ಭಟ್ಕಳ : ಭಟ್ಕಳ ಶ್ರೀರಾಮ್ ಪೈನಾನ್ಸ್‌ನಲ್ಲಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತ ತಲೆ ಮರೆಸಿಕೊಂಡಿದ್ದ ಮುಖ್ಯ ಆರೋಪಿಯನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಹಾಗೂ ಮೂರನೇ ಆರೋಪಿಗಳನ್ನು ಈಗಾಲೇ ಬಂದಿಸಿದ್ದರು. ಆದರೆ ಪ್ರಕರಣದ ಮುಖ್ಯ ಆರೋಪಿ ಹಾಗೂ ಮೊದಲ ಆರೋಪಿಯಾದ ರಾಘವೇಂದ್ರ ರಾಜೀವ ಸ್ವಾಮಿ ಕುಂದಾಪುರ ಈತ ತಲೆ ಮರೆಸಿಕೊಂಡಿದ್ದನು. ಸದ್ಯ ಆರೋಪಿಯನ್ನು ಬಂಧಿಸುವಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ
ಪ್ರಕರಣ ಹಿನ್ನೆಲೆ:
ಇವರು ಭಟ್ಕಳ ಶ್ರೀ ರಾಮ ಫೈನಾನ್ಸ್ ಶಾಖೆಯಲ್ಲಿ ಕೆಲಸ ಮಾಡುವ ಅವಧಿಯಲ್ಲಿ ಜನವರಿ 1 ,2023 ರಿಂದ ಮೇ, 2 2024 ವೇಳೆ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಫೈನಾನ್ಸಿನಲ್ಲಿ ಸಾಲ ಪಡೆದ ಕೆಲವು ಸಾಲಗಾರರಿಗೆ ಸಂಬಂಧಿಸಿದ ವಾಹನಗಳ ಸಾಲವನ್ನು ಪೂರ್ತಿಯಾಗಿ ಚುಕ್ತಾಗೊಳಿಸಿ ಕಂಪೆನಿಯ ಹೈಪೋತಿಕೇಶನ್ ಸರ್ಟಿಪಿಕೇಟನ್ನು ತಯಾರಿ ಮಾಡಿ ಕಂಪನಿಯ ಸೀಲ್ ಬಳಸಿ ಅದಕ್ಕೆ ಮುಖ್ಯ ಕಚೇರಿಯಿಂದ ಸಹಿ ಪಡೆಯದೆ ಅವರೇ ಅದಕ್ಕೆ ನಕಲಿ ಸಹಿ ಮಾಡಿ ಆರ್.ಟಿ.ಓ.ದಲ್ಲಿ ನೀಡಿ ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಲು ಅನುಕೂಲ ಮಾಡಿಕೊಟ್ಟು ಕಂಪನಿಗೆ ಹಾಗೂ ಗ್ರಾಹಕರಿಗೆ ಮೋಸ ಮಾಡಿದ್ದು, ಮತ್ತು ಸದರಿ ಆರೋಪಿತರು ಕಂಪನಿಯಲ್ಲಿ ಸಾಲ ಪಡೆದ ಸಾಲ ಮರುಪಾವತಿ ಮಾಡದೇ ಇರುವ ಗ್ರಾಹಕರ ವಾಹನಗಳನ್ನು ಶ್ರೀರಾಮ ಪೈನಾನ್ಸನ ಮೇಲಾಧಿಕಾರಿಗಳ ಅನುಮೋದನೆಯನ್ನು ಪಡೆಯದೇ ತಮ್ಮ ವಶಕ್ಕೆ ಪಡೆದುಕೊಂಡು ಸದರಿ ವಾಹನವನ್ನು ಕಂಪನಿಯ ನಿಯಮಾವಳಿಗಳನ್ನು ಪಾಲಿಸದೇ ಮಾರಾಟ ಮಾಡಿ ಬಂದ ಹಣವನ್ನು ತಮ್ಮ ಸ್ವಂತ ಖರ್ಚಿಗೆ ಬಳಸಿಕೊಂಡು ಕಂಪನಿಗೆ ಹಾಗೂ ಗ್ರಾಹಕರಿಗೆ ಮೋಸ, ವಂಚನೆ, ನಂಬಿಕೆ ದ್ರೋಹವನ್ನು ಎಸಗಿರುತ್ತಾರೆ. ಹಾಗೂ ಸದರಿ ಆರೋಪಿತರು ಕಳೆದ ಕೆಲವು ತಿಂಗಳುಗಳಿಂದ ಈ ಕೆಳಗಿನ ಗ್ರಾಹಕರಿಂದ ಲೋನ್ ಸೆಟ್ಲುಮೆಂಟ್ ಮಾಡುತ್ತೇವೆ ಎಂದು ಅವರಿಂದ ಹಣವನ್ನು ಪಡೆದು ಕಂಪನಿಗೆ ಸದರಿ ಹಣವನ್ನು ಮರು ಪಾವತಿ ಮಾಡದೇ ತಮ್ಮ ಸ್ವಂತ ಖರ್ಚಿಗೆ ದುರ್ಬಳಕೆ ಮಾಡಿಕೊಂಡು ಹಾಗೂ ಗ್ರಾಹಕರಿಂದ ಸಾಲದ ಕಂತುಗಳನ್ನು ಸಾಲದ ಖಾತೆಗೆ ಜಮಾ ಮಾಡುತ್ತೇವೆ ಎಂದು ಸುಳ್ಳು ಹೇಳಿ ಅವರಿಂದ ಹಣವನ್ನು ಪಡೆದು ಗ್ರಾಹಕರ ಸಾಲದ ಖಾತೆಗೆ ಕಟ್ಟದೇ ತಮ್ಮ ಸ್ವಂತ ಖರ್ಚಿಗೆ ದುರ್ಬಳಕೆ ಮಾಡಿಕೊಂಡು ಕಂಪನಿಗೆ ವಂಚಿಸಿ, ನಂಬಿಕೆ ದ್ರೋಹ ಮಾಡಿ ಕರ್ತವ್ಯ ಲೋಪ ಎಸಗಿ ಒಟ್ಟೂ 89.79.524 ರೂ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಶ್ರೀರಾಮ್ ಪೈನಾನ್ಸ್ ಜಿ.ಪಿ. ಹೋಲ್ಡರ್ ನವೀನ ಪೂಜಾರಿ ದೂರು ದಾಖಲಿಸಿದ್ದಾರೆ