Slide
Slide
Slide
previous arrow
next arrow

ಡಿಜಿಟಲ್ ಅವಕಾಶಗಳಿಂದ ಸಮಯದ ಸದ್ಬಳಕೆ ಮಾಡಿಕೊಳ್ಳಿ: ಈಶ್ವರ ಬರಿಗಲ್

300x250 AD

ಯಲ್ಲಾಪುರ: ಆಧುನಿಕತೆಯ ಇಂದಿನ ದಿನಗಳಲ್ಲಿ ತೀರಾ ಅವಶ್ಯಕವಾದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಮ್ಮೊಳಗಿನ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಲಿಕೆ ನಮಗೆ ನೆರವಾಗಬೇಕು. ಕಲಿಕೆಯ ಹಂತದಲ್ಲಿ ಸಮಯ ವ್ಯಯವಾಗದ ಹಾಗೆ ಸದ್ಬಳಕೆ ಮಾಡಿಕೊಳ್ಳಲು ಇಂದು ಡಿಜಿಟಲ್ ಅವಕಾಶಗಳಿವೆ. ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಗುವ ಶಿಕ್ಷಣ ಮೀಡಿಯಾದ ಎಲ್ಲಾ ಪಠ್ಯದ ಸಾರಾಂಶಗಳನ್ನು ಚಿತ್ರ ವಿವರಣೆಯ ಸಹಿತ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ನಿತ್ಯದ ದಿನಚರಿಯಲ್ಲಿ ಈ ಮಾಹಿತಿ ಸೌಲಭ್ಯವನ್ನು ಬಳಸಿಕೊಂಡು ಉತ್ತಮ ಫಲಿತಾಂಶ ಪಡೆಯಲು‌ ಶ್ರಮಿಸಬೇಕು ಎಂದು ಗ್ರಾಮ ಡಿಜಿ ವಿಕಸನದ ಶಿರಸಿ ಶೈಕ್ಷಣಿಕ ಜಿಲ್ಲಾ ಸಂಯೋಜಕರಾದ ಈಶ್ವರ ಬರಿಗಲ್ ಅಭಿಪ್ರಾಯಪಟ್ಟರು.

ಅವರು ವಜ್ರಳ್ಳಿಯ ಗ್ರಾಮ ಪಂಚಾಯತ ಗ್ರಂಥಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಗ್ರಾಮ ಡಿಜಿ ವಿಕಸನದ ಕಾರ್ಯಕ್ರಮದ ಕುರಿತಾಗಿ ಮಾಹಿತಿ ನೀಡಿ ಮಾತನಾಡುತ್ತಿದ್ದರು. ಬದಲಾವಣೆಯ ಕಾಲಘಟ್ಟದಲ್ಲಿ ಶೈಕ್ಷಣಿಕ ರಂಗದಲ್ಲಿಯೂ ಅನೇಕ ಬದಲಾವಣೆಗಳು ತ್ವರಿತವಾಗಿ ಆಗುತ್ತಿರುತ್ತದೆ. ಅದರ ವೇಗಕ್ಕೆ ಚುರುಕಾಗಿ ಸ್ಪಂದಿಸುವ ಗುಣ ನಾವು ಬೆಳೆಸಿಕೊಳ್ಳಬೇಕಿದೆ. ಎಂದರು. ಶಾಲೆಗಳ ಮುಖ್ಯಾಧ್ಯಾಪಕರು, ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗ್ರಂಥಪಾಲಕ ದತ್ತಾತ್ರೇಯ ಭಟ್ಟ ಸ್ವಾಗತಿಸಿ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top