Slide
Slide
Slide
previous arrow
next arrow

ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳ, ಮುನ್ನೆಚ್ಚರಿಕೆ ವಹಿಸಲು‌ ಡಿಸಿ ಸೂಚನೆ

300x250 AD

ಕಾರವಾರ: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಏ.26ರ ವರೆಗೆ ಬಿಸಿಲಿನ ಜಳವು 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವುದರಿಂದ ಸಾರ್ವಜನಿಕರು ಈಗಿರುವ ಉಷ್ಣತೆಕ್ಕಿಂತ ಹೆಚ್ಚಿನ ಉಷ್ನತೆಯನ್ನು ಅನುಭವಿಸುವ ಸಾಧ್ಯತೆಯಿರುತ್ತದೆ. ಹೆಚ್ಚಿನ ಉಷ್ಣತೆಯು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಮತ್ತು ಅಗ್ನಿ ಅವಗಡಗಳ ಅಪಾಯವನ್ನು ಹೆಚ್ಚಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈ ಕೆಳಗಿನಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
ಬಿಸಿಲಿನ ಉತ್ತುಂಗದ ಸಮಯದಲ್ಲಿ (ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯ ವರೆಗೆ) ಹೊರಗೆ ಹೋಗುವುದನ್ನು ಕಡಿಮೆ ಮಾಡಿ, ಸಾಕಷ್ಟು ನೀರು ಕುಡಿಯಬೇಕು. ತಂಪು ಪಾನಿಯ (Soft Drinks) ಗಳಿಗಿಂತ ನೀರನ್ನು ಕುಡಿಯುವ ಮೂಲಕ ದೇಹದಲ್ಲಿ ನೀರಿನಾಂಶ ಕಾಯ್ದುಕೊಳ್ಳಬೇಕು. ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಬೇಕು. ಬಿಸಿಲಿನ ಸಮಯದಲ್ಲಿ ಹೊರಗೆ ಹೋಗಬೇಕಾದರೆ ಟೊಪ್ಪಿ, Sunscreen lotion, ಮತ್ತು ಸೂರ್ಯನ ಕಿರಣಗಳನ್ನು ತಡೆಯುವಂತಹ ಬಟ್ಟೆಗಳನ್ನು ಧರಿಸಬೇಕು. ಅತಿಯಾದ ಬೆವರಿಕೆ, ಆಯಾಸ ಮತ್ತು ತಲೆ ತಿರುಗುವಿಕೆಯಂತಹ ಲಕ್ಷಣಗಳಿಗೆ ಗಮನ ನೀಡಬೇಕು ಈ ಲಕ್ಷಣಗಳು ಕಂಡು ಬಂದರೆ ವೈದ್ಯಕೀಯ ಸಹಾಯ ಪಡೆಯುವ ಮೂಲಕ ಆರೋಗ್ಯದ ಮೇಲೆ ನಿಗಾ ವಹಿಸಿಬೇಕು. ಸುಟ್ಟು ಗುಂಟೆಗಳನ್ನು ಎಚ್ಚರವಾಗಿ ನಂದಿಸಿ ಮತ್ತು ತರೆದ ಪ್ರದೇಶಗಳಲ್ಲಿ ಬೆಂಕಿ ಹಚ್ಚಬಾರದು. ಶಾರ್ಟ್ ಸರ್ಕ್ಯುಟ್‌ಗಳನ್ನು ತೆಡೆಯಲು ವಿದ್ಯುತ್ ಉಪಕರಣಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು.
ಜಿಲ್ಲೆಯ ಸಾರ್ವಜನಿಕರು ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಟೋಲ್ ಫ್ರೀ ಸಂಖ್ಯೆ 1077, ವಾಟ್ಸಪ್ ಸಂಖ್ಯೆTel:+919483511015 ಗೆ ಕರೆ ಮಾಡುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top