Slide
Slide
Slide
previous arrow
next arrow

ದಾಂಡೇಲಿಯಲ್ಲಿ ಗಾಳಿ-ಮಳೆ : ಹಲವೆಡೆ ಹಾನಿ

300x250 AD

ದಾಂಡೇಲಿ : ಏಕಾಏಕಿ ಸುರಿದ ಗಾಳಿ ಮಳೆಗೆ ನಗರದ ಹಲವೆಡೆ ಹಾನಿ ಸಂಭವಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.

ನಗರದ ಸುಭಾಷ್ ನಗರದಲ್ಲಿರುವ ಮೊಹರಂ ದರ್ಗಾಕ್ಕೆ ಮತ್ತು ಸ್ಥಳೀಯರೊಬ್ಬರ ಮನೆಗೆ ನೀರು ನುಗ್ಗಿ ಹಾನಿಯಾಗಿದೆ. ಹಳೆ ದಾಂಡೇಲಿಯ ಸೆಂಟ್ ಅಂಥೋನಿ ಚರ್ಚಿನ ರಂಗಮಂದಿರದ ಮೇಲೆ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಮರವೊಂದು ಉರುಳಿಬಿದ್ದು ಅಪಾರ ಹಾನಿಯಾಗಿದೆ. ರಭಸವಾಗಿ ಬೀಸಿದ ಗಾಳಿಗೆ ನಗರದ ಹಳೆದಾಂಡೇಲಿ, ಬರ್ಚಿ ರಸ್ತೆ, ಅಂಬೇವಾಡಿ ಮೊದಲಾದ ಕಡೆ ಮರ ಹಾಗೂ ಮರದ ಟೊಂಗೆಗಳು ಮುರಿದು ಬಿದ್ದು ವಿದ್ಯುತ್ ಲೈನಿಗೆ ಹಾನಿಯಾಗಿ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹಾನಿಗೀಡಾದ ವಿದ್ಯುತ್ ಲೈನಿನ ದುರಸ್ತಿ ಕಾರ್ಯವನ್ನು ಹೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಶರವೇಗದಲ್ಲಿ ನಡೆಸುತ್ತಿದ್ದಾರೆ. ಸುಮಾರು ಒಂದುವರೆ ಗಂಟೆಗಳವರೆಗೆ ಸುರಿದ ಗಾಳಿ ಮಳೆಗೆ ನಗರದಲ್ಲಿ ತಕ್ಕಮಟ್ಟಿಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

300x250 AD
Share This
300x250 AD
300x250 AD
300x250 AD
Back to top