Slide
Slide
Slide
previous arrow
next arrow

ಹಾಡುಹಗಲೇ ಮನೆಗೆ ನುಗ್ಗಿದ ಕಳ್ಳರು: ಲಕ್ಷಾಂತರ ರೂ.ಚಿನ್ನಾಭರಣ ಕಳವು

300x250 AD

ಭಟ್ಕಳ: ಮನೆಯಲ್ಲಿ ಯಾರು ಇಲ್ಲದ ವೇಳೆ ಹಾಡಹಗಲೆ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ.ಗಳ ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಚಿತ್ರಾಪುರದಲ್ಲಿ ಶುಕ್ರವಾರ ನಡೆದಿದೆ.

ಮಂಜುನಾಥ ರಾಮಚಂದ್ರ ನಾಯ್ಕ ಎನ್ನುವವರಿಗೆ ಸೇರಿದ ಮನೆ ಕಳ್ಳತನವಾಗಿದ್ದು ಇವರು ಟೆಂಪೋ ಚಾಲಕರಾಗಿದ್ದರೆ. ಕೇವಲ 2 ಗಂಟೆಯ ಅವಧಿಯಲ್ಲಿ ಈ ಕಳ್ಳತನ ಮಾಡಲಾಗಿದ್ದು.ಈ ಕಳ್ಳತನ ನೋಡಿ ಮನೆಯ ಮಾಲೀಕರು ಆಶ್ಚರ್ಯಗೊಂಡಿದ್ದಾರೆ. ಬೆಳ್ಳಿಗ್ಗೆ 8 ಗಂಟೆಗೆ ಮನೆಯ ಮಾಲೀಕರಾದ ಮಂಜುನಾಥ ನಾಯ್ಕ ತಮ್ಮ ಕೆಲಸಕ್ಕೆ ತೆರಳಿದ್ದು ಅದೇ ರೀತಿ ಬೆಳ್ಳಿಗ್ಗೆ 8.50ಕ್ಕೆ ಇವರ ಪತ್ನಿ ಬೇಬಿ ನಾಯ್ಕ ಕೆಂಬ್ರೆಯಲ್ಲಿರುವ ಪೇಪರ್ ಕಾರ್ಖಾನೆಗೆ ಕೆಲಸಕ್ಕೆ ತೆರಳಿದ್ದರು. 2 ಗಂಟೆಯ ಅವಧಿಯಲ್ಲಿ ಮನೆಗೆ ಮುಂದಿನ ಬಾಗಿಲು ಮುರಿಯದೇ, ಆಶ್ಚರ್ಯ ಚಕಿತ ಎಂಬಂತೆ ಹಿಂದಿನ ಬಾಗಿಲು ಕೂಡ ಮುರಿಯದೇ, ಮನೆಯ ಹಿಂದಿನ ಬಾಗಿಲು ತೆರೆದು ಮನೆಯ ಒಳಗೆ ನುಗ್ಗಿದ ಕಳ್ಳರು ಮನೆಯ ಒಳಗಿನ ಕೋಣೆಯಲ್ಲಿದ್ದ ಕಪಾಟಿನ ಬಾಗಿಲು ಮುರಿದು ಸುಮಾರು ಅಂದಾಜು 250 ಗ್ರಾಂ ಚಿನ್ನಾಭರಣ ಹಾಗೂ 31 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.

300x250 AD

ನಂತರ ಮನೆಯ ಮಾಲೀಕ 11 ಗಂಟೆ ವೇಳೆ ಮನೆ ಹಿಂಭಾಗದ ಅಡುಗೆ ಕೋಣೆಯಲ್ಲಿ ಒಲೆಯ ಮೇಲೆ ಇಟ್ಟಿದ್ದ ಅನ್ನ ನೋಡಲು ಬಂದ ವೇಳೆ ಮನೆ ಕಳ್ಳತನವಾಗಿರುವುದು ತಿಳಿದು ಬಂದಿದೆ. ನಂತರ ಗ್ರಾಮೀಣಠಾಣಾ ಪೊಲೀಸರು ಬೇಟಿ ನೀಡಿ ಪರೀಶಿಲನೆ ನಡೆಸಿದ್ದು. ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share This
300x250 AD
300x250 AD
300x250 AD
Back to top