Slide
Slide
Slide
previous arrow
next arrow

‘ನ ಭೂತೋ ನ ಭವಿಷ್ಯತಿ’ ಎಂಬಂತಾದ ‘ವಜ್ರಸಂಭ್ರಮ’

300x250 AD

60 ವರ್ಷ ಹಿಂದಿನ ವಿದ್ಯಾರ್ಥಿಗಳ ಸ್ನೇಹಕೂಟದ ಸವಿ ನೆನಪಿನ ಮೆಲುಕು

ಶಿರಸಿ: ವಿದ್ಯಾರ್ಥಿ ಜೀವನ ಅದೊಂದು ಸದಭಿರುಚಿಯ ಸಂಭ್ರಮ. ಬಾಲ್ಯದ ದಿನಗಳ ಹುಡುಗಾಟದ ಕೊನೆಯ ಹಂತ . ಹೊಂಗನಸುಗಳು ಅರಳಿ ಪರಿಮಳ ಸೂಸುವ ಪ್ರಶಾಂತ ದಿನಗಳು. ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಸುವರ್ಣ ಅವಕಾಶ. ನಾನು ಈ ಕಾಲೇಜಿನ ವಿದ್ಯಾರ್ಥಿಯಲ್ಲದಿದ್ದರೂ ಮೊದಲಿನಿಂದಲೂ ಒಂದು ವಿಶೇಷ ಅಭಿಮಾನ. ಅದಕ್ಕೆ ಕಾರಣ ಆಗಿನ ಗುರುವೃಂದ ವಿದ್ಯಾರ್ಥಿಗಳ ಬಲಿಷ್ಠದೆಡೆಗೆ ಚಿಂತಿಸುವ ಬಹುಮುಖ ಪ್ರತಿಭೆಯನ್ನು ಹೊಂದಿದವರು. ಕಾಲೇಜಿಗೆ ರ‍್ಯಾಂಕುಗಳ ಟ್ಯಾಂಕನ್ನೇ ಸಾದರ ಪಡಿಸಿದ ವಿದ್ಯಾರ್ಥಿಗಳು. ನೆನಪು ಸದಾ ಮಧುರ, ಅಂದಿನ ವಿದ್ಯಾರ್ಥಿಗಳ ಅಧ್ಯಯನ ಶಿಕ್ಷಕರ ಅಧ್ಯಾಪನ ಸಾಧನೆ, ಸೇವೆ ಬದುಕಿನ ಚೀಲದ ತೃಪ್ತಿಗಾಗಿ ಹೋರಾಟ. ಸೇವಾ ನಿವೃತ್ತರಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಸರ್ವಮಾನ್ಯರಾಗಿ ಸುಂದರ ಜೀವನವನ್ನು ಅನುಭವಿಸುತ್ತಿರುವ ಇವರೇ ಧನ್ಯರು. ಜೀವನದ ಸಂಧ್ಯಾಕಾಲದಲ್ಲಿ ಯುವಕರನ್ನು ನಾಚಿಸುವ ಜೀವನೋತ್ಸಾಹ ಹಾಗು ಆತ್ಮವಿಶ್ವಾಸ. ಹಳೆಯ ವಿದ್ಯಾರ್ಥಿಗಳ ಈ ಕಾರ್ಯ ಅನುಕರಣೀಯ ಹಾಗು ಸ್ತುತ್ಯವೆಂದು ಕವಿ, ಸಾಹಿತಿ, ಜನಮಾಧ್ಯಮ ಪತ್ರಿಕೆಯ ಗೌರವ ಸಂಪಾದಕರೂ ಆದ ಜಯರಾಮ ಹೆಗಡೆ ಈ ಮೇಲಿನಂತೆ ಮಾತನಾಡಿದರು.

ಮುಂದುವರೆದು ಮುಖ್ಯ ಅತಿಥಿಗಳಾದ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ “ಸ್ನೇಹಕೂಟದ” ಸದಸ್ಯರೆಲ್ಲಾ 75ವಸಂತಗಳನ್ನು ಯಶಸ್ವಿಯಾಗಿ ಮುಗಿಸಿದವರು. ವಿಜ್ಞಾನಿಗಳಾಗಿ, ವೈದ್ಯರಾಗಿ, ಅರಣ್ಯಾಧಿಕಾರಿಗಳಾಗಿ, ಸಮಾಜಸೇವಕರಾಗಿ, ಅಧ್ಯಾಪಕರಾಗಿ, ಅರ್ಥಪೂರ್ಣವಾಗಿ ಜೀವನ ನಡೆಸಿದ ಸಾಧಕರು, ಜನಮನ ಗೆದ್ದವರು. ಇವರ ಮೊಗದಲ್ಲಿ ನೊವಿಲ್ಲ ನಲಿವಿದೆ, ಒಲವಿದೆ, ಗೆಲುವಿನ ಕಳೆಯಿದೆಯೆಂದು ಎಂ.ಇ.ಎಸ್. ಕಾಲೇಜಿನಲ್ಲಿ ಮನೋಜ್ಞವಾಗಿ ಮಾತನಾಡಿದರು.

300x250 AD

ಉದ್ಘಾಟಕರಾಗಿ ಆಗಮಿಸಿದ ಪ್ರಧಾನ ಕಾರ್ಯದರ್ಶಿಗಳಾದ ಮಾನ್ಯ ಎಸ್.ಪಿ. ಶೆಟ್ಟಿ, ‘ಈ ಪುನರ್ ಮಿಲನದಲ್ಲಿ ನನಗೆ ಭಾಗವಹಿಸಲು ಅವಕಾಶವಾದದ್ದು ನನ್ನ ಸೌಭಾಗ್ಯವಾಗಿದೆ. ಇದು ಕಾಲೇಜಿನ ಸುದೀರ್ಘ ಇತಿಹಾಸದಲ್ಲಿ ಪ್ರಥಮವಾಗಿದೆ. ಇದು ನೆನಪುಗಳ ಪ್ರಸ್ತಾಪ ಆತ್ಮೀಯತೆಯ ಅನುಬಂಧವೆಮಂದರೂ ತಪ್ಪಾಗದು. ಒಂದು ಕಾಲದಲ್ಲಿ ನಾವೆಲ್ಲಾ ಸಹಪಾಠಿಗಳು ಇಂದು ಸೇವಾ ನಿವೃತ್ತರಾಗಿ ಹರುಷವನ್ನು ಹಂಚಿಕೊಳ್ಳುತ್ತಿದ್ದೇವೆ. ಆರೋಗ್ಯ ಹಾಗೂ ಆರ್ಥಿಕ ಭದ್ರತೆ ಇದರ ಒಳಗುಟ್ಟಾಗಿದೆ. ಈ ಕಾರ್ಯಕ್ರಮದ ರುವಾರಿಗಳಾದ ಡಿ.ಜಿ.ಹೆಗಡೆ ಬೈರಿಯವರು, ಡಾ. ಆರ್.ಎನ್. ಹೆಗಡೆ ಭಂಡೀಮನೆ ಅಭಿನಂದನಾರ್ಹರು. ಇವರ ಕೆಲಸ ಇತರರಿಗೆ ಮಾರ್ಗದರ್ಶಿಯಾಗಿದೆ. ನಮಗಿಂತಲೂ ಸಂಸ್ಥೆ ದೊಡ್ಡದು ಮಾತೃಸ್ವರೂಪಿಯಾಗಿದೆ. ನಮ್ಮ ಸೇವೆ ಕರ್ತವ್ಯ ಧರ್ಮವಾಗಬೇಕೆಂದು ತಮ್ಮ ಎಂದಿನ ಹಾಸ್ಯಲೇಪಿತ ಮಾತುಗಳಿಂದ ಮನಮುಟ್ಟುವಂತೆ ಮಾತನಾಡಿದರು.
ಡಾ. ಆರ್.ಎನ್. ಹೆಗಡೆ ಭಂಡೀಮನೆಯವರು ತಮ್ಮ ಪ್ರಾಸ್ತಾವಿಕ ನುಡಿಗಳನ್ನಾಡುತ್ತ ತಾವು ಕ್ರಮಿಸಿದ ಮಾರ್ಗವನ್ನು ವಿವರಿಸಿ ತಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಸಂತೃಪ್ತಿಯ ಜೀವನವನ್ನು ಕಳೆದಿದ್ದೇವೆ. ಮಿತ್ರತ್ವವನ್ನು ಸಂಪಾದಿಸಿ ಮುನ್ನಡೆದಿದ್ದೇವೆ. ಸಮಾಜ ಜೀವಂತವಾಗಿದೆ ಎಂಬುದನ್ನು ಮನಗಂಡಿದ್ದೇವೆ. “ಅನ್ನದಾತಾ ಸುಖೀಭವ” ಎನ್ನುವಂತೆ ತಮ್ಮ ಹಳೆಯ ವಿದ್ಯಾರ್ಥಿಗಳು ಸೇರಿ ಮಾತೃಸ್ವರೂಪಿ ಸಂಸ್ಥೆಗೆ ಈಗ 10 ಲಕ್ಷ ರೂಪಾಯಿ ಕಿರುಕಾಣಿಕೆ ನೀಡಿ ಹೊಸ ಕಟ್ಟಡದ ಎರಡು ಕೋಣೆಗಳಿಗೆ ಪ್ರಾಯೋಜಕರಾಗಿದ್ದೇವೆ ಎನುತ್ತ ತಾವು ಕಾಲೇಜಿನಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಂಡರು. ನಮಗೆ ಶಿಕ್ಷಣವನ್ನು ನೀಡಿ ನಮ್ಮನ್ನು ಸೇವಾವೃತರನ್ನಾಗಿ ಮಾಡಿದ ಈ ಸಂಸ್ಥೆ ಚಿರಾಯುವಾಗಬೇಕೆಂದರು.

ಹಳೆಯವಿದ್ಯಾರ್ಥಿಗಳಾದ ಅನಂತ ಶಾಸ್ತ್ರಿ, ಡಾ.ಪಿ. ಎಸ್ ಹೆಗಡೆ, ಅಜ್ಜೀಬಳ ಮುಂತಾದವರು ಆಗಿನ ಕಾಲೇಜು ದಿನಗಳನ್ನು ನೆನಪಿಸಿಕೊಳ್ಳುತ್ತಾ, ತಮ್ಮ ಗುರುಗಳಾದ ದಿವಂಗತ ಎಲ್.ಟಿ.ಶರ್ಮ, ಬಿ.ಎಚ್. ಶ್ರೀಧರ, ಜೋಸೆಫ್, ಆರ್.ಎ.ಹೆಗಡೆ, ಎಸ್.ಆರ್. ದೇಸಾಯಿ, ಎ. ಕೆ. ಶಾಸ್ರಿ, ಎಂ.ರಮೇಶ, ಪ್ರೊ ಹಬ್ಬು, ಶಾಂತಾ ಜೋಸೆಫ ಎಸ್ ಎಸ್ ವೇರ್ಣೆಕರರನನ್ನು ನೆನಪಿಸಿ ಭಾವುಕರಾದರು.
ಗುರುವಂದನೆಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದ ಪ್ರೋ ಎನ್.ಎನ್. ಸಭಾಹಿತರ ಅನುಪಸ್ಥತಿಯಲ್ಲಿ ವಿ.ಜಿ.ಭಟ್, ಚವತ್ತಿ ಸನ್ಮಾನ ಪತ್ರವನ್ನು ವಾಚಿಸಿದರು. ಆರ್. ಕೆ. ಹಗಡೆ ಕೋಡ್ಸರ ಅವರ ಬಗ್ಗೆ ಅಭಿನಂದನಾ ನುಡಿಗಳನ್ನು ಆಡಿದರು.
ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಅದ್ಯಕ್ಷರಾದ ಜಿ.ಎಮ್. ಹೆಗಡೆ ಮುಳಖಂಡರವರು “ ಇದೊಂದು ಮರೆಯಲಾಗದ ಮಹಾ ಸುದಿನ. ಹಳೆಯ ವಿದ್ಯಾರ್ಥಿಗಳು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಮಾಡಿದ ಕೆಲಸ ಮೆಚ್ಚುವಂತಹದಾಗಿದೆ. 60 ವರ್ಷ ಹಿಂದೆ ಓದಿದ 1964-65ರ ಪಿ.ಯು. ಸಾಯಿನ್ಸ್ ಬ್ಯಾಚಿನ ಹಳೆಯ ವಿದ್ಯಾರ್ಥಿಗಳು ಒಂದು ಒಳ್ಳೆಯ ಮೇಲ್ಪಂಕ್ತಿಯನ್ನು ಹಾಕಿರುವದು ಸಂತಸ ತಂದಿದೆ. ಕಳೆದ 11 ವರ್ಷಗಳ ಆಡಳಿತದಲ್ಲಿ 20 ಕೋಟಿ ರೂಪಾಯಿಗಳನ್ನು ವ್ಯಯಿಸಿ ಅಭಿವೃಧ್ಧಿ ಪಥದಲ್ಲಿ ಸಾಗಿದ್ದೇವೆ ಎನ್ನುವಲ್ಲಿ ನಮಗೆ ಅಪಾರ ಸಂತೋಷವಾಗುತ್ತಿದೆ. ಅನುಭವವಿದ್ದಲ್ಲಿ ಅಮೃತತ್ವವಿದೆ. ಅಂದರೆ ಅದಕ್ಕೆ ನೀವೇ ಸಾಕ್ಷಿ ನಿಮ್ಮೆಲ್ಲರ ಸಹಾಯ ಸಹಕಾರದಿಂದ ಎಲ್ಲರೂ ಸೇರಿ ಶ್ರಮಿಸೋಣ ಈ ವಜ್ರ ಸಂಭ್ರಮ-24 ಕಾರ್ಯಕ್ರಮ ನ ಭೂತೊ ನ ಭವಿಷ್ಯತಿ ಎಂದರೆ ತಪ್ಪಾಗದೆಂದು ಹೇಳಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕಾಲೇಜಿನ ಸಂಗೀತ ವಿಭಾಗದ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಪ್ರಸ್ತುತವಾಯಿತು. ಡಿ.ಜಿ.ಹೆಗಡೆ ಬೈರಿ ಎಲ್ಲರನ್ನು ಸ್ವಾಗತಿಸಿ ಪರಿಚಯಿಸಿ ಶಾಲು ಹೊದಿಸಿ ಸ್ವಾಗತ ಕೋರಿದರು. ಆರ್.ಎ. ಖಾಜಿ ಅವರು ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿಕೊಟ್ಟರು. ಸದಾ ಚಟುವಟಿಕೆಯ ಸನ್ಮಾನ್ಯ ನಾಗೇಂದ್ರ ಮಾರ್ಕಾಂಡೆಯವರು ಪ್ರತಿಯೊಂದು ಕೆಲಸದಲ್ಲೂ ಆಸಕ್ತಿ ವಹಿಸಿ ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾದವರು. ಪ್ರಾಂಶುಪಾಲರಾದ ಡಾ. ಟಿ.ಎಸ್. ಹಳೆಮನೆಯವರು ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಉಪಾಧ್ಯಕ್ಷರು ಸದಸ್ಯರು ಸಿಬ್ಬಂದಿ ವರ್ಗದವರು ಮತ್ತು ಹಳೆಯ ವಿದ್ಯಾರ್ಥಿಗಳ ಬಂಧು ಬಾಂಧವರು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು. ವಿ.ಪಿ. ಹೆಗಡೆ ಹನಮಂತಿ ಅವರು ವಂದನಾರ್ಪಣೆ ಮಾಡುತ್ತ 60ರಲ್ಲಿ ಅರಳು ಮರುಳು ಹೇಳುತ್ತಾರೆ ಆದರೆ 80 ರಲ್ಲೂ ನಮ್ಮ ಮಿತ್ರರು ಮರಳಿ ಅರಳು ಎನ್ನುವ ಧ್ಯೇಯ ವಾಕ್ಯದಂತೆ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿದ್ದಾರೆ ಎನ್ನುತ್ತ ಎಲ್ಲರನ್ನು ಆತ್ಮೀಯವಾಗಿ ವಂದಿಸಿದರು. ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ. ಕೃಷ್ಣಮೂರ್ತಿಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

Share This
300x250 AD
300x250 AD
300x250 AD
Back to top