Slide
Slide
Slide
previous arrow
next arrow

ವೈದ್ಯರಾದಂತವರು ಸದಾಕಾಲ‌ ಸೇವೆ ನೀಡುವ ಮನೋಭಾವದಲ್ಲಿರಬೇಕು: ಡಾ.ಡಿ.ಡಿ.ನಾಯ್ಕ್

300x250 AD

ಕುಮಟಾ: ರೋಟರಿ ಕ್ಲಬ್ ಹಾಗೂ ವಿಧಾತ್ರಿ ಅಕಾಡೆಮಿಯ ಸಹಯೋಗದಲ್ಲಿ ಇಲ್ಲಿನ ನಾದಶ್ರೀ ಕಲಾಕೇಂದ್ರದಲ್ಲಿ ನಡೆದ ರೋಟರಿ ವಾರದ ಸಭೆಯಲ್ಲಿ ಕುಮಟಾ ತಾಲ್ಲೂಕಿನ ರೋಟರಿಯನ್ ಡಾಕ್ಟರ್ ಗಳಿಗೆ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಗಳಿಗೆ ಡಾಕ್ಟರ್ಸ್ ಡೇ ಮತ್ತು ಚಾರ್ಟರ್ಡ್ ಅಕೌಂಟೆಂಟ್ಸ್ ಡೇ ನಿಮಿತ್ತ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

“ಡಾಕ್ಟರ್‌ಗಳ ಕೆಲಸ ಸಾಮಾನ್ಯ ಕೆಲಸವಲ್ಲ. ಅವರು ದಿನದ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ಸೇವೆಯನ್ನು ಒದಗಿಸುವ ಮನಸ್ಸಿನಲ್ಲಿಯೇ ಇರಬೇಕಾಗುತ್ತದೆ. ಕುಮಟಾದ ವೈದ್ಯರುಗಳು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ರೋಗವನ್ನು ಗುಣಪಡಿಸುವ ಕಾರ್ಯವನ್ನು ನಿರಂತರವಾಗಿ, ನಿಸ್ವಾರ್ಥವಾಗಿ ಮಾಡುತ್ತಾ ಬಂದಿದ್ದಾರೆ. ಡಾಕ್ಟರ್‌ಗಳ ಸೇವೆಯನ್ನು ಗುರುತಿಸಿ ರೋಟರಿ ಕ್ಲಬ್ ಹಾಗೂ ವಿಧಾತ್ರಿ ಅಕಾಡೆಮಿಯವರು ಗೌರವಿಸುತ್ತಿರುವುದು ಅವರ ಜನಪರ ಕಾಳಜಿಗೆ ಹಿಡಿದ ಕೈ ಗನ್ನಡಿಯಾಗಿದೆ” ಎಂದು ಹಿರಿಯ ವೈದ್ಯರಾದ ಡಾ. ಡಿ. ಡಿ. ನಾಯ್ಕ್ ಇವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.

ಇನ್ನೋರ್ವ ಖ್ಯಾತ ವೈದ್ಯರಾದ ಹೈಟೆಕ್ ಆಸ್ಪತ್ರೆಯ ಡಾ. ನಿತೀಶ ಶಾನಭಾಗ ಅವರು ಗೌರವ ಸ್ವೀಕರಿಸಿ ಮಾತನಾಡುತ್ತಾ “ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿಧಾತ್ರಿ ಅಕಾಡೆಮಿಯು ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸಹಭಾಗಿತ್ವದಲ್ಲಿ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ರೋ. ಗುರುರಾಜ ಶೆಟ್ಟಿಯವರ ನೇತೃತ್ವದಲ್ಲಿ ಮುನ್ನಡೆಯುತ್ತಿದ್ದು, ಕುಮಟಾ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತ ಬಂದಿದೆ. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳ ಸಾಧನೆ ಜನಮೆಚ್ಚುವಂತಾಗಿದೆ, ಹಾಗೆಯೇ ರೋಟರಿ ಕ್ಲಬ್ ನ ಸೇವಾ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ವಿಧಾತ್ರಿ ಹಾಗೂ ರೋಟರಿ ಕ್ಲಬ್ ನ ಸೇವಾ ಕಾರ್ಯಗಳು ಹೀಗೆ ನಿರಂತರವಾಗಿ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.

ರೋಟರಿ ಕ್ಲಬ್ ಕುಮಟಾ ಶಾಖೆಯ ಅಧ್ಯಕ್ಷರಾದ ಅತುಲ್ ಕಾಮತ್, ಕಾರ್ಯದರ್ಶಿಯಾದ ವಿನಾಯಕ ಹೆಗಡೆ, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಗುರುರಾಜ ಶೆಟ್ಟಿಯವರು ಡಾಕ್ಟರ್‌ಗಳಿಗೆ ಹಾಗೂ ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಸನ್ಮಾನ ಕಾರ್ಯವನ್ನು ನೆರವೇರಿಸಿದರು.

300x250 AD

ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟ ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಗುರುರಾಜ ಶೆಟ್ಟಿಯವರು ಮಾತನಾಡಿ, ಚಾರ್ಟರ್ಡ್ ಅಕೌಂಟೆಂಟ್ ಗಳು ಆರ್ಥಿಕತೆಯ ಬೆನ್ನೆಲುಬು ಎಂದು ಹೇಳಬಹುದು, ಅವರ ಮಾರ್ಗದರ್ಶನ ಸದಾಕಾಲವೂ ಒಬ್ಬ ವ್ಯಕ್ತಿ, ಸಂಸ್ಥೆ, ಉದ್ಯಮ, ಹೀಗೆ ವಿವಿಧ ಕ್ಷೇತಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಹಾಗೇ ಜೀವರಕ್ಷಕರಾದ ವೈದ್ಯರುಗಳ ಸೇವಾ ಕಾರ್ಯ ದೇವರಿಗೆ ಸಮಾನವಾದ್ದು. ಈ ಸಂದರ್ಭದಲ್ಲಿ ಇಂತವರನ್ನು ಗೌರವಿಸುವುದು ನಮ್ಮ ಸೌಭಾಗ್ಯ ಎಂದೆ ಭಾವಿಸಿಕೊಳ್ಳುತ್ತೇವೆ.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕುಮಟಾದ ಖಜಾಂಚಿ, ಹಾಗೂ ಎಲ್ಲಾ ಸದಸ್ಯರು ಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top