Slide
Slide
Slide
previous arrow
next arrow

ಒಲಂಪಿಯಾಡ್ ಪರೀಕ್ಷೆ: ವಿಧಾತ್ರಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಸಾಧನೆ

300x250 AD

ಕುಮಟಾ: ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ಸ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ, ಕೊಂಕಣ ಎಜುಕೇಶನ್ ಟ್ರಸ್ಟ್ ನ ಅಂಗಸಂಸ್ಥೆಯಾದ ಸಿ.ವಿ.ಎಸ್. ಕೆ. ಪ್ರೌಢಶಾಲೆಯ ಒಂಭತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ 2023-24 ನೇ ಸಾಲಿನಲ್ಲಿ ಸೈನ್ಸ್ ಒಲಂಪಿಯಾಡ್ ಫೌಂಡೆಶನ್ (SOF) ನಡೆಸುವ ನ್ಯಾಷನಲ್ ಸೈನ್ಸ್ ಒಲಂಪಿಯಾಡ್ (NSO), ಇಂಟರನ್ಯಾಷನಲ್ ಮ್ಯಾಥಮ್ಯಾಟಿಕ್ಸ್ ಒಲಂಪಿಯಾಡ್(IMO), ಹಾಗೂ ನ್ಯಾಷನಲ್ ಸೈಬರ್ ಒಲಂಪಿಯಾಡ್(NCO) ಪರೀಕ್ಷೆಗಳಿಗೆ ವಿಧಾತ್ರಿ ಅಕಾಡೆಮಿಯು ನುರಿತ ಉಪನ್ಯಾಸಕರುಗಳ ಮೂಲಕ ತರಬೇತಿ ನೀಡಿ, ಪರೀಕ್ಷೆಗೆ ಸಜ್ಜುಗೊಳಿಸಿತ್ತು.

ಒಂಭತ್ತನೆ ತರಗತಿಯ ಕು. ದಿಶಾ, ಕು. ಸ್ನೇಹಾ, ಕು. ನಾಗಶ್ರೀ ನ್ಯಾಷನಲ್ ಸೈನ್ಸ್ ಒಲಂಪಿಯಾಡ್ ನಲ್ಲಿ ಸ್ವರ್ಣ ಪದಕ ಪಡೆದಿದ್ದಾರೆ. ಕು. ದೀಪ್ತಿ, ಕು. ಶ್ರೇಯಸ್, ಕು. ನಿಧಿ ಇಂಟರನ್ಯಾಷನಲ್ ಮ್ಯಾಥಮಾಟಿಕ್ಸ್ ಒಲಂಪಿಯಾಡ್‌ನಲ್ಲಿ ಸ್ವರ್ಣ ಪದಕ ಗಳಿಸಿದ್ದಾರೆ ಹಾಗೂ ಕು. ಅನಿರುದ್ಧ ನ್ಯಾಷನಲ್ ಸೈಬರ್ ಒಲಂಪಿಯಾಡ್‌ನಲ್ಲಿ ಸ್ವರ್ಣ ಪದಕ ಮುಡಿಗೇರಿಸಿಕೊಂಡಿದ್ದಾನೆ. ಹಾಗೆಯೇ ಇತರ ಹದಿನೈದಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಈ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಇಂದು ಕಾಲೇಜಿನಲ್ಲಿ ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಗುರುರಾಜ ಶೆಟ್ಟಿಯವರು ಅಭಿನಂದಿಸಿ, ವಿದ್ಯಾರ್ಥಿಗಳ ಮುಂದಿನ ಶಿಕ್ಷಣ ಹಾಗೂ ಭವಿಷ್ಯಕ್ಕೆ ಶುಭ ಹಾರೈಸಿದರು.

300x250 AD

ಈ ಸಂದರ್ಭದಲ್ಲಿ ಪ್ರಾಚಾರ್ಯರು, ಉಪಪ್ರಾಚಾರ್ಯರು, ಒಲಂಪಿಯಾಡ್ ಪರೀಕ್ಷೆಯ ಸಂಯೋಜಕರಾದ ಗಣಕವಿಜ್ಞಾನ ಉಪನ್ಯಾಸಕ ಗುರುರಾಜ ಶೆಟ್ಟಿಯವರು ಹಾಗೂ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top