ಜೋಯಿಡಾ: ಕಾತೇಲಿ ಗ್ರಾಮ ಪಂಚಾಯತ ವ್ಯಾಪ್ತಿಯ ತೇಲೋಲಿ ಗ್ರಾಮದಲ್ಲಿ 3 ವರ್ಷದ ಹಿಂದೆ ಶೂನ್ಯ ದಾಖಲಾತಿಯಿಂದ ಶಾಲೆ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿತ್ತು. ಆದರೆ ಈಗ 1 ನೇ ತರಗತಿಗೆ ದಾಖಲಾಗಲು 5 ವಿದ್ಯಾರ್ಥಿಗಳು ಗ್ರಾಮದಲ್ಲಿ ಇದ್ದಾರೆ. ಉಳಿದಂತೆ ಇತರೇ ತರಗತಿ ಓದುವ ಇದೇ ಗ್ರಾಮದ ವಿದ್ಯಾರ್ಥಿಗಳು ಬೇರೇ ಬೇರೇ ದೂರದ ಶಾಲೆಗಳಿಗೆ ಹೋಗುತ್ತಿದ್ದಾರೆ. ಕಾರಣ ಇದೇ ಊರಲ್ಲಿ ಶಾಲೆ ಪುನರಾರಂಭ ಮಾಡಲು ಕುಣಬಿ ಸಮಾಜ ಜಿಲ್ಲಾಧ್ಯಕ್ಷ ಸುಭಾಸ್ ಗಾವಡಾ ನೇತೃತ್ವದಲ್ಲಿ ಊರ ಗ್ರಾಮಸ್ಥರು ಜೋಯಿಡಾ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಆಗ್ರಹಿಸಿದ್ದರು.
ಅದಕ್ಕೆ ತಕ್ಷಣ ಸ್ಪಂದಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳು ತಮ್ಮ ತಂಡದೊಂದಿಗೆ ತೇಲೋಲಿ ಗ್ರಾಮಕ್ಕೆ ಭೇಟಿ ಮಾಡಿ ಗ್ರಾಮಸ್ಥರೊಂದಿಗೆ ಚರ್ಚೆ ಮಾಡಿದರು. ಅಗತ್ಯ ಮೂಲ ಸೌಲಭ್ಯಗಳು ಈಗಾಗಲೇ ಇರುವುದರಿಂದ ಮಕ್ಕಳ ಅನುಕೂಲಕ್ಕಾಗಿ ಶಾಲೆ ಪುನರ್ ಪ್ರಾರಂಭ ಮಾಡುವ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕ್ಯೆಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.