ಹೊನ್ನಾವರ: ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡುವ ಮೂಲಕ ಆತ್ಮ ಶಿಕ್ಷಣವನ್ನು ಪಡೆದುಕೊಂಡು ವೈಜ್ಞಾನಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಪರಮಪೂಜ್ಯ ಮಾರುತಿ ಗುರೂಜಿ ಅವರು ನುಡಿದರು.
ಇವರು ಗೇರುಸೊಪ್ಪೆಯ ಬಂಗಾರಮಕ್ಕಿಯಲ್ಲಿ ಜರುಗಿದ “ರಾಜ್ಯಸ್ತರ ಸಂಸ್ಕೃತ ಭಾಷಾ ಬೋಧನ ವರ್ಗ”ದ ಸಾನಿಧ್ಯ ವಹಿಸಿ ಮಾತನಾಡಿದರು. ಸಂಸ್ಕೃತವು ವೇದ ಭಾಷೆಯಾಗಿದೆ, ಜ್ಞಾನಭಾಷೆಯಾಗಿದೆ ಎಂದರು. ಸಂಸ್ಕೃತ ಭಾರತೀಯ ಪ್ರಧಾನ ಸಂಯೋಜಕರಾದ ವಿಶ್ರಾಂತ ಪ್ರಾಚಾರ್ಯ ವಿ.ಜಿ.ಹೆಗಡೆ ಗುಡ್ಗೆ ಸ್ವಾಗತಿಸಿ ಸಂಸ್ಕೃತ ಭಾಷಾ ಬೋಧನಾ ವರ್ಗದ ಗುರಿ ಮತ್ತು ಉದ್ದೇಶಗಳನ್ನು ವಿವರಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವೈದ್ಯರು, ಇಂಜಿನಿಯರ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ ಅಹಲ್ಯಾ ಶರ್ಮ, ವಿಜ್ಞಾನಿಗಳಾದ ಸುರೇಂದ್ರ ಕುಲಕರ್ಣಿ, ಸಾಧಕರಾದ ಪದ್ಮನಾಭ ಶಾನಭಾಗ ಮೊದಲಾದವರು ಭೇಟಿ ನೀಡಿ ಸಂತಸವನ್ನು ವ್ಯಕ್ತಪಡಿಸಿದರು. ಶಿಕ್ಷಕ ಕೃಷ್ಣಮೂರ್ತಿ ವೇದಘೋಷ ಗೈದರು, ಅರ್ಚನಾ ಪ್ರಾರ್ಥಿಸಿದರು, ವೆಂಕಟೇಶ್ ಬಳ್ಳಾರಿಯವರು ನಿರೂಪಿಸಿದರು. ಸಂಘದ ಅಧ್ಯಕ್ಷರಾದ ಈಶ್ವರ ಭಟ್ ಮತ್ತು ಪ್ರದೀಪ್ ಖರ್ವ ಶಿಬಿರದ ಯಶಸ್ಸಿಗೆ ಕಾರಣಿಕರ್ತರಾದರು.