ನ್ಯಾಯಾಲಯದ ಅದೇಶಕ್ಕೆ ಕೆಲವರ ಅಸಮಾಧಾನ | ಅಧಿಕಾರ ಕಳೆದುಕೊಂಡವರ ಗೋಳಾಟ
ಶಿರಸಿ: ಪ್ರತಿಷ್ಠಿತ ಸಹಕಾರಿ ಸಂಸ್ಥೆ ಟಿಎಸ್‌ಎಸ್ ಸಂಸ್ಥೆಗೆ ಆಡಳಿತಾಧಿಕಾರಿ ನೇಮಕ ಮಾಡಿದ ವಿಚಾರವಾಗಿ ಕೆಲ ಶೇರು ಸದಸ್ಯರು ಹಾಗು ಈಗ ಅಧಿಕಾರ ಕಳೆದುಕೊಂಡಿರುವ ಸಂಘದ ನಿರ್ದೇಶಕರು ಶನಿವಾರ ಬೆಳಿಗ್ಗೆ ಸಂಘದ ಆವರಣಕ್ಕೆ ಆಗಮಿಸಿ ನ್ಯಾಯಲಯದ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಸದಸ್ಯರನ್ನು ಉದ್ಧೇಶಿಸಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಓರ್ವರನ್ನು ಹೊರತುಪಡಿಸಿ 14 ಸ್ಥಾನಗಳಲ್ಲಿ ನಮ್ಮ ತಂಡದ ಸದಸ್ಯರು ಆಯ್ಕೆಯಾಗಿದ್ದರು. ಸೋತವರು ಮತ್ತು ಸಂಸ್ಥೆಯನ್ನು ವಿಶೇಷವಾಗಿ ಬಳಸಿಕೊಂಡಿದ್ದವಲ್ಲ ಸೇರಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ಚುನಾವಣೆ ಸರಿಯಾದ ಕ್ರಮದಲ್ಲಿ ನಡೆದಿಲ್ಲ ಎಂದು ಆರೋಪಿಸಿದ್ದರು. ಶುಕ್ರವಾರ ಈ ಬಗ್ಗೆ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರು ತೀರ್ಪು ನೀಡಿದ್ದಾರಂತೆ. ಆದರೆ, ತೀರ್ಪಿನ ಪ್ರತಿ ನಮಗೆ ಇನ್ನೂ ತಲುಪಿಸಿಲ್ಲ. ಮುಂಬರುವ ಆರು ಮತ್ತೆ ಚುನಾವಣೆ ನಡೆಸಬೇಕು ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಾವು ಮುಂದೇನು ಮಾಡಬೇಕು ಎಂಬ ಬಗ್ಗೆ ಕಾನೂನು ಸಲಹೆ ಪಡೆದುಕೊಳ್ಳುತ್ತೇವೆ ಎಂದರು. ಸಹಕಾರಿ ನ್ಯಾಯಾಲಯದ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅನೇಕ ಸದಸ್ಯರು, ಪ್ರತಿಭಟನೆ ನಡೆಸಲು ಮುಂದಾದರು.
ನಂತರದಲ್ಲಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಕಛೇರಿಗೆ ತೆರಳಿ, ಪ್ರಸ್ತುತ ವಿದ್ಯಮಾನಗಳನ್ನು ವಿವರಿಸಿ ಶಾಸಕರಿಗೆ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಶಾಸಕ ಭೀಮಣ್ಣ ತನಗೆ ಇದರ ಮಾಹಿತಿಯಿಲ್ಲ. ಇದಕ್ಕೆ ಸಂಬಂಧಿಸಿ ಸಹಕಾರಿ ಸಚಿವರ ಬಳಿ ಮಾತನಾಡುವುದಾಗಿ ಭರವಸೆ ನೀಡಿದರು.