ದಾಂಡೇಲಿ : ಈ ದೇಶ ಕಂಡ ಧೀಮಂತ ನಾಯಕರು ಹಾಗೂ ಭಾರತೀಯ ಜನತಾ ಸಂಘದ ಸ್ಥಾಪಕರಾದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಇವರ ಪುಣ್ಯತಿಥಿಯ ನೆನಪಿಗಾಗಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ದಾಂಡೇಲಿ ತಾಲೂಕಿನ ಗ್ರಾಮೀಣ ಪ್ರದೇಶಗಳಾದ ಕೋಗಿಲೆಬನ, ಕೇರವಾಡ, ಹಾಲಮಡ್ಡಿ, ಮೈನಾಳ, ಕರಿಯಂಪಾಲಿ ಗ್ರಾಮದಲ್ಲಿರುವ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಶಿಕಾರಿಪುರ ಅವರ ನೇತೃತ್ವದಲ್ಲಿ ನೋಟ್‌ಬುಕ್ ವಿತರಣೆ ಹಾಗೂ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮಹಿಳಾ ಮೂರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಶಿಕಾರಿಪುರ ದೇಶದ ಸರ್ವಾಂಗಿಣ ಅಭಿವೃದ್ಧಿಗೆ ಶೈಕ್ಷಣಿಕ ಕ್ಷೇತ್ರದ ಕೊಡುಗೆ ಮಹತ್ತರವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ಮತ್ತು ಬೆಂಬಲವನ್ನು ಕೊಡಲು ನಾವು ನೀವೆಲ್ಲರೂ ಮುಂದಾಗಬೇಕಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ನಾವೆಲ್ಲರೂ ನಿಸ್ವಾರ್ಥ ಮನಸ್ಸಿನಿಂದ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಬಡ ಮಕ್ಕಳ ವಿದ್ಯಾರ್ಥಿಗಳ ಉನ್ನತಿಗಾಗಿ ನಮ್ಮಿಂದ ಕೈಲಾದ ಸಣ್ಣ ಸೇವೆಯನ್ನು ಮಾಡಲು ಮುಂದೆ ಬಂದಿದ್ದೇವೆ. ಈ ಸೇವೆಯ ಪ್ರಯೋಜನವನ್ನು ಗ್ರಾಮೀಣ ಭಾಗದ ಮಕ್ಕಳು ಪಡೆದುಕೊಳ್ಳುವುದರ ಮೂಲಕ ಶೈಕ್ಷಣಿಕವಾಗಿ ಉನ್ನತಿಯನ್ನು ಸಾಧಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಪ್ರತಿಕ್ಷಾ ಉದಯ್ ಸಿಂಗ್ ರಜಪೂತ್ ಮತ್ತು ಪೂಜಾ ಗಂಗಾರಾಮ ಕೊಕರೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷರಾದ ಬುದವಂತ ಗೌಡ ಪಾಟೀಲ್ ಅವರು ಗೀತಾ ಶಿಕಾರಿಪುರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಶೈಕ್ಷಣಿಕ ನೆರವು ಕಾರ್ಯಕ್ರಮ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್ ನಾಯಕ ಮತ್ತು ಗಿರೀಶ್ ಟೋಸೂರು, ಪಕ್ಷದ ಪ್ರಮುಖರಾದ ದೇವಕ್ಕ ಕೆರೆಮನಿ, ಸಾವಿತ್ರಿ ಬಡಿಗೇರ, ಭಾವನಾ ರಾಟೆ, ಉಮಾ ಹನುಮಸಾಗರ, ಪದ್ಮ ಕುರುಡೇಕರ್, ಸುಜಾತಾ ಗಡದ್, ಮಹಾದೇವಿ ಬತ್ತೆ, ಸುಜಾತ ಜಾಧವ್, ನಂದಿನಿ ಶೆಟ್, ದೀಪಾ ಭಂಡಾರಿ ಹಾಗೂ ಪಕ್ಷದ ಮಹಿಳಾ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.