Slide
Slide
Slide
previous arrow
next arrow

ಪರಿಸರ ನಮ್ಮೆಲ್ಲರದ್ದು ಎಂಬ ಪ್ರಜ್ಞೆಯಿರಲಿ: ಸಿಎ ಚಂದ್ರಶೇಖರ್ ಶೆಟ್ಟಿ

300x250 AD

ಶಿರಸಿ: ಇಲ್ಲಿನ ನರೇಬೈಲ್ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.11ರಂದು ವಿದ್ಯಾರ್ಥಿಗಳಿಗೆ ಕರಿಯರ್ ಗೈಡನ್ಸ್ ಮತ್ತು ಪ್ಲಾಸ್ಟಿಕ್ ಬಳಕೆಯ ಪರಿಣಾಮಗಳ ಬಗ್ಗೆ ಕಾರ್ಯಕ್ರಮ ನಡೆಯಿತು.

ಕಾಪ್ಸ್ ಕೋಚಿಂಗ್ ಸೆಂಟರ್ ಇದರ ಸಂಸ್ಥಾಪಕ ಮತ್ತು ಕಾಪ್ಸ್ ಎನ್‌ಜಿಒ ಇದರ ಸಂಸ್ಥಾಪಕರಾದ ಸಿಎ ಚಂದ್ರಶೇಖರ್ ಶೆಟ್ಟಿ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಪರಿಸರ ಸಂರಕ್ಷಣೆಯ ಜಾಗೃತಿ ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು ನಾನು ಬದಲಾದರೆ ದೇಶ ಬದಲಾಗುತ್ತದೆ ಎಂದು ಭಾವಿಸಿ ಎಲ್ಲರೂ ಸ್ವಪ್ರಜ್ಞೆಯಿಂದ ಕಾಳಜಿವಹಿಸಬೇಕು. ಪರಿಸರ ನಮ್ಮದು ಆದರೆ ನನ್ನದಲ್ಲ. ಈ ಪ್ರಜ್ಞೆ ನಮಗಿರಬೇಕು ಎಂದು ಹೇಳಿದರು. ಪ್ಲಾಸ್ಟಿಕ್ ಮುಕ್ತ ಪರಿಸರ ಕುರಿತು ಮಾರ್ಗದರ್ಶನ ನೀಡುತ್ತ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರದಲ್ಲಿ ಅವು ಕರಗದೇ ಪ್ರಾಣಿಗಳ ಹತ್ಯೆಗೆ ಕಾರಣವಾಗುತ್ತಿದೆ. ಪ್ಲಾಸ್ಟಿಕ್ ಬಳಸುವುದು ‘ಪಾಪ’ ಪ್ಲಾಸ್ಟಿಕ್ ತ್ಯಜಿಸಿದರೆ ‘ಪುಣ್ಯ’ ಎಂಬ ತಿಳುವಳಿಕೆ ನಮಗೆಲ್ಲರಿಗೂ ಅಗತ್ಯವಾಗಿ ಬೇಕು ಎಂದು ಹೇಳಿದರು. ಮಕ್ಕಳೆಲ್ಲರೂ ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದಿ ವಿದ್ಯೆಯನ್ನು ಗೌರವಿಸಿ ಒಳ್ಳೆಯ ಸಂಸ್ಕಾರವನ್ನು ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು. ಮನುಷ್ಯನು ಮನುಷ್ಯನಾಗಿ ಬದುಕುವುದನ್ನು ಕಲಿಯಬೇಕು .ಇಷ್ಟದ ಕಲಿಕೆಗೆ ಶಿಕ್ಷಕರ ಬಳಿ ಮತ್ತು ಪಾಲಕರ ಬಳಿ ಚರ್ಚಿಸಿ ಆಯ್ಕೆ ಮಾಡಬೇಕು ಅದೇರಿತಿ ಸಂಶೋಧನೆಗೆ ಮಹತ್ವ ನೀಡಿ ಭಾರತಕ್ಕೆ ನಿಮ್ಮ ಸೇವೆ ಇರಲಿ ಎಂದು ಶುಭ ಹಾರೈಸಿದರು.

300x250 AD

ಸಭೆಯಲ್ಲಿ ಮಿಯಾರ್ಡ್ಸ ಸಂಸ್ಥೆಯ ಸಂಸ್ಥಾಪಕರಾದ ಎಲ್.ಎಮ್.ಹೆಗಡೆ ಉಪಸ್ಥಿತರಿದ್ದು, ಮಕ್ಕಳು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ ಮಾಡಿ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಆಶಿಸಿದರು. ಮುಖ್ಯೋಪಾಧ್ಯಾಯರಾದ ಸಿಂಧೂರ ಭಟ್ಟರವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ನಂತರ ಅತಿಥಿಗಳು ಶಾಲಾ ಆವರಣದಲ್ಲಿ ಗಿಡ ನೆಡುವದರ ಮೂಲಕ ಕಾರ್ಯಕ್ರಮ ಸಮಾಪ್ತಿಯಾಯಿತು .ಕಾರ್ಯಕ್ರಮದಲ್ಲಿ ಕಾಪ್ಸ್ ಕೋಂಚಿಂಗ್ ಸೆಂಟರ್ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು,ವಿದ್ಯಾರ್ಥಿಗಳು ಹಾಜರಿದ್ದರು.

Share This
300x250 AD
300x250 AD
300x250 AD
Back to top