Slide
Slide
Slide
previous arrow
next arrow

ಬ್ಯಾಂಕ್ ಸಿಬ್ಬಂದಿಯಿಂದ ಗ್ರಾಹಕನ ಮೇಲೆ ಹಲ್ಲೆ: ದೂರು,‌ಪ್ರತಿದೂರು ದಾಖಲು

300x250 AD

ಭಟ್ಕಳ: ಸಾಲ ವಸೂಲಿಗೆ ತೆರಳಿದ ಸೇಂಟ್ ಮಿಲಾಗ್ರೀಸ್ ಸಿಬ್ಬಂದಿ ಸಾಲಗಾರನಿಗೆ ಕೆಟ್ಟ ಶಬ್ದದಿಂದ ಬೈದು, ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಭಟ್ಕಳದ ನೀಲಾವರ ಲಾಡ್ಜ್ ಎದುರಿನ ಚಾಲುಕ್ಯ ಬಸ್ ಕಚೇರಿಯಲ್ಲಿ ನಡೆದಿದೆ.

ಭಟ್ಕಳದ ಚಾಲುಕ್ಯ ಬಸ್ ಕಚೇರಿಯ ವ್ಯವಸ್ಥಾಪಕ ಈಶ್ವರ ದುರ್ಗಪ್ಪ ನಾಯ್ಕ ಹಲ್ಲೆಗೊಳಗಾದವರು. ಸೆಂಟ್ ಮಿಲಾಗ್ರೀಸ್‌ನ ಸಿಬ್ಬಂದಿ ಅಜಯ ವೆಂಕಟೇಶ ನಾಯ್ಕ, ರಾಜೇಶ ಮಾದೇವ ನಾಯ್ಕ, ಕೀರ್ತಿರಾಜ ಪಾಂಡುರಂಗ ಶಿರಾಲಿ, ದೇವೇಂದ್ರ ಕುಪ್ಪ ನಾಯ್ಕ, ರೋಹಿತ ಸುರೇಶ ಮೊಗೇರ, ನಾಗರಾಜ ಪರಮೇಶ್ವರ ದೇವಾಡಿಗ ಹಲ್ಲೆ ಮಾಡಿದ ಆರೋಪಿಗಳಾಗಿದ್ದಾರೆ.

ಹಲ್ಲೆಗೊಳಗಾದ ಈಶ್ವರ ನಾಯ್ಕ ಸೆಂಟ್ ಮಿಲಾಗ್ರೀಸ್ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಂಡಿದ್ದರು. ಕೌಟುಂಬಿಕ ಕಾರಣದಿಂದ ಸಾಲದ ಹಣವನ್ನು ತುಂಬದೇ ಬಾಕಿ ಇತ್ತು. ೧೫ ದಿನಗಳ ಹಿಂದೆ ಬ್ಯಾಂಕಿನ ಸಿಬ್ಬಂದಿಯವರು ಸಾಲವನ್ನು ತುಂಬಲು ಹೇಳಿದಾಗ ಸಾಲದ ಪೂರ್ತಿ ಹಣವನ್ನು 2 ತಿಂಗಳಲ್ಲಿ ತುಂಬಿ ಕೊಡುವುದಾಗಿ ಕಾಲಾವಕಾಶ ಪಡೆದುಕೊಂಡಿದ್ದರು. ಆದರೆ ಜೂನ್ ೨೭ ಗುರುವಾರ ಸಂಜೆಗೆ ಆರೋಪಿತರು ಚಾಲುಕ್ಯ ಬಸ್ಸಿನ ಕಚೇರಿಯ ಒಳಗಡೆ ಬಂದು ಈಶ್ವರ ನಾಯ್ಕರಿಗೆ ಪ್ರಶ್ನೆ ಮಾಡಿದ್ದಾರೆ. ಸಾಲದ ಪೂರ್ತಿ ಹಣ ತುಂಬುವ ಯೋಗ್ಯತೆ ಇಲ್ಲವಾದರೆ ನಮ್ಮ ಬ್ಯಾಂಕಿನಲ್ಲಿ ಯಾಕೆ ಸಾಲ ಮಾಡಿದ್ದೀರಿ ಎಂದು ಕೇಳಿದ್ದಾರೆ. ಆಗ ಈಶ್ವರ ನಾಯ್ಕ, ಸಾಲವನ್ನು ತೀರಿಸಲು ತಮ್ಮ ಬಳಿಗೆ ಎರಡು ತಿಂಗಳ ಕಾಲಾವಕಾಶ ಕೇಳಿದ್ದೇನೆ. ಈಗ ಪೂರ್ತಿ ಹಣ ತುಂಬಲು ಹೇಳಿದರೆ ನನ್ನ ಬಳಿ ಹಣ ಇಲ್ಲ ಎಂದು ಹೇಳಿದ್ದಾರೆ. ಆರೋಪಿತರು ಸಾಲವನ್ನು ತೀರಿಸಲು ‘ಯೋಗ್ಯತೆ ಇಲ್ಲವಾದರೆ ಹುಲಿಯ ವೇಷ ಹಾಕಿ ಹಣವನ್ನು ಬೇಡಿ ತೀರಿಸು ಎಂದು ಕೆಟ್ಟ ಶಬ್ದಗಳಿಂದ ಬೈದ್ದಿದ್ದಲ್ಲದೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಈಶ್ವರ ನಾಯ್ಕ ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಈಶ್ವರ ನಾಯ್ಕ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

300x250 AD

ದೂರಿಗೆ ಪ್ರತಿ ದೂರು ದಾಖಲು:

ಈಶ್ವರ ನಾಯ್ಕ ನೀಡಿದ ದೂರಿಗೆ ಪ್ರತಿಯಾಗಿ ಸೇಂಟ್ ಮಿಲಾಗ್ರೀಸ್ ಸಿಬ್ಬಂದಿ ಪ್ರತಿ ದೂರು ದಾಖಲಿಸಿದ್ದಾರೆ. ಲೋನ್ ರಿಕವರಿಗೆ ಹೋದ ವೇಳೆ ಗ್ರಾಹನೋರ್ವ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಶ್ವರ ದುರ್ಗಪ್ಪ ನಾಯ್ಕ, ನಗೀನ ಶೆಟ್ಟಿ ಹಾಗೂ ನಾಗೇಶ ನಾಯ್ಕ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಸೇಂಟ್ ಮಿಲಾಗ್ರಿಸ್ ಸೊಸೈಟಿ ಕ್ರೆಡಿಟ್ ಸೌಹಾರ್ದ ಸಿಬ್ಬಂದಿ ಕೀರ್ತಿರಾಜ ಪಾಂಡುರಂಗ ಶಿರಾಲಿ ಲೋನ್ ರಿಕವರಿ ಅಧಿಕಾರಿಗಳೊಂದಿಗೆ ಈಶ್ವರ ನಾಯ್ಕ ಬಳಿ ಹೋಗಿದ್ದರು. ಗುರುವಾರ ಸಂಜೆ ನೀಲಾವರ ಲಾಡ್ಜ್ ಎದುರುಗಡೆ ಚಾಲುಕ್ಯ ಬಸ್ ಕಚೇರಿಯ ಒಳಗಡೆ ಈಶ್ವರ ನಾಯ್ಕ ಬಳಿ ಲೋನ್ ರಿಕವರಿಗೆ ಹೋಗಿದ್ದರು. ಈ ಸಮಯದಲ್ಲಿ ಅಲ್ಲಿಯೇ ಇದ್ದ ಕುಠಾರಿಯಿಂದ ಕೀರ್ತಿ ರಾಜನನ್ನು ಹೊಡೆದು ಅವ್ಯಾಚ್ಯ ಶಬ್ದಗಳಿಂದ ಬೈದಿರುವುದಾಗಿ ಆರೋಪಿಸಲಾಗಿದೆ. ನಿಮ್ಮ ಬ್ಯಾಂಕಿಗೆ ಸಾಲ ವಾಪಸು ನೀಡುವುದಿಲ್ಲ. ನೀವು ಎನು ಮಾಡಿಕೊಳ್ಳುತ್ತೀರಾ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Share This
300x250 AD
300x250 AD
300x250 AD
Back to top