Slide
Slide
Slide
previous arrow
next arrow

ಕೋಲಸಿರ್ಸಿಯಲ್ಲಿ ಏಳು ದಿವಸಗಳ ಆಯುರ್ವೇದ ಶಿಬಿರ

300x250 AD

ಸಿದ್ದಾಪುರ; ಆಪ್ತಸ್ ಆಯುರ್ವೇದ, ವಿಶ್ವ ಆಯುರ್ವೇದ ಪರಿಷದ್, ಧನ್ವಂತರಿ ಆಯುರ್ವೇದ ಕಾಲೇಜು ಸಿದ್ದಾಪುರ ಇವರುಗಳು ಆಯೋಜಿಸಿದ್ದ “ಆಯುರ್ಗ್ರಾಮ 2.0” ಎಂಬ ಏಳು ದಿನಗಳ ಆಯುರ್ವೇದ ಶಿಬಿರ ಶುಕ್ರವಾರ ಕೋಲಸಿರ್ಸಿ ಗ್ರಾಮದಲ್ಲಿ ಉದ್ಘಾಟಿಸಲ್ಪಟ್ಟಿತು.

ಆಚಾರ್ಯ ಚರಕರ ಭಾವಚಿತ್ರ ಮತ್ತು ಚರಕ ಸಂಹಿತೆ ಮೂಲ ಪುಸ್ತಕವನ್ನು ಸಾಂಪ್ರದಾಯಿಕವಾಗಿ ತಂದು, ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ನಾಂದಿ ಹಾಡಲಾಯಿತು. ಕೋಲಸಿರ್ಸಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಹೇಮಾವತಿ ಗೌಡರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ.ಪಂ.ಉಪಾಧ್ಯಕ್ಷೆ ಶ್ರೀಮತಿ ಶ್ವೇತಾ ನಾಯ್ಕ, ಸದಸ್ಯರಾದ ವಿನಾಯಕ ನಾಯ್ಕ, ಗೋವಿಂದ ನಾಯ್ಕ, ಪಿಡಿಒ ಸುಬ್ರಮಣ್ಯ ಹೆಗಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಪ್ರೊ.ಡಾ.ಅನುರಾಧಾ ಕೆ.ಸಿ. ಆಚಾರ್ಯ ಚರಕರ ಕುರಿತು ಮಾತನಾಡಿ ಆಯುರ್ವೇದದ ಹಿರಿಮೆ ಕುರಿತು ವಿವರಿಸಿದರು. ಡಾ. ಬನಶಂಕರಿ ಎಚ್.ಎಲ್. ಶಿಬಿರದ ಉದ್ದೇಶ ಮತ್ತು ವಿಶೇಷತೆ ಬಗ್ಗೆ ಮಾತನಾಡಿದರು. ಟೀಮ್‌ಹೆಡ್ ಶ್ರೀಕುಮಾರ ಚರಕ ಸಂಹಿತೆಯನ್ನು ಸಾಂಪ್ರದಾಯಿಕವಾಗಿ ತಂದರು. ಶ್ರೀಯಾ ಸಂಗಡಿಗರು ಪ್ರಾರ್ಥಿಸಿದರು. ಕುಮಾರಿ ಪಲ್ಲವಿ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top