Slide
Slide
Slide
previous arrow
next arrow

ಕಾಂಗ್ರೆಸ್ ಸರಕಾರದಿಂದ ದೇಶದ್ರೋಹಿಗಳಿಗೆ ಪ್ರೋತ್ಸಾಹ; ಮಾಜಿ ಶಾಸಕ ಸುನೀಲ್ ನಾಯ್ಕ ಆರೋಪ

300x250 AD

ಭಟ್ಕಳ: ನೇಹಾ ಕೊಲೆ ಪ್ರಕರಣದಲ್ಲಿ ವಿಡಿಯೋ ಚಿತ್ರೀಕರಣ ಸಿಗದಿದ್ದರೆ ಕಾಂಗ್ರೆಸ್ ಕೊಲೆ ಅಲ್ಲ ಅದು ಸಹಜ ಸಾವು ಎನ್ನುತ್ತಿತ್ತು ಎಂದು ಬಿಜೆಪಿ ಮಾಜಿ ಶಾಸಕ ಸುನೀಲ ನಾಯ್ಕ ಹೇಳಿದ್ದಾರೆ.

ಅವರು ಭಟ್ಕಳ ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಸಂಘಟನೆ ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಇಂಥ ಪ್ರಕರಣಗಳು ಹೆಚ್ಚಾಗಿ ಮರುಕಳಿಸುತ್ತಿವೆ . ಕಳೆದ 5, ವರ್ಷ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿರುವಾಗ ನಾನು ಶಾಸಕನಾಗಿರುವಾಗ ಇಂಥ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದು 9 ತಿಂಗಳಿನಲ್ಲಿ ಇಂಥ ಕೊಲೆಗಳು ಹೆಚ್ಚಾಗಿ ನಡೆಯುತ್ತಿರುವುದು ಕಂಡು ಬಂದಿದೆ. ಇದಕ್ಕೆ ಸಂಪೂರ್ಣ ಸಹಕಾರ ಕೊಟ್ಟಿರುವುದು ಕಾಂಗ್ರೆಸ್ ಸರ್ಕಾರವಾಗಿದೆ. ಇದಕ್ಕೆ ನೇರವಾಗಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇರ ಹೊಣೆಯಾಗಿದ್ದಾರೆ. ನೇಹಾ ಕೊಲೆ ಪ್ರಕರಣದಲ್ಲಿ ವಿಡಿಯೋ ಚಿತ್ರೀಕರಣ ಇಲ್ಲದ ಪಕ್ಷದಲ್ಲಿ ಕಾಂಗ್ರೆಸ್ನವರು ಇದನ್ನು ಕೊಲೆಯೇ ಅಲ್ಲ ಎಂದು ಹೇಳುತ್ತಿದ್ದರು.

ಕಳೆದ ವಿಧಾನಸಭೆ ಕಲಾಪ ನಡೆಯುವ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದ ವ್ಯಕ್ತಿಯನ್ನು ಬಂಧಿಸದೆ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಲಿಲ್ಲ ಎಂದು ಹೇಳಿದ ಕಾಂಗ್ರೆಸ್ ಸರ್ಕಾರ ಸ್ನೇಹ ಕೊಲೆ ಪ್ರಕರಣದಲ್ಲಿ ವಿಡಿಯೋ ಚಿತ್ರೀಕರಣ ಇಲ್ಲದಿದ್ದರ ಇದು ಕೊಲೆಯಲ್ಲಿ ಎಂದು ಹೇಳುತ್ತಿದ್ದರು
ಕಾಂಗ್ರೆಸ್ ಸರ್ಕಾರ ಇಂಥ ದೇಶದ್ರೋಹಿಗಳಿಗೆ ದುಷ್ಟರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಸರ್ಕಾರವಾಗಿದೆ. ಜನರಿಗೆ ನ್ಯಾಯ ಕೊಡಿಸಲು ಭಾರತೀಯ ಜನತಾ ಪಾರ್ಟಿ ಜನರೊಂದಿಗೆ ನಿಲ್ಲುತ್ತದೆ ಸಂಪೂರ್ಣ ನ್ಯಾಯ ಕೊಡಿಸಲು ಭಾರತೀಯ ಜನತಾ ಪಾರ್ಟಿಯೊಂದಿಗೆ ನಾನು ಇದ್ದೇನೆ ವಿಶ್ವ ಹಿಂದೂ ಪರಿಷತ್ ಸಂಘಟನೆ ಮೂಲಕ ಎಸಿ ಅವರಿಗೆ ಮನವಿ ಕೊಡುವ ಕೆಲಸ ಮಾಡುತಿದ್ದೇವೆ ಎಂದರು.

ನಂತರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯ್ಕ ಆಸರಕೇರಿ ಮಾತನಾಡಿ ಹಿಂದೂ ಧರ್ಮದ ಹೆಣ್ಣು ಮಕ್ಕಳು ಕಾಲೇಜುಗಳಿಗೆ ಹೋಗಿ ಓದುವುದು ಕಷ್ಟದ ಸಂಗತಿಯಾಗಿದೆ ಜಿಹಾದಿ ಮನಸ್ಥಿತಿಯವರು ನಮ್ಮ ಯುವತಿಯರನ್ನು ಪ್ರೀತಿಯಲ್ಲಿ ಬಿಳಿಸಿ ಟಾರ್ಗೆಟ್ ಮಾಡಿ ಮತಾಂತರ ಮಾಡುತ್ತಿದ್ದಾರೆ ಅದಕ್ಕೆ ಒಪ್ಪದಿದ್ದರೆ ಕೊಲೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ .ಇದಕ್ಕೆ ಕಾಂಗ್ರೆಸ್ ಸರ್ಕಾರ ಬೆಂಬಲವಾಗಿ ನಿಂತಿದೆ. ಇಂಥ ನೀಚ ಕೃತ್ಯ ನಡೆಸುವವರಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ .
ಪ್ರತಿ ವರ್ಷ ಆರು ತಿಂಗಳಿಗೊಮ್ಮೆ ಇಂಥ ಕೊಲೆ ಪ್ರಕರಣಗಳು ನಮ್ಮ ರಾಜ್ಯದಲ್ಲಿ ನಡೆಯುತ್ತಾ ಬಂದಿದೆ. ಸರ್ಕಾರದ ಮುಸ್ಲಿಂ ತುಷ್ಟಿಕರಣ ನೀತಿಯಿಂದ ಹಿಂದುಗಳ ಮೇಲೆ ಹಲ್ಲೆ ಹಾಗೂ ಕೊಲೆಯಂತ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಾ ಬಂದಿವೆ.ಹಿಂದುಗಳು ಹಿಂಸೆ ಅನುಭವಿಸುತ್ತಾ ಬಂದಿದ್ದಾರೆ.

300x250 AD

ಮತಾಂದ ಶಕ್ತಿಗಳ ಹತ್ತಿಕ್ಕುವಲ್ಲಿ ಪೋಲಿಸ್ ಇಲಾಖೆ ಮೃದು ಧೋರಣೆಯನ್ನು ತೋರುತ್ತಿದೆ. ಇಲ್ಲಿ ನಾವು ಎಷ್ಟು ಸನ್ನಿವೇಶಗಳನ್ನು ನೋಡಿ ಕಣ್ಣಿದ್ದು ಕುರುಡರಂತೆ ಇರಬೇಕಾದ ಪರಿಸ್ಥಿತಿ ಬಂದಿದೆ. ಹಿಂದುಗಳು ಪ್ರತಿಯೊಬ್ಬರೂ ಇದರ ಬಗ್ಗೆ ಎಚ್ಚರಿಕೆಗೊಳ್ಳಬೇಕಾಗಿದೆ.
ಹುಬ್ಬಳ್ಳಿಯಲ್ಲಿ ನಡೆದ ಘಟನೆಗಳು ಭಟ್ಕಳದಲ್ಲೂ ಮರುಕಳಿಸುವ ಸಾಧ್ಯತೆ ಇದೆ. ನಮ್ಮ ಮನೆಯ ಯುವತಿಯರಿಗೆ ನಾವು ಬುದ್ದಿ ಹೇಳಬೇಕು ಅನ್ಯ ಧರ್ಮಿಯರ ಅಂಗಡಿಗಳಿಗೆ ಕೆಲಸಕ್ಕೆ ಯುವತಿಯರನ್ನು ಕಳಿಸುತ್ತಿದ್ದೀರಿ ಎಷ್ಟು ಯುವತಿಯರು ಕಣ್ಮರೆಯಾಗುತ್ತಿದ್ದಾರೆ. ನಿಮ್ಮ ಮನೆಯ ಬಾಲಕಿಯರ ರಕ್ಷಣೆ ನಿಮ್ಮ ಕೈಯಲ್ಲಿದೆ ಬಡತನ ನಿರುದ್ಯೋಗ ಇರಬಹುದು ಅನ್ಯ ಧರ್ಮೀಯರ ಅಂಗಡಿಗಳಲ್ಲಿ ಕೆಲಸ ಅದು ನಮಗೆ ಅನಿವಾರ್ಯವಾಗಬಾರದು.

ಭಟ್ಕಳದಲ್ಲಿ ಎಷ್ಟು ಅನಧಿಕೃತ ಚಟುವಟಿಕೆಗಳು ನಡೆಯುತ್ತಿವೆ ಅಸಂಖ್ಯಾತ ಕೆಲಸಗಳಿವೆ ಅವರನ್ನು ರಾಜ್ಯ ಮರ್ಯಾದೆಯಿಂದ ನೋಡುತ್ತೀರಿ. ಆದರೆ ನೀವು ಅದೆಲ್ಲವನ್ನು ಬಿಟ್ಟು ಹಿಂದು ಕಾರ್ಯಕರ್ತರ ಮೇಲೆ ತಾತ್ಸಾರದಿಂದ ನೋಡುತ್ತೀರಿ ಮತ್ತು ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುತ್ತಿದ್ದೀರಿ ಇಂಥ ಪ್ರವೃತ್ತಿಯನ್ನು ಬಿಡಬೇಕಾಗಿದೆ ಎಂದ ಅವರ ಬೇರೆ ರಾಜ್ಯದಲ್ಲಿ ಅಪರಾಧ ಕೃತ್ಯ ನಡೆಸಿ ಭಟ್ಕಳದಲ್ಲಿ ಬಂದು ನೆಲೆಸಿದ್ದವರ ಬಗ್ಗೆ ಭಟ್ಕಳ ಪೊಲೀಸರು ಗಮನ ಹರಿಸಿ ಅವರನ್ನು ಗಡಿಪಾರು ಮಾಡುವ ಬದಲು ರಾಷ್ಟ್ರದ ಹಿತಕ್ಕಾಗಿ ಹಾಗೂ ಹಿಂದೂಗಳಿಗೆ ಅನ್ಯಾಯವಾದ ವೇಳೆ ಹೋರಾಟ ಮಾಡುವರನ್ನು ಗಡಿಪಾರು ಮಾಡುವುದಲ್ಲ. 1993 ರಿಂದ ಹಿಂದೂ ಕಾರ್ಯಾಕರ್ತರಿಗೆ ಹಾಗೂ ಹೋರಾಟಗಾರರಿಗೆ ಇದು ಹೊಸತಲ್ಲ. ಹಿಂದೂಗಳು ಇರುವುದರಿಂದ ಪೊಲೀಸರು ಭಟ್ಕಳದಲ್ಲಿ ಸುಗಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೀರಾ ಎಂದು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಹಿಂದೂಗಳಿಂದ ಯಾವುದೇ ಪೊಲೀಸರಿಗೆ ತೊಂದರೆಯಾಗಿಲ್ಲ. ಕಳೆದ ಬಾರಿ ಗೋ ರಕ್ಷಣೆ ಮಾಡುವ ವೇಳೆಯಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಗಾಡಿ ಹತ್ತಿದ್ದ ವೇಳೆ ನಿಮ್ಮ ಬೆಂಬಲಕ್ಕೆ ನಿಂತಿದ್ದು ಇದೆ ನಮ್ಮ ಭಟ್ಕಳದ ಹಿಂದೂ ಸಮುದಾಯದವರು ಎಂದು ನೆನಪಿಡಿ ಎಂದು ಖಡಕ್ ಎಚ್ಚರಿಕೆ ನೀಡಿದರು.

Share This
300x250 AD
300x250 AD
300x250 AD
Back to top