Slide
Slide
Slide
previous arrow
next arrow

ಡೆಂಗಿಜ್ವರ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ : ಸತೀಶ್ ಸೈಲ್

300x250 AD

ಕಾರವಾರ: ಡೆಂಗಿ ಜ್ವರ ನಿಯಂತ್ರಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಈಡಿಸ್ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶ ಪಡಿಸಿ , ಡೆಂಗಿ ಜ್ವರ ಹರಡದಂತೆ ಮುಂಜಾಗ್ರತೆ ವಹಿಸಬೇಕೆಂದು ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ ಸತೀಶ ಕೆ.ಸೈಲ್ ಹೇಳಿದರು.

ಅವರು ಗುರುವಾರ ಕೋಡಿಬೀರ್ ದೇವಸ್ಥಾನದ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಲಾದ ಈಡಿಸ್ ಉತ್ಪತ್ತಿ ತಾಣ ನಾಶ ಚಟುವಟಿಕೆಗೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯ ಸಚಿವರು ಬಾಗಲಕೋಟೆ ಹಾಗೂ ವಿಜಯಪುರದಲ್ಲಿ ರಾಜ್ಯಾದ್ಯಂತ ‘ಈಡಿಸ್ ಲಾರ್ವಾ ಉತ್ಪತ್ತಿ ತಾಣ ನಾಶ ಚಟುವಟಿಕೆ’ ಗೆ ಚಾಲನೆ ನೀಡಲಿದ್ದು, ಮಳೆಗಾಲದಲ್ಲಿ ಸೊಳ್ಳೆಗಳಿಂದ ಹೆಚ್ಚಿನ ರೋಗಗಳು ಹರಡುವ ಸಾದ್ಯತೆ ಇದೆ. ಆದ್ದರಿಂದ ಚರಂಡಿ ಸ್ವಚ್ಛತೆ ಮಾಡುವುದು, ಮನೆಯ ಹತ್ತಿರ ನೀರು ನಿಲ್ಲದೇ ಹಾಗೇ ನೋಡಿಕೊಳ್ಳುವುದು, ಕುಡಿಯುವ ನೀರು ಕಲುಷಿತವಾಗದಂತೆ ಕಾಪಾಡಿಕೊಳ್ಳುವುದರಿಂದ ರೋಗಗಳನ್ನು ನಿಯಂತ್ರಿಸಬಹುದು ಎಂದರು.
ತಾಲೂಕಿನಲ್ಲಿ ಬಿಣಗಾ, ಕೈಗಾ, ಕೋಣೆನಾಲ, ಕೋಡಿಬೀರ್ ಮುಂತಾದ ಪ್ರದೇಶಗಳಲ್ಲಿನ ಸಾರ್ವಜನಿಕರು ಕಲುಷಿತ ನೀರು ಕುಡಿಯುತ್ತಿದ್ದು, ಇದರಿಂದಾಗಿ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತವೆ ಆದ್ದರಿಂದ ಪ್ರದೇಶಗಳ ಕಲುಷಿತ ನೀರನ್ನು ಪರೀಕ್ಷೆಗೆ ಕಳುಹಿಸಲು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಹೇಳಿದರು.
ಕಾರ್ಯಕ್ರಮದ ಅಂಗವಾಗಿ, ಮನೆ ಮನೆಗೆ ತೆರಳಿದ ಶಾಸಕರು, ಮನೆಯ ಸುತ್ತಮುತ್ತ, ಮನೆಯ ಒಳಗೆ, ವಾಷಿಂಗ್ ಮಿಷಿನ್, ಫ್ರಿಡ್ಜ್ , ಡ್ರಂ, ಪರೀಕ್ಷಿಸಿ ಡೆಂಗ್ಯು ಜ್ವರ ಲಕ್ಷಣ ಹರಡುವ ಬಗ್ಗೆ ಹಾಗೂ ಹೇಗೆ ನಿಯಂತ್ರಣ ಮಾಡಬೇಕೇಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ, ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ರಮೇಶ್ ರಾವ್, ತಾಲೂಕು ಆರೊಗ್ಯ ಅಧಿಕಾರಿ ಸೂರಜ್ ನಾಯಕ,, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಟರಾಜ್ ಕೆ, ನಗರ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಗುಫ್ ಸೈಯದ್, ನಗರ ಸಭೆಯ ಪೌರಾಯುಕ್ತ ಕೆ. ಚಂದ್ರಮೌಳಿ, ನಗರಸಭೆಯ ಮಾಜಿ ಅಧ್ಯಕ್ಷ ಡಾ. ನಿತೀನ್ ಪಿಕಳೆ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಮತ್ತಿತರರಿದ್ದರು.

300x250 AD
Share This
300x250 AD
300x250 AD
300x250 AD
Back to top