Slide
Slide
Slide
previous arrow
next arrow

ಜಗದಂಬಾ ಪ್ರೌಢಶಾಲೆ ಸಂಸ್ಥಾಪನಾ ದಿನಾಚರಣೆ: ಬ್ಯಾಗ್, ಸಮವಸ್ತ್ರ ವಿತರಣೆ

300x250 AD

ಸಿದ್ದಾಪುರ: ತಾಲೂಕಿನ ಸರಕುಳಿ ಶಿಕ್ಷಣ ಸಮಿತಿ ನಡೆಸುತ್ತಿರುವ ಶ್ರೀ ಜಗದಂಬಾ ಪ್ರೌಢಶಾಲೆ ಸರಕುಳಿ ಇದರ 67ನೇ ಸಂಸ್ಥಾಪನಾ ದಿನಾಚರಣೆಯನ್ನು ಜೂ.19ರಂದು ಅಪರಾಹ್ನ 3.30 ಗಂಟೆಗೆ ಪ್ರೌಢಶಾಲೆಯ ಸಭಾಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಇದೇ ಸುಸಂದರ್ಭದಲ್ಲಿ RDS ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸಹ 8ನೇ ತರಗತಿ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಸಮವಸ್ತ್ರವನ್ನು ಉಚಿತವಾಗಿ ವಿತರಿಸಲಾಯಿತು. ಅಲ್ಲದೇ ಮಾರ್ಚ್ 2024ರ SSLC ಮುಖ್ಯಪರೀಕ್ಷೆಯಲ್ಲಿ 90%ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ನೆನಪಿನ ಕಾಣಿಕೆ, ಅಭಿನಂದನಾ ಪತ್ರದೊಂದಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಂಕರ ಹೆಗಡೆ ಕಿಬ್ಬಳ್ಳಿ ಇವರು, ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಪಥದೆಡೆಗೆ ಸಾಗುವುದು ಸಾಧ್ಯವಾಗುವುದು ಎಂದು ಡಿ.ವಿ.ಜಿ.ಯವರ ಸಾಲುಗಳೊಂದಿಗೆ ವಿವರಿಸಿದರು. ವಿದ್ಯಾರ್ಥಿಗಳು ಶಿಕ್ಷಣವಂತರಾಗುವ‌ ಜೊತೆಗೆ ಸಂಸ್ಕಾರವಂತರಾಗಿಯೂ ಬಾಳಿದಾಗ ಮಾತ್ರ ಜನ್ಮ ಸಾರ್ಥಕವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಸರಕುಳಿ ಶಿಕ್ಷಣ ಸಮಿತಿಯ ಅಧ್ಯಕ್ಷರೂ ಆದ ಮಂಜುನಾಥ ಹೆಗಡೆ ತ್ಯಾರಗಲ್ ಮಾತನಾಡಿ ವಿದ್ಯಾರ್ಥಿಗಳು ಸನ್ನಡತೆ, ಸಂಸ್ಕಾರಯುತ ಗುಣಾತ್ಮಕ‌ ಶಿಕ್ಷಣ ಪಡೆದು ಶಾಲೆಗೆ ಇನ್ನೂ ಹೆಚ್ಚಿನ ಕೀರ್ತಿ ಲಭಿಸುವಂತಾಗಬೇಕು ಎಂದು ಆಶಿಸಿದರು.

ಸರಕುಳಿ ಶಿಕ್ಷಣ ಸಮಿತಿಯ ಉಪಾಧ್ಯಕ್ಷರಾದ ರಘುಪತಿ ಹೆಗಡೆ, ಕಾರ್ಯದರ್ಶಿಗಳಾದ ನರಹರಿ ಹೆಗಡೆ, ಸದಸ್ಯರಾದ ಗಜಾನನ ಹೆಗಡೆ, ಗಣಪತಿ ಹೆಗಡೆ, ರಾಮಚಂದ್ರ ಹೆಗಡೆ, ಪ್ರಭಾಕರ ಭಟ್ಟ ಮತ್ತಿತರರು ಆಗಮಿಸಿದ್ದರು. ಮುಖ್ಯಾಧ್ಯಾಪಕರಾದ ಕೃಷ್ಣಮೂರ್ತಿ ಎಚ್.ಎಸ್.ಇವರು ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಮಂಜುನಾಥ ಕಾಕನೂರ ಕಾರ್ಯಕ್ರಮವನ್ನು ನಿರ್ವಹಿಸಿದರು. ಎಂ.ವಿ.ನಾಯ್ಕ ವಂದಿಸಿದರು.

300x250 AD

ಬಾಕ್ಸ್

9 ಸದಸ್ಯರನ್ನೊಳಗೊಂಡ ಪ್ರಸ್ತುತ ಆಡಳಿತ ಮಂಡಳಿಯು, ಪ್ರೌಢಶಾಲೆಯನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಾ ಬಂದಿದೆ. ಬೇಕಾದಂತಹ ಎಲ್ಲಾ ಸೌಕರ್ಯಗಳನ್ನು ಒದಗಿಸುತ್ತಾ ಬಂದಿದ್ದು, ಈಗಿನ ಕಾಲಕ್ಕೆ ಅನುಗುಣವಾಗಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯನ್ನು ಒದಗಿಸಿದೆ. ದಾನಿಗಳನ್ನು ಸಂಪರ್ಕಿಸಿ ಶಾಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದೆ. ಸಮರ್ಥ ಆಡಳಿತ ಮಂಡಳಿಯಷ್ಟೇ ಅಲ್ಲದೇ ವಿಷಯದಲ್ಲಿ ಹಿಡಿತ ಸಾಧಿಸಿದ ಅನುಭವಿ ಶಿಕ್ಷಕರಿದ್ದು, ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆಗೆ ನೆರವಾಗಿದ್ದಾರೆ. ಇಲಾಖೆಯ ಕಾರ್ಯಕ್ರಮಗಳಾದ ಪ್ರತಿಭಾ ಕಾರಂಜಿ, ಕ್ರೀಡಾಕೂಟಗಳಿಗೆ ಮಕ್ಕಳನ್ನು ಸಜ್ಜುಗೊಳಿಸಿ ಪಠ್ಯೇತರ ಚಟುವಟಿಕೆಗಳಲ್ಲಿಯೂ ಶಾಲೆಯು ಸಾಧನೆ ಮೆರೆಯುವಂತೆ ನೋಡಿಕೊಂಡಿದ್ದಾರೆ. ಅಲ್ಲದೇ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ನಮ್ಮ ಶಾಲೆಯು ತಾಲೂಕಿಗೆ ಪ್ರಥಮ ಸ್ಥಾನದಲ್ಲಿದ್ದು, ಶಿಕ್ಷಕರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.

Share This
300x250 AD
300x250 AD
300x250 AD
Back to top