Slide
Slide
Slide
previous arrow
next arrow

‘ಶೈಕ್ಷಣಿಕ ಪ್ರಗತಿಯಲ್ಲಿ ಸರಕಾರಿ ಶಾಲೆಗಳು ಹಿಂದೆ ಬಿದ್ದಿಲ್ಲ’: ಮಂಗಳಲಕ್ಷ್ಮೀ ಪಾಟೀಲ್

300x250 AD

‘ಸರ್ಕಾರಿ ಶಾಲೆಯಲ್ಲೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗುವ ಶಿಕ್ಷಕರಿದ್ದಾರೆ’

ಅಂಕೋಲಾ: ಶೈಕ್ಷಣಿಕ ಪ್ರಗತಿಯಲ್ಲಿ ಸರಕಾರಿ ಶಾಲೆಗಳು ಹಿಂದೆ ಬಿದ್ದಿಲ್ಲ. ಉತ್ತಮ ಸಾಧನೆ ತೋರಿಸುತ್ತಿವೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ದೀಪವಾಗಬಲ್ಲ ಶಿಕ್ಷಕರು ಸರಕಾರಿ ಶಾಲೆಯಲ್ಲೂ ಇದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಲಕ್ಷ್ಮೀ ಪಾಟೀಲ ಹೇಳಿದರು

300x250 AD

ಅವರು ಬೆಳಂಬಾರ ಮುದ್ರಾಣಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುತ್ತೂಟ್ ಫೈನಾನ್ಸ್ ಮತ್ತು ಸಮರ್ಥ ಸಹಕಾರಿ ಟ್ರಸ್ಟ್ ಮಂಗಳೂರು ಇವರ ಸಹಯೋಗದಲ್ಲಿ ನಡೆದ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿ ಸರಕಾರಿ ಶಾಲೆಗಳು ಶಿಕ್ಷಣದಲ್ಲಿ ಉತ್ತಮ ಪ್ರಗತಿ ಸಾಧಿಸಿವೆ. ಖಾಸಗೀ ಸಹಭಾಗಿತ್ವದಲ್ಲಿ ಅವಶ್ಯಕ ಆಧುನಿಕ ಸವಲತ್ತುಗಳು ದೊರೆತರೆ ಸರಕಾರೀ ಶಾಲೆಯ ಮಕ್ಕಳಿಗೂ ಉಪಯೋಗವಾಗುತ್ತದೆ. ಇಂಟರನೆಟ್ ತಂತ್ರಜ್ಞಾನವನ್ನು ಬಳಸಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಬೋಧಿಸಬಲ್ಲ ಶಿಕ್ಷಕರು ಶಿಕ್ಷಕಿಯರು ಸರಕಾರೀ ಶಾಲೆಯಲ್ಲಿದ್ದಾರೆ ಎಂದರು ಹಾಗೂ ಬೆಳಂಬಾರ ಶಾಲೆಯನ್ನು ಆಯ್ಕೆ ಮಾಡಿ ಸ್ಮಾರ್ಟ್ ಕ್ಲಾಸ್ ನಡೆಸಲು ಅತ್ಯಾಧುನಿಕ ಪರಿಕರಗಳನ್ನು ಕೊಡುಗೆಯಾಗಿ ನೀಡಿದ ಮುತ್ತೂಟ್ ಫೈನಾನ್ಸ್ ಮತ್ತು ಸಮರ್ಥ ಸಹಕಾರಿ ಟ್ರಸ್ಟ್ ಸೌಲಭ್ಯ ದೊರಕಿಸಲು ಹೆಚ್ಚಿನ ಮುತುವರ್ಜಿ ವಹಿಸಿದ ಅಶೋಕ ಗೌಡ ಅವರ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮರ್ಥ ಸಹಕಾರಿ ಟ್ರಸ್ಟ್ ಮಂಗಳೂರು ಇದರ ಮ್ಯಾನೇಜಿಂಗ್ ಟ್ರಸ್ಟೀ ಯು ಕಿರಣ ಉರ್ವ ಮಾತನಾಡಿದರು. ಮುತ್ತೂಟ್ ಫೈನಾನ್ಸ್ ಮಂಗಳೂರು ಇದರ ಸಿಎಸ್ಆರ್ ಮ್ಯಾನೇಜರ್ ಪ್ರಸಾದ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈರಾಡ ಸಂಸ್ಥೆಯ ಅಧಿಕಾರಿ ಸಿ.ಎಸ್. ಗೌಡ ಮಾತನಾಡಿದರು. ವೇದಿಕೆಯಲ್ಲಿ ಮುತ್ತೂಟ್ ಫೈನಾನ್ಸ್ ಹುಬ್ಬಳ್ಳಿ ವಲಯದ ರೀಜನಲ್ ಮ್ಯಾನೇಜರ ಸಿದ್ದೇಶ ಪಿ.ಕೆ., ಹುಬ್ಬಳ್ಳಿ ವಲಯದ ರೀಜನಲ್ ಅಡ್ಮಿನಿಸ್ಟ್ರೇಟಿವ್ ಮ್ಯಾನೇಜರ್ ಶಹನವಾಜ್, ಶಿರಸಿ ಕ್ಲಸ್ಟರನ ಕ್ಲಸ್ಟರ್ ಮ್ಯಾನೇಜರ ಸಯ್ಯದ್ ಮುದಾಸ್ಸಿರ, ಅಂಕೋಲಾ ಶಾಖೆಯ ಬ್ರಾಂಚ್ ಮ್ಯಾನೇಜರ ಸಂದರ್ಶ ಪಿ ಎಮ್, ಮೈರಾಡ ಸಂಸ್ಥೆಯ ಅಧಿಕಾರಿ ಸುರೇಶ ಶೆಟ್ಟಿ, ಬೆಳಂಬಾರ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಖಾರ್ವಿ, ಬೆಳಂಬಾರ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷೆ ಅನುಪ ಖಾರ್ವಿ, ಶಾಲೆಯ ಮಖ್ಯಾಧ್ಯಾಪಕಿ ಇಂದಿರಾ ಹಾರವಾಡೇಕರ, ಸಲಹಾ ಸಮಿತಿಯ ಸದಸ್ಯ ಮಂಜುನಾಥ ನಾಯ್ಕ ಉಪಸ್ಥಿತರಿದ್ದರು. ಶಿಕ್ಷಕ ರಾಮನಾಥ ಸ್ವಾಗತಿಸಿದರು. ನಿಸರ್ಗ ಸಂಪನ್ಮೂಲ ಕೇಂದ್ರದ ವ್ಯವಸ್ಥಾಪಕ ಅಶೋಕ ಗೌಡ ನಿರ್ವಹಿಸಿದರು. ಶಾಲೆಯ ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು, ಸ್ವಸಹಾಯ ಸಂಘಗಳ ಸದಸ್ಯರು, ಪಾಲಕರು ಹಾಗೂ ಊರಿನ ಪ್ರಮುಖರಾದ ಗೋಪಾಲ ಗೌಡ, ಮೋಹನ ಖಾರ್ವಿ, ಎಸ್‌ಡಿಎಮ್‌ಸಿ ಸದಸ್ಯರು ಇನ್ನಿತರರು ಇದ್ದರು.

Share This
300x250 AD
300x250 AD
300x250 AD
Back to top