ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಸ್ಪಷ್ಟನೆ – TSS
ಸಹಕಾರಿ ಸಂಘಗಳ ಉಪನಿಬಂಧಕರು ಕಾರವಾರ ಇವರ ಆದೇಶದಂತೆ ಎಮ್.ಎಚ್.ನಾಯ್ಕ ಶಿಕ್ಷಣಾಧಿಕಾರಿ, ಶಿರಸಿ ಆದ ನಾನು ಪ್ರತಿಷ್ಠಿತ ಟಿ.ಎಸ್.ಎಸ್. ನ ಆಡಳಿತಾಧಿಕಾರಿಯಾಗಿ ಇಂದಿನಿಂದ ಅಧಿಕಾರ ಸ್ವೀಕರಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ನಾನು ಸರ್ಕಾರದ ಪ್ರತಿನಿಧಿಯಾಗಿ ಸದಸ್ಯರಿಗೆ ತಿಳಿಸುವುದೇನೆಂದರೆ ದಿ.ಶ್ರೀಪಾದ ಹೆಗಡೆ ಕಡವೆಯವರ ಆಶಯದಂತೆ ಸಂಘದ ಯಾವತ್ತೂ ಸದಸ್ಯರ ಹಿತ ಕಾಪಾಡಿ ಸುಗಮವಾಗಿ ಸಂಘವನ್ನು ಮುನ್ನಡೆಸುವ ಭರವಸೆಯನ್ನು ನೀಡುತ್ತಿದ್ದೇನೆ. ಯಾವುದೇ ಸದಸ್ಯರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸಂಘದ ಯಾವುದೇ ವ್ಯವಹಾರದ ಕುರಿತು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ. ಹಾಗೆಯೇ ಈಗ ನಡೆಯುತ್ತಿರುವ ಎಲ್ಲಾ ವ್ಯವಹಾರಗಳು ಎಂದಿನಂತೆ ಸುಗಮವಾಗಿ ನಡೆಯಲಿವೆ. ಸಂಘದ ಯಾವತ್ತೂ ಸದಸ್ಯರು ಈ ಮುಂಚಿನಂತೆ ಸಹಕಾರ ನೀಡಲು ಕೋರುತ್ತಿದ್ದೇನೆ.
ಎಂ. ಎಚ್. ನಾಯ್ಕ, ಆಡಳಿತಾಧಿಕಾರಿಗಳು
ಟಿ.ಎಸ್.ಎಸ್. ಲಿ., ಶಿರಸಿ
TSS Sirsi
24-05-2024