ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಎನ್.ಎಸ್.ಎಸ್., ರೆಡ್ರಿಬ್ಬನ್ ಹಾಗೂ ರೆಡ್ಕ್ರಾಸ್ ಘಟಕ, ರೋಟರಿ ಕ್ಲಬ್ ಕುಮಟಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಉತ್ತರಕನ್ನಡ ಜಿಲ್ಲಾ ಬ್ಲಡ್ಬ್ಯಾಂಕ್ ಕುಮಟಾದಲ್ಲಿ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳ ರಕ್ತದಾನ ಶಿಬಿರವನ್ನು ನಡೆಸಲಾಯಿತು.
ಇಪ್ಪತ್ತು ವಿದ್ಯಾರ್ಥಿಗಳು, ಪ್ರಾಚಾರ್ಯರಾದ ಡಾ. ಪ್ರೀತಿ ಭಂಡಾರಕರ ಹಾಗೂ ರೊಟೆರಿಯನ್ ನಿಖಿಲ್ ಕ್ಷೇತ್ರಪಾಲ ಇವರು ರಕ್ತದಾನಗೈದು ಶಿಬಿರವನ್ನು ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಬ್ಲಡ್ಬ್ಯಾಂಕಿನ ಸಹಕಾರ್ಯದರ್ಶಿ ಡಾ. ನಮೃತಾ ಶಾನಭಾಗ ರೋಟರಿ ಅಧ್ಯಕ್ಷ ಎನ್. ಆರ್. ಗಜು, ಕಾರ್ಯದರ್ಶಿಗಳಾದ ರಾಮದಾಸ ಗುನಗಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಉಮೇಶ ನಾಯ್ಕ ಎಸ್. ಜೆ., ಎನ್.ಎಸ್.ಎಸ್., ರೆಡ್ಕ್ರಾಸ್, ರೆಡ್ರಿಬ್ಬನ್ ಅಧಿಕಾರಿಗಳಾದ ಶ್ರೀಮತಿ ರೇಖಾ ಯೆಲಿಗಾರ ಉಪಸ್ಥಿತರಿದ್ದರು. ಡಾ. ನಮೃತಾ ಶಾನಭಾಗ ಇವರು ಶಿಬಿರಾರ್ಥಿಗಳಿಗೆ ರಕ್ತದಾನದ ಮಹತ್ವದ ಕುರಿತು ಜ್ಞಾನ ನೀಡುತ್ತ ರಕ್ತದಾನ ಮಾಡಿದ ವಿದ್ಯಾರ್ಥಿಗಳ ಕುರಿತು ವೈಯಕ್ತಿಕವಾಗಿ ವಿಶೇಷ ಕಾಳಜಿ ವಹಿಸಿದರು. ಬ್ಲಡ್ಬ್ಯಾಂಕ್ ವೈದ್ಯೆ ಡಾ. ಕಾತ್ಯಾಯಿನಿ ಭಟ್, ಸರಳಾ ಗೊನ್ಸಾಲ್ವಿಸ್, ಸನತ್ ಭಂಡಾರಿ ಮೊದಲಾದವರು ರಕ್ತದಾನ ಶಿಬಿರ ಯಶಸ್ವಿಯಾಗುವಲ್ಲಿ ವಿಶೇಷ ಸಹಕಾರ ನೀಡಿದರು.