Slide
Slide
Slide
previous arrow
next arrow

ಡಾ.ಪಿ.ಎಸ್.ಹೆಗಡೆ ಮಡಿಲಿಗೆ ಶ್ರೇಷ್ಠ ‘ಪಶುವೈದ್ಯ ಪ್ರಶಸ್ತಿ’

300x250 AD

ಶಿರಸಿ: ಕರ್ನಾಟಕ ಪಶುವೈದ್ಯಕೀಯ ಪರಿಷತ್, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಶು ವೈದ್ಯಕೀಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿರುವ, ನೀಡುತ್ತಿರುವ 34 ಪಶುವೈದ್ಯರನ್ನು ಪ್ರಶಸ್ತಿ ನೀಡಿ ಸನ್ಮಾನಿಸುತ್ತಿದ್ದು, ಇದೇ ಏ.27ರಂದು ವಿಶ್ವ ಪಶು ವೈದ್ಯಕೀಯ ದಿನಾಚರಣೆಯ ದಿನ ಬೆಂಗಳೂರಿನ ಪಶು ವೈದ್ಯ ಪರಿಷತ್ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ನೆರವೇರಿಸಲಿದೆ.

ಟಿಎಸ್ಎಸ್ ಸಮರ್ಪಣದ ವೈದ್ಯರಾದಂತಹ ಡಾ.ಪಿ.ಎಸ್‌.ಹೆಗಡೆ 2024ರ ಶ್ರೇಷ್ಠ ಪಶುವೈದ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ 35 ವರ್ಷಗಳಿಂದ ಜಿಲ್ಲೆಯ ಪಶು ವೈದ್ಯಕೀಯ ಕ್ಷೇತ್ರಕ್ಕೆ ಹಲವಾರು ಸಾಧ್ಯತೆಗಳನ್ನು ಪರಿಚಯಿಸಿದ ಡಾ.ಪಿ.ಎಸ್.ಹೆಗಡೆಯವರನ್ನು ಗುರುತಿಸಿ, ಸನ್ಮಾನಿಸುತ್ತಿರುವ ಪರಿಷತ್ತಿನ ಕಾರ್ಯ, ಸಾಧನೆಗೆ ನೀಡಿದ ಗೌರವ ಎಂಬುದು ಪಶುಪಾಲಕರ ಅಭಿಪ್ರಾಯವಾಗಿದೆ.

ಇದೇ ಮೊದಲಬಾರಿಗೆ ಕರ್ನಾಟಕ ಪಶುವೈದ್ಯಕೀಯ ಪರಿಷತ್ ಯಾವುದೇ ಅರ್ಜಿ ಸ್ವೀಕರಿಸದೇ, ಕೊಡುಗೆ ನೀಡಿದವರನ್ನು ಗುರುತಿಸಿ, ಸನ್ಮಾನಿಸುವ ಮಹತ್ಕಾರ್ಯ ನಡೆಸಿದ್ದು ಅಭಿನಂದನೀಯ. ಡಾ.ಪಿ.ಎಸ್. ಹೆಗಡೆಯವರಿಗೆ ಸಲ್ಲುತ್ತಿರುವ ಗೌರವ, ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ ಎಂದು ಉತ್ತರ ಕನ್ನಡ ಪಶುವೈದ್ಯ ಇಲಾಖೆಯ ಉಪನಿರ್ದೇಶಕ ಡಾ.ಮೋಹನ್‌ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

300x250 AD

Share This
300x250 AD
300x250 AD
300x250 AD
Back to top