Slide
Slide
Slide
previous arrow
next arrow

ಉನ್ನತ ಶಿಕ್ಷಣ‌ ಪಡೆದು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿ: ಡಾ.ರಾಮಪ್ಪ

300x250 AD

ಹೊನ್ನಾವರ: ಪಟ್ಟಣದ ನಾಮಧಾರಿ ಸಭಾಭವನದಲ್ಲಿ ನಾಮಧಾರಿ ಹಿತರಕ್ಷಣಾ ವೇದಿಕೆ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳ ಬಗ್ಗೆ ಉಪನ್ಯಾಸ ಹಾಗೂ 2023-24ನೇ ಸಾಲಿನಲ್ಲಿ ತೆರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಾಗೂ ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ರಾಮಪ್ಪ ಜಿ ಅವರು ದೀಪ ಬೆಳೆಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಬ್ರಹ್ಮಶ್ರಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಕರೆ ಸಲ್ಲಿಸಿದರು.ನಂತರ ಮಾತನಾಡಿ, ಇದು ನಮ್ಮ ಮಕ್ಕಳಿಗೆ ಉತ್ತೇಜನ ನೀಡುವಂತಹ ಉತ್ತಮ ಕಾರ್ಯಕ್ರಮ. ಬ್ರಹ್ಮಶ್ರೀ ನಾರಾಯಣ ಗುರುಗಳ ವಾಕ್ಯವನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬಂದಿದ್ದೇವೆ. ಇಂತಹ ಕಾರ್ಯಕ್ರಮಗಳಿಂದ ನಾಮಧಾರಿ ಸಮಾಜ ಮತ್ತಷ್ಟು ಸಂಘಟಿತವಾಗುತ್ತದೆ. ನಮ್ಮ ಸಮಾಜದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂದು ನುಡಿದರು.ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜಿಲ್ಲೆಯ ಎಲ್ಲೆಡೆಯಲ್ಲಿಯು ಆಗಬೇಕು. ಇವತ್ತು ನಮ್ಮ ಸಮಾಜ ಯಾರಿಗು ಕಡಿಮೆ ಇಲ್ಲದ ರೀತಿ ಶೈಕ್ಷಣಿಕವಾಗಿ, ರಾಜಕೀಯವಾಗಿ,ಆರ್ಥಿಕವಾಗಿಯೂ ಮುಂದುವರೆಯುತ್ತಿದ್ದೇವೆ. ಇದು ಹೆಮ್ಮೆಯ ವಿಚಾರ. ಎಲ್ಲರು ಉನ್ನತ ಶಿಕ್ಷಣ ಪಡೆದು ಸಮಾಜದ ಉನ್ನತಿಗೆ ಕಾರಣರಾಗಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳು ಹಾಗೂ ಉಪನ್ಯಾಸಕರಾಗಿ ಆಗಮಿಸಿದ ಹಿರಿಯ ಪತ್ರಕರ್ತರು ಹಾಗೂ ಲೇಖಕರಾದ ದಿನೇಶ ಅಮಿನಮಟ್ಟು ಮಾತನಾಡಿ, ನಾರಾಯಣ ಗುರುಗಳು ಬಯಸಿದ ಶಿಕ್ಷಣವೆಂದರೆ ಬೌದ್ಧಿಕ ದಾಸ್ಯದಿಂದ ಮುಕ್ತರಾಗುವುದು. ನಾರಾಯಣ ಗುರುಗಳ ಚಿಂತನೆ ಕೇಳುವುದು ತುಂಬಾ ಸುಲಭ,ಅದನ್ನು ಜೀವನದಲ್ಲಿ ಅಳವಡಿಸೊಕೊಳ್ಳುವುದು ಕಷ್ಟ. ಅದನ್ನು ಅಳವಡಿಸಿಕೊಂಡರೆ ದುಶ್ಚಟಗಳಿಂದ,ಮೌಢ್ಯಗಳಿಂದ ದೂರವಿದ್ದು,ಸರಳ ಬದುಕು ಸಾಧಿಸಬೇಕಾಗುತ್ತದೆ ಎಂದರು.ಮಕ್ಕಳ ಆಸಕ್ತಿಯನ್ನು ಗುರುತಿಸಿ ಅವರಿಗೆ ಯಾವ ಕ್ಷೇತ್ರದಲ್ಲಿ ಉತ್ಸಾಹವಿದೆಯೋ ಆ ಕ್ಷೇತ್ರದಲ್ಲಿ ಅವರನ್ನು ಬೆಳೆಸಿ. ಆದ್ದರಿಂದ ನಾರಾಯಣ ಗುರುಗಳ ಬಯಸಿದ ರೀತಿಯಲ್ಲಿ ಸಮಾಜವನ್ನು ಮುಂದುವರೆಸಿಕೊಂಡು ಸಂಘಟಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.ಉನ್ನತ ಶಿಕ್ಷಣ ಪಡೆದವರು ವಿವಾಹ ವಿಚ್ಚೇದನ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲೇ 36ಸಾವಿರ ಇಂತಹ ಪ್ರಕರಣ ಬೆಳಕಿಗೆ ಬಂದಿರುವುದು ವಿಷಾದದ ಸಂಗತಿ ಎಂದರು. ಸಮಾಜದಲ್ಲಿ ಬದಲಾವಣೆಯಾಗಬೇಕಾದರೆ ಯುವಜನಾಂಗದಿಂದ ಮಾತ್ರ ಸಾಧ್ಯ. ಸ್ವಾಮೀ ವಿವೇಕಾನಂದರು, ಬ್ರಹಶ್ರೀ ನಾರಾಯಣ ಗುರುಗಳು,ಗಾಂಧೀಜಿಯವರು ಯುವಕರಿದ್ದಾಗಲೇ ಸಾಧನೆ ಮಾಡಿದರು ಎಂದು ಅರಿತು,ಯುವಕರು ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಶಾಲಾ ಶಿಕ್ಷಣ ಪದವಿಪೂರ್ವ ಇಲಾಖೆ, ಉತ್ತರ ಕನ್ನಡ ಪ್ರಬಾರ ಉಪನಿರ್ದೇಶಕ ಸತೀಶ್.ಬಿ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಆಸಕ್ತಿ ಮತ್ತು ಪರಿಶ್ರಮ ಪಟ್ಟರೆ ಎನನ್ನು ಸಾಧಿಸಬಹುದು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ಜ್ಞಾನ ಸಂಪಾದನೆ ಪಡೆದುಕೊಳ್ಳುವುದು ಅಗತ್ಯ.ವಿದ್ಯೆ ಸಂಪಾದನೆ ಜತೆಗೆ ವಿವೇಕವನ್ನು ಅಳವಡಿಸಿಕೊಳ್ಳಬೇಕು.ಪುಸ್ತಕದ ಹುಳುವಾಗದೇ ಒಳ್ಳೆಯ ಓದು, ಬರಹ,ಮಾತುಗಾರಿಕೆ ರೂಢಿಸಿಕೊಳ್ಳಬೇಕು.ಕೀಳರಿಮೆಯನ್ನು ಬಿಡಬೇಕು. ನಮಗೆ ನಾವೇ ಹೆಮ್ಮೆ ಪಡುವಂತೆ ಸಾಧನೆ ಮಾಡಬೇಕು. ಮಹಿಳೆಯರು ಸಂಘಟನೆಯಲ್ಲಿ ಪಾಲ್ಗೊಂಡರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

300x250 AD

ಇದೇ ವೇಳೆ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.90 ಅಂಕ ಪಡೆದ ವಿದ್ಯಾರ್ಥಿಗಳನ್ನು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಶೇಷ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಜತೆಗೆ ಡಾ.ರಾಮಪ್ಪ ಜಿ.ರವರನ್ನು ಸನ್ಮಾನಿಸಿ, ಗೌರವಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಮಧಾರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ,ನ್ಯಾಯವಾದಿ ವಿಕ್ರಮ ನಾಯ್ಕ ಮಾತನಾಡಿ, ಸಮಾಜದವರು ಒಗ್ಗಟ್ಟಾದರೆ ಸಮಾಜ ಉನ್ನತಿ ಸಾಧ್ಯ.ನಮ್ಮ ಸಮಾಜದವರು, ಆರ್ಥಿಕವಾಗಿ, ಶೈಕ್ಷಣಿಕವಾಗಿ,ಸಾಮಾಜಿಕವಾಗಿ ತೊಂದರೆ ಅನುಭವಿಸುತ್ತಿದ್ದರೆ ಅಂತವರಿಗೆ ನಮ್ಮ ಸಂಘಟನೆ ವತಿಯಿಂದ ಸಹಕಾರ ನೀಡುವುದರ ಜತೆಗೆ ಕಾನೂನು ಸಲಹೆ ನೀಡಲು ಬದ್ದರಾಗಿದ್ದೇವೆ.ನಮ್ಮ ಸಮಾಜದ ಶ್ರೀ ಕ್ಷೇತ್ರದ ಶ್ರೀ ಸಿಗಂಧೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿಗಳಾದ ಡಾ.ರಾಮಪ್ಪ ಜಿರವರ ಶ್ರೇಷ್ಟ ಸಮಾಜಸೇವೆಗೆ ಡಾಕ್ಟರೇಟ್ ಪದವಿ ನೀಡಿರುವುದು ನಮ್ಮ ಸಮಾಜಕ್ಕೆ ಹೆಮ್ಮೆ ವಿಚಾರ ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ಸಾಂಬಾರು ಅಭಿವೃದ್ಧಿ ಮಂಡಳಿ, ಹುಬ್ಬಳ್ಳಿ ಇದರ ಜನರಲ್ ಮ್ಯಾನೇಜರ್ ಡಾ.ಎಚ್.ಆರ್ ನಾಯ್ಕ ಉಪಸ್ಥಿತರಿದ್ದರು. ಸಂಘಟನೆಯ ರಮೇಶ್ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಅನಂತ ನಾಯ್ಕ ಹೆಗ್ಗಾರ್ ಸ್ವಾಗತಿಸಿದರು.ಸುಧೀಶ್ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಜೆಡೆಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ನಾಮಧಾರಿ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಸಮಾಜ ಮುಖಂಡರು ಭಾಗಿಯಾಗಿದ್ದರು.

Share This
300x250 AD
300x250 AD
300x250 AD
Back to top