Slide
Slide
Slide
previous arrow
next arrow

ಉತ್ತರಕನ್ನಡ ಜಿಲ್ಲೆ ಸಂಸ್ಕಾರಯುತ ಸಹಕಾರಿಗಳ ತವರೂರು; ಮೋಹನದಾಸ ನಾಯಕ

300x250 AD

ಕುಮಟಾ: ಉತ್ತರ ಕನ್ನಡ ಜಿಲ್ಲೆ ಸಂಸ್ಕಾರಯುತ ಸಹಕಾರಿಗಳ ತವರೂರು ಆದರೆ ಕೆಲ ಸಂಸ್ಥೆಯ ಸಿಬ್ಬಂದಿಗಳು ಮಾಡುವ ತಪ್ಪಿನಿಂದ ಜಿಲ್ಲೆಯ ಸಹಕಾರಿಯ ಗೌರವಕ್ಕೆ ಧಕ್ಕೆಯಾಗಿದ್ದು ಇನ್ನು ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಸಹಕಾರಿಯ ತತ್ವಗಳನ್ನು ಅನುಸರಿಸಿ ನಡೆಯಬೇಕು ಎಂದು ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕ.ಸೌ.ಸಹಕಾರಿಯ ಉತ್ತರ ಕನ್ನಡ ಜಿಲ್ಲಾ ನಿರ್ದೇಶಕ ಮೋಹನದಾಸ ನಾಯಕ ಹೇಳಿದರು

ಕುಮಟಾದಲ್ಲಿ ನಡೆದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ತರಬೇತಿಯು ವ್ಯಕ್ತಿಯ ಕೌಶಲ್ಯ ಮತ್ತು ಜ್ಞಾನವನ್ನು ಹೆಚ್ಚಿಸುತ್ತದೆ.ಅವರು ದುಡಿಯುವ ಸಂಸ್ಥೆಯನ್ನು ಅಭಿವೃದ್ಧಿ ಪಡಿಸುತ್ತದೆ. ತರಭೇತಿಯು ಮಾನವ ಸಂಪನ್ಮೂಲದ ಅಭಿವೃದ್ಧಿಯ ಅವಿಭಾಜ್ಯ ಅಂಗ ಎಂದು ಪರಿಗಣಿಸಲಾಗುತ್ತದೆ.ಈ ಜಿಲ್ಲೆ ಸಹಕಾರಿ ಸಂಘದ ಕಾಶಿ, ಸಂಸ್ಕಾರಯುತ ಸಹಕಾರಿಗಳ ತವರೂರು ಆದರೆ ಒಂದೆರಡು ವ್ಯವಸಾಯ ಸೇವಾ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರು ಮಾಡಿದ ತಪ್ಪಿಗೆ ಜಿಲ್ಲೆಯ ಪ್ರತಿಯೊಂದು ಸಹಕಾರಿ ಸಂಸ್ಥೆ ಜಿಲ್ಲೆಯ ಪ್ರತಿಯೊಂದು ಸಹಕಾರಿ ಸಂಸ್ಥೆಗಳನ್ನು ಸಂಶಯದ ದೃಷ್ಟಿಯಿಂದ ನೋಡುವ ಪರಿಸ್ಥಿತಿ ಎದುರಾಗಿದೆ .ಕೆಲವು ಯುವ ಸಹಕಾರಿಗಳು ಆನ್ಲೈನ್ ಮತ್ತು ಕೆಸಿನೋ ದಂತಹ ದುಶ್ಚಟಗಳಿಗೆ ಬಲಿಯಾಗಿ ಸಹಕಾರಿ ಸಂಸ್ಥೆಗಳ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಕಂಡುಬಂದಿದ್ದು ಇಂತಹ ತಪ್ಪನ್ನು ಯಾರೂ ಮಾಡಕೂಡದು .ಸಹಕಾರಿ ರಂಗದ ಹಿರಿಮೆಗೆ ಸಹಕಾರ ನೀಡಬೇಕು ಎಂದರು.ಕಾರ್ಯಕ್ರಮದಲ್ಲಿ ಬೆಳಗಾವಿ ಪ್ರಾಂತೀಯ ವ್ಯವಸ್ಥಾಪಕ ಬಸವರಾಜ ಹೊಂಗಲ್, ರಾಜ್ಯಸೌಹಾರ್ದ ಸಹಕಾರಿಯ ಅಭಿವೃದ್ಧಿ ಅಧಿಕಾರಿ ಗಂಗಾರಾಮ ,ಜಿಲ್ಲಾ ಸಂಯೋಜಕ ಸಂತೋಷ ಕುಮಾರ ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top