Slide
Slide
Slide
previous arrow
next arrow

ಲಯನ್ಸ್ ಕ್ಲಬ್ ಬನವಾಸಿ, ಲಿಯೋ ಲಯನ್ ಕ್ಲಬ್ ಅಸ್ತಿತ್ವಕ್ಕೆ

300x250 AD

ಶಿರಸಿ: ಶಿರಸಿ ಲಯನ್ಸ್ ಕ್ಲಬ್ ಮುಂದಾಳತ್ವದಲ್ಲಿ ಲಯನ್ಸ್ ಕ್ಲಬ್ ಬನವಾಸಿ ಮತ್ತು ಲಿಯೋ ಲಯನ್ ಶಿರಸಿ ಸಹ್ಯಾದ್ರಿ ಎಂಬ ಎರಡು ಹೊಸ ಕ್ಲಬ್‌ಗೆ ಚಾಲನೆ  ನೀಡಲಾಯಿತು.

ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ MJF ಲಯನ್ ಅಶೋಕ್ ಹೆಗಡೆ ಇವರು ಇದರ ರೂವಾರಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಲಯನ್ ಅಶೋಕ್ ಹೆಗಡೆ ಮತ್ತು  ಲಿಯೋ ಕ್ಲಬ್ ಶ್ರೀನಿಕೇತನ ಅಧ್ಯಕ್ಷೆ ಲಿಯೋ ಸಿರಿ ಅಶೋಕ್ ಹೆಗಡೆ ಶ್ರೀನಿಕೇತನ ಶಾಲೆಗೆ ಟೇಬಲ್ ಟೆನ್ನಿಸ್‌ನ ಟೇಬಲ್ ಅನ್ನು ದೇಣಿಗೆಯಾಗಿ ನೀಡಿದ್ದಾರೆ. ಹಾಗೆ ಲಯನ್ಸ್ ಶಾಲೆಗೆ ನಾಲ್ಕು ಬೆಂಚುಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
 ಈ ಕಾರ್ಯಕ್ರಮದಲ್ಲಿ ಇಡೀ ವರ್ಷದ ಕಾರ್ಯ ಸಾಧನೆಯ ರಿಪೋರ್ಟ ಓದಲಾಯಿತು. ಈ ಕಾರ್ಯಕ್ರಮದಲ್ಲಿ ಅಂತರ್ ಜಿಲ್ಲೆ 317 ಇದರ  ಅಧ್ಯಕ್ಷರಾದ PMJF ಲಯನ್ ರಾಜಶೇಖರಯ್ಯ ಅವರ ಪತ್ನಿ ಲಯನ್ ಪ್ರೇಮ, ಡಿಸ್ಟ್ರಿಕ್ಟ್ ಗವರ್ನರ್ PMJF ಲಯನ್ ಅರ್ಲ್ ಬ್ರಿಟೋ ಅವರ ಪತ್ನಿ ಲಯನ್ ಗ್ಲೆಂಡಾ ಬ್ರಿಟೋ,  ಡಿಸ್ಟ್ರಿಕ್ಟ್ ಗವರ್ನರ್ (ಚುನಾಯಿತ) MJF   ಲಯನ್ ಮನೋಜ ಮಾನೇಕ್ ಅವರ ಪತ್ನಿ ಲಯನ್ ರಕ್ಷಾ, PMJF  ಲಯನಗ DR. ರವಿ ಹೆಗಡೆ ಹೂವಿನ್ಮನೆ (PDG), PMJF Lion N M Hegde (PDG 317c)ಲಯನ್ ಐಶ್ವರ್ಯ ಮಾಸೂರ್ಕರ್ (RC), ಲಯನ್  ವಿನಯ ಹೆಗಡೆ ( ZC),   ಲಿಯೋ ಡಿಸ್ಟ್ರಿಕ್ಟ್ ಪ್ರೆಸಿಡೆಂಟ್ ಲಿಯೋ ಇಮಿರ್ ಬ್ರಿಟೋ, ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷ MJF ಲಯನ್ ಡಾ. ಅಶೋಕ್ ಹೆಗಡೆ, ಸೆಕ್ರೆಟರಿ ಲಯನ್ ಜ್ಯೋತಿ ಅಶ್ವಥ್ ಹೆಗಡೆ, ಖಜಾಂಚಿ MJF ಲಯನ್ ಶರಾವತಿ ಭಟ್, ಲಿಯೋ ಕ್ಲಬ್ ಪ್ರೆಸಿಡೆಂಟ್ ಲಿಯೋ ಭುವನ ಹೆಗಡೆ, ಲಿಯೋ ಶ್ರೀನಿಕೇತನ ಅಧ್ಯಕ್ಷೆ ಲಿಯೋ ಸಿರಿ ಹೆಗಡೆ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಲ್ಲ ಸದಸ್ಯರುಗಳಿಗೆ ಗೋಲ್ಡನ್ ಜುಬಿಲಿ ಪಿನ್ ಗಳನ್ನು ನೀಡಲಾಯಿತು. ಕಾರ್ಯಕ್ರಮಕ್ಕೆ ಗೋವಾ ಲಯನ್ ಕ್ಲಬ್ ಸದಸ್ಯರುಗಳು ಆಗಮಿಸಿದ್ದರು.ಹಾಗೆ 317B ಯ ಇತರ ಲಯನ್ ಕ್ಲಬ್ ಗಳಿಂದ ಲಯನ್ಸ್ ಸದಸ್ಯರುಗಳು ಆಗಮಿಸಿದ್ದು ಇಲ್ಲಿ ಸ್ಮರಣಿಯ. ಹಾಗೆ ಶಿರಸಿ ಲಯನ್ಸ್ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.   ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷ MJF ಲಯನ್ ಅಶೋಕ್ ಹೆಗಡೆ ಎಲ್ಲರನ್ನು ಸ್ವಾಗತಿಸಿದರು. MJF ಲಯನ್ ರಮಾ ಪವರ್ಧನ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕ್ಲಬ್ ಸೆಕ್ರೆಟರಿ ಲಯನ್ ಜ್ಯೋತಿ ಅಶ್ವಥ್ ಇವರು ಎಲ್ಲರನ್ನು ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top