ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವಾದ ಜಿಟಿಟಿಸಿಯಲ್ಲಿ ಎಸ್ಎಸ್ಎಲ್‌ಸಿ ನಂತರದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಜೊತೆಗೆ ಉದ್ಯೋಗದ ಸುವರ್ಣಾವಕಾಶದ ನಿಟ್ಟಿನಲ್ಲಿ ಡಿಪ್ಲೋಮಾ ಪ್ರವೇಶಕ್ಕೆ ಅರ್ಹ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಆನ್ಲೈನ್ ಅರ್ಜಿ ಸಲ್ಲಿಕೆಗೆ ಮಾತ್ರ ಅವಕಾಶವಿದ್ದು, ಆನ್ಲೈನ್ ಅರ್ಜಿ ಸಲ್ಲಿಕೆಗೆ ದಿನಾಂಕ 27.05.2024 ಕೊನೆಯ ದಿನವಾಗಿರುತ್ತದೆ ಎಂದು ಅಂಬೇವಾಡಿಯ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ಗುರುವಾರ ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಟಿಟಿಸಿ ಕೇಂದ್ರದಲ್ಲಿ ಡಿಪ್ಲೋಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್, ಡಿಪ್ಲೋಮಾ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಿಷನ್ ಲರ್ನಿಂಗ್ ಹಾಗೂ ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಎಂಬ ಮೂರು ಕೋರ್ಸ್ ಗಳಿವೆ. ಪ್ರತಿ ಕೋರ್ಸ್ ನಲ್ಲಿ ಮೂರು ವರ್ಷದ ಕಲಿಕೆ ಮತ್ತು ಒಂದು ವರ್ಷದ ಕಡ್ಡಾಯ ಇಂಡಸ್ಟ್ರಿಯಲ್ ಟ್ರೈನಿಂಗ್ ಇರುತ್ತದೆ. ಆಸಕ್ತ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಇಲ್ಲವೇ ಪಿಯುಸಿ ವಿಜ್ಞಾನ ಇಲ್ಲವೇ ಐಟಿಐ ಅರ್ಹತೆಯನ್ನು ಹೊಂದಿರಬೇಕು. ಐಟಿಐ ಆದ ವಿದ್ಯಾರ್ಥಿಗಳು ಮೂರನೇ ಸೆಮಿಸ್ಟರಿಗೆ ನೇರವಾಗಿ ಪ್ರವೇಶವನ್ನು ಪಡೆಯಬಹುದು. ಮೆರಿಟ್ ಕಮ್ ರೋಸ್ಟರ್ ಪದ್ಧತಿಯ ಮೂಲಕ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಜಿಟಿಟಿಸಿ ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಅನೇಕ ಉದ್ಯೋಗದ ಅವಕಾಶಗಳಿವೆ. ಸ್ವಯಂ ಉದ್ಯೋಗ, ಎಂ.ಎನ್.ಸಿ ಕಂಪನಿಗಳಲ್ಲಿ ಉದ್ಯೋಗ, ವಿದೇಶದಲ್ಲಿ ಉದ್ಯೋಗವಕಾಶ, ಸಾಫ್ಟ್ ಸ್ಕಿಲ್ ಅಭಿವೃದ್ಧಿಗಳು, ಉದ್ಯಮದ ಭೇಟಿಯನ್ನು ಉತ್ತೇಜಿಸುವುದು, ಕೈಗಾರಿಕೆ- ಸಂಸ್ಥೆ -ಪರಸ್ಪರ ಕ್ರಿಯೆ, ಮೂರು ಸೇಮ್ ಆದ ಬಳಿಕ ಬಿ.ಇ, ಬಿ.ಟೆಕ್, ಲ್ಯಾಟರಲ್ ಪ್ರವೇಶಕ್ಕೆ ಅರ್ಹತೆಯ ಪ್ರಯೋಜನ ಇರುವುದರ ಜೊತೆಯಲ್ಲಿ ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಬಾಯ್ಸ್ ಹಾಸ್ಟೆಲ್ ವ್ಯವಸ್ಥೆ ಇದೆ.
ನೂರಕ್ಕೆ ನೂರು ಉದ್ಯೋಗವಕಾಶವನ್ನು ಹೊಂದಿರುವ ಜಿ.ಟಿ.ಟಿ.ಸಿಯಲ್ಲಿ ವ್ಯಾಸಂಗ ಮಾಡಲು ಆಸಕ್ತ ಅಭ್ಯರ್ಥಿಗಳು ಅಂಬೇವಾಡಿಯಲ್ಲಿರುವ ಜಿಟಿಟಿಸಿ ಕಾಲೇಜಿಗೆ ಭೇಟಿಯಾಗಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇಲ್ಲವೇ ಈ ಕೆಳಗಿನ ಮೊಬೈಲ್ ಸಂಖ್ಯೆಗಳಾದ Tel:+918618413074, Tel:+919449356647, Tel:+918105889940, Tel:+919740966471 ಇಲ್ಲವೇ ದೂರವಾಣಿ ಸಂಖ್ಯೆ :Tel:+9108284230437 ಗೆ ಸಂಪರ್ಕಿಸಬಹುದಾಗಿದೆ. ಮೇ 27ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ. ಭವಿಷ್ಯದ ಉನ್ನತಿಗೆ ಉಪಯುಕ್ತವಾಗುವ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ಇರುವ ಜಿಟಿಟಿಸಿಯಲ್ಲಿ ಶಿಕ್ಷಣವನ್ನು ಪಡೆಯಲು ಮಹತ್ವದ ಅವಕಾಶ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಟಿಟಿಸಿ ತರಬೇತಿ ಕೇಂದ್ರವು ಪ್ರಕಟಣೆಯಲ್ಲಿ ವಿನಂತಿಸಿದೆ.