡಗಿಕೊಂಡಿಲ್ಲ. ಉಪೇಂದ್ರ ಪೈ ಅವರ ಹೇಳಿಕೆ ತಪ್ಪಾಗಿದ್ದು, ಅವರು ನಗರಸಭೆ ಸದಸ್ಯರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಇನ್ನೊರ್ವ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ ಮಾತನಾಡಿ, ಫಾರ್ಮ ನಂ. 3 ರಲ್ಲಿ ಅಕ್ರಮ ಹುಟ್ಟಿಕೊಂಡಿರುವುದೇ ಉಪೇಂದ್ರ ಪೈ ಅವರಂತಹ ರಿಯಲ್ ಎಸ್ಟೇಟ್ ವ್ಯವಹಾರಗಳಿಂದ. ಅವರು ನಡೆಸುತ್ತಿರುವ ಕಟ್ಟಡಕ್ಕೆ ಸರಿಯಾದ ಪರವಾನಿಗೆಯೂ ಇಲ್ಲ. ಈ ಹಿಂದೆ ನೊಟೀಸ್ ಸಹ ನೀಡಲಾಗಿದೆ. ಆದರೆ ಈಗ ನಗರಸಭೆ ಸದಸ್ಯರ ಕುರಿತು ಟೀಕಿಸುತ್ತಾರೆ. ಇವರು ಮೊದಲು ಅಕ್ರಮ ವ್ಯವಹಾರವನ್ನು ಬಿಡಲಿ. ಆಮೇಲೆ ಇನ್ನೊಬ್ಬರ ಬಗ್ಗೆ ಹೇಳಲಿ ಎಂದು ಟೀಕಿಸಿದರು.

ಸದಸ್ಯ ಹಾಗೂ ಬಿಜೆಪಿ ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ್ ಮಾತನಾಡಿ, ಪೈ ಉಲ್ಲೇಖಿಸಿರುವ 15ಸದಸ್ಯರು ಯಾರು ಎಂದು ಹೆಸರು ಹೇಳಲಿ. ಇಲ್ಲದೇ ಹೋದಲ್ಲಿ ಎಲ್ಲರೂ ಸೇರಿ ಕಾನೂನು ಹೋರಾಟ ಮಾಡುತ್ತೇವೆ ಎಂದರು.

ಸದಸ್ಯ ಖಾದರ್ ಆನವಟ್ಟಿ ಮಾತನಾಡಿ, ಕೆಲವೊಮ್ಮೆ ಅನಿವಾರ್ಯ ಆದಾಗ ಜನರ ಕೆಲಸಕ್ಕಾಗಿ ರಾತ್ರಿ 9 ಗಂಟೆಗೂ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಅದನ್ನು ಇವರಿಗೆ ಬೇಕಾದ ರೀತಿ, ರಾಜಕೀಯಕ್ಕಾಗಿ ಟೀಕೆ ಮಾಡಬಾರದು. ಪೈ ತಮ್ಮ ಹೇಳಿಕೆ ಹಿಂಪಡೆದು ಎಲ್ಲಾ ಸದಸ್ಯರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

300x250 AD

ಈ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ್ ಬೋರ್ಕರ್ ಹಾಗೂ ಚುನಾವಣೆ ಆಯ್ಕೆಯಾದ ಸದಸ್ಯರು, ನಾಮನಿರ್ದೇಶಿತ ಸದಸ್ಯರುಗಳು ಇದ್ದರು.‌

ಖೋಟ್ :
ಉಪೇಂದ್ರ ಪೈ ಅವರ ಕಟ್ಟಡಕ್ಕೆ ಸಂಬಂಧಿಸಿ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರಸಭೆ ನೊಟೀಸ್ ಹೊರತಾಗಿಯೂ ಅದನ್ನು ಅಕ್ರಮವಾಗಿ ನಡೆಸಲಾಗುತ್ತಿದೆ.– ಪ್ರದೀಪ ಶೆಟ್ಟಿ, ಮಾಜಿ ಅಧ್ಯಕ್ಷ.

ಬಾಕ್ಸ :

ಶಿರಸಿ ನಗರಸಭೆ ಸದಸ್ಯರ ಕುರಿತು ಆರೋಪ ಮಾಡಿರುವ ಉಪೇಂದ್ರ ಪೈ ಅವರಿಗೆ ಸೇರಿರುವ ಕಟ್ಟಡ ಸಿಪಿ ಬಝಾರದಲ್ಲಿದೆ. ಅದರಲ್ಲಿ ಪಾರ್ಕಿಂಗ್ ಕಟ್ಟಡ ಇಲ್ಲ ಎಂದು ಹಾಗೂ ಇನ್ನಿತರ ವಿಷಯಗಳಿಗೆ ಈಗಾಗಲೇ ಎರಡು ಬಾರಿ ನೊಟೀಸ್ ಮಾಡಲಾಗಿದೆ. ಆದರೂ ಸಹ ಅದನ್ನು ನಡೆಸಲಾಗುತ್ತಿದೆ. ನಗರಸಭೆ ಹೇಳಿದ ಬದಲಾವಣೆಯನ್ನೂ ಮಾಡಿಲ್ಲ ಎಂದು ಮಾಜಿ ಅಧ್ಯಕ್ಷ ಗಣಪತಿ ನಾಯ್ಕ ತಿಳಿಸಿದರು. ಅವರ ಅವಧಿಯಲ್ಲೇ ನೊಟೀಸ್ ನೀಡಿದ್ದರು ಎಂಬುದು ಉಲ್ಲೇಖನೀಯ.

Share This
300x250 AD
300x250 AD
300x250 AD
Back to top