ಜೋಯಿಡಾ: ತಾಲೂಕಿನ ಅಣಶಿ – ಉಳವಿ ರಸ್ತೆಯಲ್ಲಿ ಬೃಹದಾಕಾರದ ಮರವೊಂದು ರಸ್ತೆಯಲ್ಲಿ ಬಿದ್ದ ಪರಿಣಾಮ ಕೆಲ ಕಾಲ ವಾಹನ ಸವಾರರಿಗೆ ತೊಂದರೆ ಉಂಟಾಯಿತು.
ನಂತರ ಅರಣ್ಯ ಇಲಾಕೆಯಿಂದ ಮರ ತೆರವುಗೊಳಿಸುವ ಕೆಲಸ ನಡೆಯಿತು. ಜೋಯಿಡಾ ತಾಲೂಕು ಕಾಡಿನಿಂದ ಕೂಡಿದ ಪ್ರದೇಶವಾದ್ದರಿಂದ ಇಲ್ಲಿ ಮರ ಗಿಡಗಳು ರಸ್ತೆಯಲ್ಲಿ ಬೀಳುವುದು ಸರ್ವೆ ಸಾಮಾನ್ಯ,ಆದರೆ ತೆರವು ಕಾರ್ಯ ಮಾತ್ರ ಸರಿಯಾಗಿ ಆಗುತ್ತಿಲ್ಲ ಎಂಬುದು ಬೇಸರದ ಸಂಗತಿ.
ತಾಲೂಕಿನ ಬಹಳಷ್ಟು ರಸ್ತೆಗಳಲ್ಲಿ ಬಿದ್ದ ಮರಗಳನ್ನು ಕತ್ತರಿಸುತ್ತಾರೆ ಆದರೆ ರಸ್ತೆಯಿದ್ದ ಜಾಗವಷ್ಟೇ ಕತ್ತರಿಸುವುದರಿಂದ ಉಳಿದ ಮರದ ತುಂಡು ತೆಗೆಯದ ಕಾರಣ ಅಪಘಾತ ಹೆಚ್ಚುತ್ತಿದೆ, ಈ ಬಗ್ಗೆ ಲೋಕೋಪಯೋಗಿ ಇಲಾಖೆ ಕಾರ್ಯ ಪ್ರವೃತ್ತರಾಗಿ ರಸ್ತೆ ಪಕ್ಕದ ಮರಗಳ ತೆರವು ಕಾರ್ಯ ಮಾಡಬೇಕಿದೆ.