Slide
Slide
Slide
previous arrow
next arrow

ನರೇಗಾ ಕಾಮಗಾರಿ ಸ್ಥಳದಲ್ಲಿ ರೋಜಗಾರ ದಿನಾಚರಣೆ

300x250 AD

ಕುಮಟಾ: ತಾಲೂಕಿನ ಕಾಗಾಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರಗತಿ ಹಂತದಲ್ಲಿರುವ ದೊಡ್ಡಕೇರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಗುರುವಾರ ‘ರೋಜಗಾರ ದಿನಾಚರಣೆ’ ಮತ್ತು ‘ವಲಸೆ ಯಾಕ್ರಿ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ’ ಅಭಿಯಾನದ ಅಂಗವಾಗಿ ಕೂಲಿಕಾರರೊಂದಿಗೆ ಮಾಹಿತಿ ವಿನಿಮಯ ಕಾರ್ಯಕ್ರಮ ಗುರುವಾರ ನಡೆಯಿತು.

ಜಿಲ್ಲಾ ಪಂಚಾಯತ್ ಜಿಲ್ಲಾ ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ ಮಾತನಾಡಿ, ಮನರೇಗಾ ಯೋಜನೆಯು ಗ್ರಾಮೀಣ ಭಾಗದ ಜನರಿಗೆ ಜೀವನೋಪಾಯಕ್ಕಾಗಿ ಅದರಲ್ಲೂ ವಿಶೇಷವಾಗಿ ಬರಗಾಲದಂತಹ ಸಂದರ್ಭದಲ್ಲಿ ಕೆಲಸಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಿ, ಸ್ಥಳೀಯವಾಗಿ ಉದ್ಯೋಗ ನೀಡಿ, ಅವರ ಜೀವನ ನಿರ್ವಹಣೆಗೆ ಹೆಗಲಾಗಿ ನಿಂತಿದೆ. ಬೇಸಿಗೆ ತಾಪಮಾನ ಹೆಚ್ಚಾಗುತ್ತಿದ್ದಂತೆ ಕೂಲಿಕಾರರ ಹಿತಕ್ಕಾಗಿ ಕೆಲಸದ ಪ್ರಮಾಣದಲ್ಲಿ 30% ದಷ್ಟು ರಿಯಾಯಿತಿ ನೀಡಿದೆ. ಕೂಲಿ ಮೊತ್ತವನ್ನು 316 ರಿಂದ 349 ಕ್ಕೆ ಹೆಚ್ಚಿಸಿ ದುಡಿಯುವ ಕೈಗಳಿಗೆ ನ್ಯಾಯ ಒದಗಿಸಿದೆ. ಅಲ್ಲದೇ ಜಾನುವಾರ ಕೊಟ್ಟಿಗೆ, ಕುರಿ – ಕೋಳಿ ಶೆಡ್, ಎರೆಹುಳು ತೊಟ್ಟಿ ಸೇರಿದಂತೆ ಹಲವು ವೈಯಕ್ತಿಕ ಸ್ವತ್ತುಗಳ ನಿರ್ಮಾಣಕ್ಕೂ ಅವಕಾಶ ನೀಡಿ ಸ್ವಾವಲಂಬಿ ಜೀವನ ನಡೆಸಲು ಜೊತೆಯಾಗಿ ನಿಂತಿದೆ. ಗ್ರಾಮೀಣ ಭಾಗದ ಜನರು ಅವರಿಗೆಂದೇ ಇರುವ ಮನರೇಗಾ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನವೀನ್ ನಾಯ್ಕ ಮಾತನಾಡಿ, ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಸ್ವತ್ತುಗಳು, ಶಾಲಾ ಕಾಂಪೌಂಡ್, ಶೌಚಾಲಯ, ಆಟದ ಮೈದಾನದಂತಹ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವೈಯಕ್ತಿಕ ಸೌಲಭ್ಯಗಳನ್ನು ಬೇಡಿಕೆ ಆಧಾರದ ಮೇಲೆ ಪೂರೈಸಲಾಗುತ್ತಿದೆ. ಯೋಜನೆಯಡಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಶ್ರಮವಹಿಸಲಾಗುತ್ತಿದೆ ಎಂದರು.
ಬಳಿಕ ಮನರೇಗಾ ಯೋಜನೆಯಡಿ ನಿರ್ಮಾಣಗೊಂಡ ಗುಡ್‌ಕಾಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯ, ಅಘನಾಶಿನಿ ಸರಕಾರಿ ಪ್ರೌಢ ಶಾಲೆಯ ಕಾಂಪೌಂಡ್ ಮತ್ತು ಅಘನಾಶಿನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗಳನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ತಾಂತ್ರಿಕ ಸಂಯೋಜಕರಾದ ಲೋಕೇಶ್, ಎಂಜಿನಿಯರ್ ಕು. ರೂಪಾ, ಕಾಯಕ ಬಂಧು ಮತ್ತು ಗ್ರಾ.ಪಂ. ಸಿಬ್ಬಂದಿ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top