ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ನಡೆದ ವೈದ್ಯರ ದಿನಾಚರಣೆ
ಹೊನ್ನಾವರ: ವೈದ್ಯರುಗಳು ದೇವರಲ್ಲ. ನಾವು ನಿಮ್ಮಂತೆ ಇದೇ ಸಮಾಜದಿಂದ ಬಂದವರು. ನಾವು ನಿಮ್ಮ ಹಾಗೇ ಜನಸಾಮನ್ಯರು.ಇವತ್ತು ವೈದ್ಯಕೀಯ ಕ್ಷೇತ್ರ ಕಾರ್ಪೋರೇಟ್ ಶೈಲಿಯಲ್ಲಿ ಬದಲಾಗುತ್ತಿರುವದರಿಂದ ಸೇವಾ ಮನೋಭಾವ ಕಡಿಮೆಯಾಗುತ್ತಿದೆ ಎಂದು ಸ್ತೀ ರೋಗ ತಜ್ಞರಾದ ಡಾ|| ಕೃಷ್ಣಾ ಜಿ ಹೇಳಿದರು.
ಅವರು ಹೊನ್ನಾವರ ತಾಲೂಕ ಆಸ್ಪತ್ರೆಯಲ್ಲಿ ನಡೆದ ವೈದ್ಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಹೃದಯ ತಜ್ಞರಾದ ಡಾ|| ಪ್ರಕಾಶ ನಾಯ್ಕ ಮಾತನಾಡುತ್ತ, ವೈದರ ಉತ್ತಮ ಸೇವೆಯಲ್ಲಿ ಎಲ್ಲ ಸಿಬ್ಬಂದಿಗಳ ಸಹಕಾರ ಮುಖ್ಯವಾಗಿರುತ್ತದೆ. ಹೊನ್ನಾವರ ಆಸ್ಪತ್ರೆ ಇವತ್ತು ಉತ್ತಮ ಸೇವೆ ನೀಡಲು ಎಲ್ಲರ ಸಹಕಾರವೇ ಕಾರಣವಾಗಿದೆ ಎಂದರು. ಚರ್ಮ ರೋಗ ತಜ್ಷರಾದ ಡಾ|| ಶಿವಾನಂದ ಹೆಗಡೆ ಮಾತನಾಡಿ ನಕಾರಾತ್ಮಕ ಅಂಶಗಳ ಕಡೆ ಗಮನ ನೀಡದೇ ಕಾರ್ಯನಿರ್ವಹಿಸುವುದರಿಂದ ಉತ್ತಮ ಸೇವೆ ನೀಡಲು ಸಾದ್ಯ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಡಳಿತ ವೈದ್ಯಾಧಿಕಾರಿ ಡಾ|| ರಾಜೇಶ ಕಿಣಿ ಮಾತನಾಡಿ, ಎಲ್ಲರ ಸಹಕಾರದಿಂದ ಕಾರ್ಯನಿರ್ವಹಿಸಿದರ ಫಲವಾಗಿ ಈ ವರ್ಷ ತಾಲೂಕ ಆಸ್ಪತ್ರೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಇದು ಎಲ್ಲರಿಗೂ ಸಂತೋಷ ತರುವ ವಿಚಾರ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಡಾ|| ಮಹೇಶ, ಡಾ|| ಅನುರಾಧ, ಡಾ|| ಪ್ರಶಾಂತ ನಾಯ್ಕ,ಡಾ|| ಗುರುದತ್ತ ಕುಲಕರ್ಣಿ, ಡಾ|| ಮಂಜು ಸೇರಿದಂತೆ ಎಲ್ಲ ವೈದ್ಯಾಧಿಕಾರಿಗಳು, ಆಡಳಿತ ಸಹಾಯಕಾಧಿಕಾರಿ ಶ್ರೀಮತಿ ಶಶಿಕಲಾ ನಾಯ್ಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶುಶ್ರೂಷಾಧಿಕಾರಿಗಳಾದ ಶ್ರೀಮತಿ ಪಾರ್ವತಿ ನಾಯ್ಕ ಪ್ರಾಸ್ತವಿಕ ನುಡಿಗಳ್ನಾಡಿದರೆ,ಶ್ರೀಮತಿ ಮಂಗಲಾ ನಾಯ್ಕ ವೈದ್ಯರು ಕುರಿತು ರಚಿಸಿದ ಹಾಡನ್ನು ಹಾಡಿದರು. ಶ್ರೀಮತಿ ಸ್ವೀಟಾ ಫರ್ನಾಂಡಿಸ್ ವಂದಿಸಿದರು. ಕ್ಷಕಿರಣ ತಂತ್ರಜ್ಞರಾದ ಚಂದ್ರಶೇಖರ ಕಳಸರವರು ಎಲ್ಲರನ್ನು ಸ್ವಾಗತಿಸಿದರು.ಆಸ್ಪತ್ರೆಯ ಎಲ್ಲ ಸಿಬ್ಬಂಧಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.