ಶಿರಸಿ: ಎಂಎಂ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯದ ಪ್ಲೇಸ್ಮೆಂಟ್ ಸೆಲ್ ಹಾಗೂ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಸಹಯೋಗದಲ್ಲಿ ಮಹಾವಿದ್ಯಾಲಯದ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಐಕ್ಯೂಎಸಿ ಸಂಚಾಲಕ ಪ್ರೊ. ಜಿ. ಟಿ. ಭಟ್ ಮಾತನಾಡಿ ಪದವಿ ಮುಗಿದ ನಂತರ ನೇರವಾಗಿ ಉದ್ಯೋಗ ಅರಸಿ ಹೋಗುವವರಿಗೆ ದೇಶಪಾಂಡೆ ಫೌಂಡೇಶನ್ ನ ಸ್ಕಿಲ್ ಪ್ಲಸ್ ಜಾಬ್ ನೆಕ್ಸ್ಟ್ ಅಡಿಯಲ್ಲಿ ನಡೆಯುವ ಕೌಶಲ್ಯ ತರಬೇತಿಯನ್ನು ಪಡೆದು ಉತ್ತಮ ಉದ್ಯೋಗವನ್ನು ಪಡೆದುಕೊಳ್ಳಬಹುದು. ಈಗಾಗಲೇ ಈ ಸಂಸ್ಥೆಯಿಂದ ಕೌಶಲ್ಯ ತರಬೇತಿ ಪಡೆದ 20ಕ್ಕೂ ಅಧಿಕ ಉದ್ಯೋಗ ಆಕಾಂಕ್ಷಿಗಳು ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ನೀವು ನಮ್ಮ ಮಹಾವಿದ್ಯಾಲಯದಲ್ಲಿರುವ ಈ ತರಬೇತಿ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಿ ಎಂದರು.
ನಂತರ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಯನ್ನು ಮಂಗೇಶ್ ಕುಲಕರ್ಣಿ, ಬಸವರಾಜ್ ಕುರಿ, ಭಾರತೀ ಎಚ್, ಅಕ್ಷತಾ ನೀಡಿದರು. ಪ್ಲೇಸ್ಮೆಂಟ್ ಸೆಲ್ ಸಂಚಾಲಕ ಕೆ ಎನ್ ರೆಡ್ಡಿ ಸ್ವಾಗತಿಸಿ, ವಂದಿಸಿದರು.