Slide
Slide
Slide
previous arrow
next arrow

ಇಂಟರ್‌ನ್ಯಾಷನಲ್ ಒಲಂಪಿಯಾಡ್ ಪರೀಕ್ಷೆ: ಬೀನಾ ವೈದ್ಯ ಪಬ್ಲಿಕ್ ಸ್ಕೂಲ್ ಅಪೂರ್ವ ಸಾಧನೆ

300x250 AD

ಭಟ್ಕಳ : 2023-24ನೇ ಶೈಕ್ಷಣಿಕ ವರ್ಷದಲ್ಲಿ ನವದೆಹಲಿಯ ‘ಸಿಲ್ವರ್ ಝೋನ್ ಫೌಂಡೇಶನ್’ ಏಷ್ಯಾ ಖಂಡದಾದ್ಯಂತ ಆಯೋಜಿಸಿದ ‘ವರ್ಲ್ಡ್ ಬಿಗ್ಗೆಸ್ಟ್ ಇಂಟರ್‌ನ್ಯಾಷನಲ್ ಒಲಂಪಿಯಾಡ್’ ಪರೀಕ್ಷೆಯಲ್ಲಿ ಮುರುಡೇಶ್ವರದ ಬೀನಾ ವೈದ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಅತ್ಯುನ್ನತ ಸಾಧನೆ ಮಾಡಿದೆ. ‘ಸಿಲ್ವರ್ ಝೋನ್ ಎಕ್ಸಲೆನ್ಸ್ ಸ್ಕೂಲ್ ಪರ್ಫಾರ್ಮೆನ್ಸ್ ಅವಾರ್ಡ್ 2023-24 ಹಾಗೂ ‘ಒಲಂಪಿಯಾಡ್ ವಿನ್ನರ್ 2023-24ರ ಪ್ರತಿಷ್ಠಿತ ಪ್ರಶಸ್ತಿಗಳನ್ನು ಏಷ್ಯಾ ಖಂಡದ ಸ್ಕೂಲ್‌ಗಳೊಂದಿಗೆ ಸ್ಪರ್ಧಿಸಿ ತನ್ನದಾಗಿಸಿಕೊಂಡಿದೆ.

2023-24ರ ಸಿಲ್ವರ್ ಝೋನ್ ಒಲಂಪಿಯಾಡ್ ಪರೀಕ್ಷೆಯನ್ನು ಮುರುಡೇಶ್ವರದ ಬೀನಾ ವೈದ್ಯ ಶಾಲೆಯ ಒಟ್ಟು 184 ವಿದ್ಯಾರ್ಥಿಗಳು ಬರೆದಿದ್ದಾರೆ. ಅದರಲ್ಲಿ 103 ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಪಡೆದಿದ್ದಾರೆ. 76 ವಿದ್ಯಾರ್ಥಿಗಳು ಬೆಳ್ಳಿಯ ಪದಕ ಮತ್ತು 5ವಿದ್ಯಾರ್ಥಿಗಳು ಕಂಚಿನ ಪದಕ ಪಡೆದಿದ್ದಾರೆ. ಶಾಲೆಯ ಎರಡು ವಿದ್ಯಾರ್ಥಿಗಳು ನಗದು ಬಹುಮಾನದಿಂದ ಪುರಸ್ಕೃತರಾಗಿದ್ದಾರೆ. 83ವಿದ್ಯಾರ್ಥಿಗಳು ದ್ವಿತೀಯ ಹಂತದ ಸಿಲ್ವರ್ ಝೋನ್ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ

300x250 AD

ಶಿಕ್ಷಕಿಯರಾದ ವಿದ್ಯಾ ನಾಯ್ಕ ‘ಎಕ್ಸಲೆಂಟ್ ಎಕ್ಸಾಮ್ ಇನ್‌ಚಾರ್ಜರ್’ ಮತ್ತು ಕಾಮಾಕ್ಷಿ ಪ್ರಭು ‘ಬೆಸ್ಟ್ ಸೂಪರ್‌ವೈಸರ್’ ಪ್ರಶಸ್ತಿ ಪಡೆದಿದ್ದಾರೆ. ಶಿಕ್ಷಕಿಯರಾದ ರಂಜಿತಾ ನಾಯ್ಕ ಹಾಗೂ ಶ್ವೇತಾ ಮೊಗೇರ ‘ಬೆಸ್ಟ್ ಕೊರ್ಡಿನೇಟರ್’ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಶಾಲೆಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಮಂಕಾಳ ವೈದ್ಯ, ಸಂಸ್ಥೆಯ ಟ್ರಸ್ಟಿ ಹಾಗೂ ನಿರ್ದೇಶಕಿ ಡಾ.ಪುಷ್ಪಲತಾ ಮಂಕಾಳ ವೈದ್ಯ, ಪ್ರಾಂಶುಪಾಲ ಡಾ.ಜಗನ್ನಾಥ ಗೊಂಡ, ಶಿಕ್ಷಕ ವೃಂದ, ಪಾಲಕರು ಹಾಗೂ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top