ಹೊನ್ನಾವರ : ಕಳೆದ ಕೆಲವು ತಿಂಗಳಿನಿಂದ ತಹಸೀಲ್ದಾರ್ ಕಚೇರಿಯಲ್ಲಿ ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದ್ದ ಆಧಾರ್ ಸರ್ವಿಸ್ ಪುನಃ ಪ್ರಾರಂಭಗೊಂಡಿದೆ.
ಸಾರ್ವಜನಿಕರಿಗೆ ತೀರಾ ಅಗತ್ಯ ಇರುವ ಆಧಾರ್ ತಿದ್ದುಪಡಿ, ಮೊಬೈಲ್ ನಂಬರ್ ಜೋಡಣೆ ಹೀಗೆ ಇನ್ನಿತರ ಕೆಲಸ ಆಗದೆ ಬೇರೆ ತಾಲೂಕಿಗೆ, ಕುಮಟಕ್ಕೆ ಹೋಗುವ ಪರಿಸ್ಥಿತಿ ಉಂಟಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ವರದಿ ಕೂಡಾ ಮಾಡಲಾಗಿತ್ತು. ಇದೀಗ ಮತ್ತೆ ಪುನಃ ತಹಸೀಲ್ದಾರ್ ಕಚೇರಿಯಲ್ಲಿ ಆಧಾರ್ ಸೇವೆ ಪ್ರಾರಂಭಗೊಂಡಿದ್ದು, ಆಧಾರ್ ಕಾರ್ಡ್ಗೆ ಸಂಬಂಧ ಪಟ್ಟ ಕೆಲಸಕ್ಕೆ ಸಾರ್ವಜನಿಕರು ತಹಸೀಲ್ದಾರ್ ಕಚೇರಿಯಲ್ಲಿ ನಿಗದಿ ಪಡಿಸಿದ ಸಮಯ ಮತ್ತು ನಿಯಮದ ಅನುಗುಣವಾಗಿ ಸಹಕರಿಸಿ ತಮ್ಮ ಕೆಲಸ ಮಾಡಿಕೊಳ್ಳಬಹುದಾಗಿದೆ.