Slide
Slide
Slide
previous arrow
next arrow

ಜನತೆಯ ಸಂಕಷ್ಟದಲ್ಲಿ ಜೊತೆನಿಂತ ‘ಕೆಶಿನ್ಮನೆ’

300x250 AD

ಕರೋನಾದಲ್ಲಿ ರೈತರ ಕೈ ಹಿಡಿದಿದ್ದ ನಾಯಕತ್ವ | ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಕ್ಕೆ ಆದ್ಯತೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅದರಲ್ಲಿಯೂ ವಿಶೇಷವಾಗಿ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಹೈನುಗಾರಿಕೆ ವಿಫುಲಾಗಿ ನಡೆದುಕೊಂಡು ಬಂದಿದೆ. ರೈತರು ಕೃಷಿಗೆ ಪೂರಕವಾಗಿ ಸ್ಥಳೀಯ ಡೇರಿಗಳ ನೆರವಿನಿಂದ ಹೈನುಗಾರಿಕೆಯನ್ನು ನಡೆಸಿಕೊಂಡು ಬಂದಿದ್ದಾರೆ. ಸರಕಾರದಿಂದ ಎಷ್ಟೇ ಪ್ರಯತ್ನ ಪಟ್ಟರೂ ಸಹ ಹೈನುಗಾರಿಕೆ ಮಾಡುವವರ ಸಂಖ್ಯೆ ಇತ್ತಿಚೆಗೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಪರಿಸ್ಥಿತಿ ಹೀಗಿದ್ದಾಗ ಈ ಕ್ಷೇತ್ರದಿಂದ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗುವವರ ಜವಾಬ್ದಾರಿ ಹೆಚ್ಚಾಗಿಯೇ ಇರುತ್ತದೆ. ಈ ನಿಟ್ಟಿನಲ್ಲಿ ಸರಕಾರದ ಅನುಕೂಲ, ವಿವಿಧ ಕ್ಷೇತ್ರಗಳಿಂದ ಬರುವ ಅನುದಾನಗಳನ್ನು ರೈತರಿಗೆ ದೊರೆಯುವಂತೆ ಮಾಡುವಲ್ಲಿ ಒಕ್ಕೂಟದ ನಿರ್ದೇಶಕರ ಪಾತ್ರ ಮಹತ್ವದ್ದಾಗಿರುತ್ತದೆ. ಈ ವಿಷಯದಲ್ಲಿ ಕಳೆದೊಂದು ದಶಕದಲ್ಲಿ ಒಕ್ಕೂಟದ ಹಾಲಿ ನಿರ್ದೇಶಕ ಸುರೇಶ್ಚಂದ್ರ ಕೆಶಿನ್ಮನೆ ತಮ್ಮ ಬುದ್ಧಿವಂತಿಕೆ, ಅಧಿಕಾರ ಬಳಸಿ ಜನಪರ ಕಾರ್ಯ ಮಾಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಪಕ್ಷಾತೀತವಾಗಿ ರೈತರ ಮನಗೆದ್ದ ನಾಯಕತ್ವ:

ಚುನಾವಣೆಯಲ್ಲಿ ಜನರಿಂದ ಆಯ್ಕೆಯಾಗಿ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಬಹುತೇಕರದ್ದು ಸ್ವಭಾವವೇ ಬೇರೆ ಇರುತ್ತದೆ. ತಮ್ಮ ಕೆಲಸವಾದ ನಂತರ ಮತ್ತೆ ಮತದಾರರತ್ತ ಸುಳಿಯುವುದೇ ಇಲ್ಲ. ಆದರೆ ಸುರೇಶ್ಚಂದ್ರ ಕೆಶಿನ್ಮನೆ ಈ ವಿಷಯಕ್ಕೆ ಅಪವಾದವಾಗಿ ಕಾಣುತ್ತಾರೆ. ಹೈನುಗಾರರ ಧ್ವನಿಯಾಗುವುದರ ಜೊತೆಗೆ ಒಕ್ಕೂಟದ ಡೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಒಳಿತಿನ ಕುರಿತು ಕೆಲಸ ಮಾಡಿದ್ದಾರೆ. ಆ ಕಾರಣಕ್ಕಾಗಿಯೇ ಪಕ್ಷ ರಾಜಕೀಯ ಹೊರತಾಗಿ, ಸಾಮೂಹಿಕವಾಗಿ ಎಲ್ಲ ಪಕ್ಷದ ಮತದಾರರು ಸುರೇಶ್ಚಂದ್ರ ಕೆಶಿನ್ಮನೆ ಪರ ನಿಂತಿದ್ದಾರೆ. ತಮ್ಮ ಅವಧಿಯಲ್ಲಿ ಕೆಶಿನ್ಮನೆ ಮಾಡಿದ ಜನಪರ ಕಾರ್ಯಗಳೇ ಅವರಿಗೆ ಶ್ರೀರಕ್ಷೆಯಾಗಿದೆ.

ಹೈನುಗಾರರ ಪ್ರತಿಭಾವಂತ ಮಕ್ಕಳಿಗೆ ಕೆ.ಡಿ.ಸಿ.ಸಿ. ಬ್ಯಾಂಕ್‌ನಿಂದ ವಿದ್ಯಾರ್ಥಿ ವೇತನ ನೀಡಲಾಗಿದೆ. ಹಾಲು ಉತ್ಪಾದಕ ರೈತರ ಆಕಳು ಅಕಾಲಿಕ ಮರಣ ಹೊಂದಿದಕ್ಕೆ, ಹಾಲು ಉತ್ಪಾದಕರ ರೈತರು ಅನಾರೋಗ್ಯಕ್ಕೆ ಈಡಾದಾಗ ಸಹಾಯ ಧನವಾಗಿ ಒಟ್ಟೂ 5 ಲಕ್ಷದ 80 ಸಾವಿರಗಳನ್ನು ನೀಡಿದ್ದಾರೆ. ಅಪೆಕ್ಸ್‌ ಬ್ಯಾಂಕ್‌ನಿಂದ ಶಿರಸಿ ತಾಲೂಕಿನ ಆಯ್ದ ಹಾಲು ಸಂಘಗಳಿಗೆ ಒಟ್ಟೂ 5 ಲಕ್ಷಗಳನ್ನು ಹಾಗೂ ದಾನಿಗಳಿಂದ ಹಾಲು ಉತ್ಪಾದಕ ರೈತರಿಗೆ ಸ್ಟೀಲ್‌ ಕ್ಯಾನ್‌ಗಳು, ಹಾಲು ಸಂಘಗಳಿಗೆ ತೂಕದ ಯಂತ್ರ, ಗಣಕಯಂತ್ರ, ಕಪಾಟು ಹಾಗೂ ಟೇಬಲ್‌ಗಳನ್ನು ಈಗಾಗಲೇ ಒದಗಿಸಲಾಗಿದೆ.

ಕರೋನಾದ ಸಂಕಷ್ಟದ ಕಾಲದಲ್ಲಿ ರೈತರ ಕೈಹಿಡಿದಿದ್ದ ಸುರೇಶ್ಚಂದ್ರ ಕೆಶಿನ್ಮನೆ:

ಅತ್ಯಂತ ಬಹುಮುಖ್ಯವಾಗಿ ಕೋರೊನಾ ಸಾಂಕ್ರಾಮಿಕ ರೋಗ ಕಂಡುಬಂದ ಸಮಯದಲ್ಲಿ ಶಿರಸಿ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು, ಹಾಲು ಪರೀಕ್ಷಕರುಗಳಿಗೆ ಕೋರೊನಾ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸ್ವಂತ ಖರ್ಚಿನಲ್ಲಿ ಮಾಸ್ಕ್‌ ಹಾಗೂ ಸಾನಿಟೈಸರ್‌ಗಳನ್ನು ನೀಡಿದರು. ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಅತ್ಯಾವಶ್ಯಕ ಸೇವೆಗಳಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳೆಂದು ಪರಿಗಣಿಸಿ ತಾಲೂಕಾ ಆಡಳಿತದಿಂದ ಪಾಸ್‌ಗಳ ವ್ಯವಸ್ಥೆಯನ್ನು ಮಾಡಿದ್ದಾರೆ. ಇದರಿಂದಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳ ದಿನನಿತ್ಯದ ವ್ಯವಹಾರವನ್ನು ನಡೆಸಲು ಬ್ಯಾಂಕ್‌ ಹಾಗೂ ಸಹಕಾರ ಇಲಾಖೆಗೆ ಭೇಟಿ ನೀಡಿ ನೀಡುವ ಸಲುವಾಗಿ ಪಟ್ಟಣಕ್ಕೆ ಬರುವ ಸವಲತ್ತನ್ನು ಪಾಸ್‌ ವಿತಸಿರುವ ಮೂಲಕ ಮಾಡಿಕೊಟ್ಟಿರುತ್ತಾರೆ. ಶಿರಸಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು, ಹಾಲು ಪರೀಕ್ಷಕರು, ಹಾಲು ಉತ್ಪಾದಕರುಗಳಿಗೆ ಹಾಗೂ ಒಕ್ಕೂಟದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳಿಗೆ, ಹಾಲಿನ ವಾಹನ ಚಾಲಕರುಗಳನ್ನು ಒಟ್ಟಾಗಿ ಸೇರಿಸಿ ಸುಮಾರು 400 ಕ್ಕೂ ಅಧಿಕ ಮೊದಲ ಹಾಗೂ ಎರಡನೇ ಹಂತದ ಕೋರೊನಾ ಲಸಿಕೆಯನ್ನು ಶಿರಸಿಯ ಕಚೇರಿಯಲ್ಲಿಯೇ ಪಡೆಯುವಂತೆ ತಮ್ಮ ಸ್ವಂತ ಖರ್ಚಿನಲ್ಲಿ ವ್ಯವಸ್ಥೆಯನ್ನು ಮಾಡಿದ್ದು ಗಮನಾರ್ಹ ಸಂಗತಿ.

300x250 AD

ಸಂಘಗಳ ಚುನಾವಣಾ ಪ್ರಕ್ರಿಯೆಗಾಗಿ ತಪ್ಪಿದ ಅಲೆದಾಟ

10 ವರ್ಷಗಳ ಮೊದಲು ಒಕ್ಕೂಟದ ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ನಿರ್ಯನಿರ್ವಾಹಕರು ಒಕ್ಕೂಟದ ಚುನಾವಣಾ ಪೂರ್ವ ಪ್ರಕ್ರಿಯೆಯನ್ನು ನಡೆಸಲು ಕಾರವಾರ ಹಾಗೂ ಧಾರವಾಡಗಳಿಗೆ ಅಲೆಯುವ ಪರಿಸ್ಥಿತಿ ಇತ್ತು, ಆದರೆ ಸುರೇಶ್ಚಂದ್ರ ಹೆಗಡೆ ಅವರು ನಿರ್ದೇಶಕರಾಗಿ ಆಯ್ಕೆಯಾದ ನಂತರ ಒಕ್ಕೂಟದ ಕಳೆದ ಹಾಗೂ ಪ್ರಸ್ತುತ ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳು ಒಕ್ಕೂಟದ ಚುನಾವಣಾ ಪೂರ್ವ ಪ್ರಕ್ರಿಯೆಗಾಗಿ ಕಾರವಾರ ಹಾಗೂ ಧಾರವಾಡಗಳಿಗೆ ಅಲೆಯುವ ಪದ್ಧತಿಯನ್ನು ಕೊನೆಗಾಣಿಸಿ ಒಕ್ಕೂಟದ ಚುನಾವಣಾ ಪೂರ್ವ ಪ್ರಕ್ರಿಯೆಯನ್ನು ಶಿರಸಿಯಲ್ಲಿಯೇ ನಡೆಯುವಂತೆ ಮಾಡಿ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಮಾತೆಯರಿಗಾಗಿ ‘ಅರಿಶಿಣ ಕುಂಕುಮ’ ವಿಭಿನ್ನ ಕಾರ್ಯಕ್ರಮ:

ಶಿರಸಿ ತಾಲೂಕಿನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಮಹಿಳಾ ಅಧ್ಯಕ್ಷರು, ಮಹಿಳಾ ಮುಖ್ಯ ಕಾರ್ಯನಿರ್ವಾಹಕರು, ಹಾಲು ಪರೀಕ್ಷಕಿಯರಿಗೆ ಶ್ರಾವಣ ಮಾಸದ ಒಂದು ಶುಭದಿನ “ಅರಿಶಿಣ ಕುಂಕುಮ” ಎಂಬ ವಿನೂತನ ಕಾರ್ಯಕ್ರಮ ಏರ್ಪಡಿಸಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವ ಮಾತೆಯರಿಗೆ ವಿಶೇಷ ಗೌರವ ನೀಡುವ ಕೆಲಸ ಸುರೇಶ್ಚಂದ್ರ ಹೆಗಡೆ ಅವರಿಂದ ಆಗಿದೆ.

ಹೈನುಗಾರರೊಂದಿಗೆ ನಿರಂತರ ಸಂಪರ್ಕ ಸಭೆ:

ಸುರೇಶ್ಚಂದ್ರ ಕೃಷ್ಣ ಹೆಗಡೆ ಅವರು ಧಾರವಾಡ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದಾಗಿನಿಂದ ಇಲ್ಲಿಯ ವರೆಗೂ ಪ್ರತೀ ವರ್ಷವೂ ತಪ್ಪದೇ ಪ್ರತೀ ಮೂರು ತಿಂಗಳಿಗೊಮ್ಮೆ ಶಿರಸಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಮುಖ್ಯಕಾರ್ಯನಿರ್ವಾಹಕರುಗಳ ಸಮನ್ವಯ ಸಭೆ ನಡೆಸಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಉತ್ಪಾದಕರಿಗೆ ಸಿಗುವ ಸೌಲಭ್ಯಗಳ ಕುರಿತು, ಕುಂದು ಕೊರತೆಗಳ ಕುರಿತು, ಮುಂದಾಗಬೇಕಾಗುವ ಅಭಿವೃದ್ಧಿ ಕೆಲಸಗಳ ಕುರಿತು ಚರ್ಚಿಸಿ ಸಲಹೆ ಸೂಚನೆಗಳನ್ನು ಪಡೆಯುವ ಕಾರ್ಯ ನಡೆಯುತ್ತಾ ಬಂದಿದ್ದು ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಇದು ಮೆಚ್ಚುಗೆಯ ವಿಷಯವಾಗಿದೆ.

Share This
300x250 AD
300x250 AD
300x250 AD
Back to top