Slide
Slide
Slide
previous arrow
next arrow

ಮನೆಯಿಂದ ಮತದಾನ ; ಸಂಭ್ರಮಿಸಿದ ಜಿಲ್ಲೆಯ ಹಿರಿಯ ನಾಗರೀಕರು

300x250 AD

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ , ಚುನಾವಣಾ ಆಯೋಗವು 85 ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ನೀಡಿರುವ ವಿಶೇಷ ಸೌಲಭ್ಯ ಬಳಸಿಕೊಂಡು ಜಿಲ್ಲೆಯ ಹಿರಿಯ ನಾಗರೀಕರು ತಮ್ಮ ಹಕ್ಕು ಚಲಾಯಿಸಿ ಹೆಮ್ಮೆಯಿಂದ ಬೀಗಿದರು.

ಜಿಲ್ಲೆಯ ಲೋಕಸಭಾ ವ್ಯಾಪ್ತಿಯಲ್ಲಿ ಮನೆಯಿಂದ ಮತದಾನ ಮಾಡಲು ಒಪ್ಪಿಗೆ ಪತ್ರ ನೀಡಿರುವ 85 ವರ್ಷ ಮೇಲ್ಪಟ್ಟ 3046 ಹಾಗೂ 1977 ವಿಕಲಚೇತನ ಮತದಾರರ ಮನೆಗಳಿಗೆ ವೇಳಾಪಟ್ಟಿ ಮತ್ತು ರೂಟ್ ಮ್ಯಾಪ್ ಸಿದ್ದಪಡಿಸಿಕೊಂಡಿರುವ ಮತಗಟ್ಟೆ ಸಿಬ್ಬಂದಿ ತೆರಳಿ ಮತದಾನ ಪ್ರಕ್ರಿಯೆಗಳನ್ನು ನಡೆಸಿದರು.
ಕಾರವಾರ ವಿಧಾನಸಭಾ ವ್ಯಾಪ್ತಿಯ ಸೆಕ್ಟರ್ 11 ರ ವ್ಯಾಪ್ತಿಯಲ್ಲಿ, ಕಾರವಾರ ನಗರದ ಆಯುಷ್ ಆಸ್ಪತ್ರೆ ಬಳಿಯ ನಾಗಿ ಸುಕ್ರಿ ಶಿರಾಲಿಕರ್ ಎಂಬ 87 ವರ್ಷದ ವೃದ್ದೆ ಯಾರ ನೆರವು ಪಡೆಯದೇ, ಅಧಿಕಾರಿಗಳು ತಿಳಿಸಿದ ಮಾದರಿಯಲ್ಲಿಯೇ ಮತಪತ್ರವನ್ನು ಬಿಡಿಸಿ, ಮತ ಹಾಕಿ, ಸಂಬಂಧಪಟ್ಟ ಲಕೋಟೆಯಲ್ಲಿಯೇ ಮತಪತ್ರವನ್ನು ಹಾಕಿ, ಮತಪೆಟ್ಟಿಗೆಗೆ ಕವರನ್ನು ಹಾಕಿದರು. ನಂತರ ಮಾತನಾಡಿದ ಅವರು ಅನಾರೋಗ್ಯದ ಕಾರಣ ನಡೆಯಲು ಸಾಧ್ಯವಿಲ್ಲವಾಗಿದ್ದು ಮನೆ ಬಳಿಗೆ ನನ್ನ ಬಂದು ನನ್ನ ಮತ ಪಡೆದದ್ದು ‘ಬಾಳಾ ಛಲೋ ಆತ್ರಿ’ ಎಂದು, ಹೆಮ್ಮೆಯಿಂದ ಮತದಾನ ಮಾಡಿದ ತಮ್ಮ ಬೆರಳ ಗುರುತನ್ನು ತೋರಿಸಿ ಸಂಭ್ರಮಿಸಿದರು.

300x250 AD

ಇದೇ ಪ್ರದೇಶದ ವ್ಯಾಪ್ತಿಯ 92 ವರ್ಷದ ವಯೋವೃದ್ದೆ ಸೋಮಾಯಿ ಲೋಕಪ್ಪ ಚಂಡೆಕರ್ ಕೂಡಾ ಯಾರ ಸಹಾಯವೂ ಪಡೆಯದೇ, ತಮಗೆ ಮತದಾನ ಮಾಡಿಸಲು ಬಂದ ಸಿಬ್ಬಂದಿಗೆ ಪ್ರೀತಿಯಿಂದ ಕೈಮುಗಿದರು, ಇದಕ್ಕೆ ಗೌರವ ಪ್ರತಿಕ್ರಿಯೆಯಾಗಿ ಸಿಬ್ಬಂದಿಯೊಬ್ಬರೂ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಮನೆಯಿಂದ ಮತದಾನ ಮಾಡಿದ್ದು ಛಲೋ ಆತ್ರಿ ಎಂದ ಸೋಮಾಯಿ ಲೋಕಪ್ಪ ಚಂಡೆಕರ್ ತಮ್ಮ ಬೆರಳಿನ ಶಾಹಿಯನ್ನು ತೋರಿಸಿ ನಕ್ಕರು..
ಸಾಯಿ ಮಂದಿರದ ಬಳಿಯ 30 ವರ್ಷದ ಸಂತೇಷ್ ಎಂಬ ವಿಕಲಚೇತನ ಯುವಕ ಹಾಸಿಗೆ ಮೇಲೆ ಮಲಗಿಯೇ ತನ್ನ ತಾಯಿಯಿ ನೆರವನಿಂದ ಮತ ಚಲಾಯಿಸಿ ತಮ್ಮ ಸಂತಸ ವ್ಯಕ್ತಪಡಿಸಿದರು.
ಮನೆಯಿಂದ ಮತದಾನ ಮಾಡುವ ಅರ್ಹ ಮತದಾರರಿಗೆ, ಮುಂಚಿತವಾಗಿಯೇ ಮತಗಟ್ಟೆ ಅಧಿಕಾರಿಗಳು ಅವರ ಮನೆಗಳಿಗೆ ಭೇಟಿ ನೀಡುವ ಸಮಯ ಮತ್ತು ದಿನಾಂಕವನ್ನು ಬಿಎಲ್‌ಒ ಗಳ ಮುಖಾಂತರ ತಿಳಿಸಿದ್ದು, ತಾವು ಬರುವ ಸಮಯದಲ್ಲಿ ಮತದಾನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳುವಂತೆ ತಿಳಿಸಿದ್ದರಿಂದ ಯಾವುದೇ ಗೊಂದಲಗಳಿಗೆ ಆಸ್ಪದವಾಗದೇ ಮತದಾನ ಪ್ರಕ್ರಿಯೆ ನಡೆಯಿತು.
ಮನೆಯಿಂದ ಮತದಾನ ಮಾಡುವ ಮತಗಟ್ಟೆ ಸಿಬ್ಬಂದಿಗಳ ತಂಡದಲ್ಲಿ ಸೆಕ್ಟರ್ ಅಧಿಕಾರಿ, ಪೋಲಿಂಗ್ ಅಧಿಕಾರಿಗಳು , ಮೈಕ್ರೋ ಆಬ್ಸರ್ವರ್, ಬಿ.ಎಲ್.ಒ, ಪೊಲೀಸ್ ಸಿಬ್ಬಂದಿ, ವಿಡಿಯೋಗ್ರಾಫರ್ ಗಳಿದ್ದು, ತಮಗೆ ನಿಯೋಜಿಸಿದ್ದ ಪ್ರತ್ಯೇಕ ವಾಹನದಲ್ಲಿಯೇ, ಮತದಾನ ಪ್ರಕ್ರಿಯೆಗೆ ಅಗತ್ಯವಿದ್ದ ಎಲ್ಲಾ ಪರಿಕರಗಳೊಂದಿಗೆ ನಿಯೋಜಿತ ಮನೆಗಳಿಗೆ ಭೇಟಿ ನೀಡಿದರು.
ಮನೆಯಿಂದ ಮತದಾನ ಮಾಡುವ ಕಾರ್ಯವಿಧಾನದ ಬಗ್ಗೆ ಮತದಾರ ಕುಟುಂಬದವರಿಗೆ ವಿವರಿಸಿ, ಮತದಾರನ ಮೇಲೆ ಯಾರೊಬ್ಬರೂ ಪ್ರಭಾವ ಬೀರದಂತೆ, ಮತದಾನ ಮಾಡುವ ಸಂದರ್ಭದಲ್ಲಿ ಕುಟುಂಬ ಸದಸ್ಯರನ್ನು ಮತದಾನ ಮಾಡುವ ಕೊಠಡಿಯಿಂದ ಹೊರೆಗೆ ನಿಲ್ಲಿಸಿ, ಗೋಪ್ಯತೆ ಕಾಪಾಡುವ ಮೂಲಕ ಮತದಾನ ಪ್ರಕ್ರಿಯೆ ನಡೆಸಲಾಯಿತು.
ಕಾರವಾರ ವಿಧಾನಸಭಾ ವ್ಯಾಪ್ತಿಯ ಸೆಕ್ಟರ್ 11 ರ ವ್ಯಾಪ್ತಿಯಲ್ಲಿ ನಡೆದ ಮತದಾನ ಸಂದರ್ಭದಲ್ಲಿ, ಸೆಕ್ಟರ್ ಅಧಿಕಾರಿ ಸುನೀಲ್ ಅಂಕೋಲಕರ್, ಮತಗಟ್ಟೆ ಅಧಿಕಾರಿಗಳಾದ ಸಂತೋಷ್ ಗಾಂವಕರ್, ಸುದೀಪ್ ನಾಯಕ್, ಮೈಕ್ರೋ ಅಬ್ರ‍್ವರ್ ಕೆ.ದಿನಕರ್, ಮಹಿಳಾ ಪೊಲೀಸ್ ರೂಪಾ ಸಲಗೊಂಡ, ಸಹಾಯಕ ಸಿಬ್ಬಂದಿ ಮಹಾದೇವ ನಾಯಕ್ ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top