ಕಾರವಾರ: ಉತ್ತರ ಕನ್ನಡ ಪೋಲೀಸ್ ವರಿಷ್ಠಾಧಿಕಾರಿಯಾಗಿ ಎಂ. ನಾರಾಯಣ್ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಈ ಹಿಂದೇ ಎಸ್ಪಿಯಾಗಿದ್ಧ ವಿಷ್ಣುವರ್ಧನ ಅವರನ್ನು ಮೈಸೂರು ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಎಂ. ನಾರಾಯಣ ಈ ಹಿಂದೆ ಭಟ್ಕಳ ವ್ಯಾಪ್ತಿಯಲ್ಲಿ ಡಿವೈಎಸ್ಪಿಯಾಗಿ ಕೆಲಸ ನಿರ್ವಹಿಸಿದ್ದು, ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಆಪ್ತ ವಲಯಕ್ಕೆ ಸೇರಿದವರು ಎನ್ನಲಾಗಿದೆ. ಈ ಹಿಂದಿನ ಎಸ್ಪಿ ವಿಷ್ಣುವರ್ಧನ ಖಡಕ್ ಆಫೀಸರ್ ಆಗಿದ್ದು, ಜನಪರ ಕೆಲಸಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಆದರೆ ಕಳೆದ ಕೆಲ ತಿಂಗಳಿನಿಂದ ಉಸ್ತುವಾರಿ ಸಚಿವ ವೈದ್ಯ ಹಾಗು ಎಸ್ಪಿ ವಿಷ್ಣುವರ್ಧನ ನಡುವೆ ಅಂತರ ಹೆಚ್ಚಾಗಿತ್ತು ಎನ್ನಲಾಗಿದ್ದ ಮಾತಿಗೆ ಇದೀಗ ಪುಷ್ಟಿ ನೀಡಿದೆ.