Slide
Slide
Slide
previous arrow
next arrow

ಸುಳ್ಳು ಹೇಳಿಕೊಂಡೇ ಬಿಜೆಪಿ ರಾಷ್ಟ ರಾಜಕಾರಣ ಮಾಡುತ್ತಿದೆ : ದೇಶಪಾಂಡೆ ಆಕ್ರೋಶ

300x250 AD

ದಾಂಡೇಲಿ: ಸುಳ್ಳು ಹೇಳಿಕೊಂಡೆ ಬಿಜೆಪಿ ರಾಷ್ಟ ರಾಜಕಾರಣವನ್ನು ಮಾಡುತ್ತಿದ್ದು, ಇಂತಹ ಸುಳ್ಳುಗಳಿಂದ ಜನರು ಬೇಸತ್ತು ಬದಲಾವಣೆ ತರಲು ಮುಂದಾಗಿದ್ದಾರೆ.
ರಾಜ್ಯದಲ್ಲಿನ ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷದ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿವೆ. ಕ್ಷೇತ್ರದ ಅಭಿವೃದ್ದಿಗೆ ಹಲವಾರು ಕೆಲಸಗಳನ್ನು ನನ್ನ ರಾಜಕೀಯ ಜೀವನದಲ್ಲಿ ನೀಡುತ್ತಲೇ ಬಂದಿದ್ದೇನೆ. ಪಕ್ಷದ ಕೆಲಸಗಳನ್ನು ನೋಡಿಕೊಂಡು ಜನ ಮತದಾನ ಮಾಡುತ್ತಾರೆಯೇ ಹೊರತು ವ್ಯಕ್ತಿಯ ವರ್ಚಸ್ಸಿನಿಂದ ಅಲ್ಲ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ಅವರು ನಗರದ ಹಳೆ ದಾಂಡೇಲಿಯ ಗಾಂಧಿ ಚೌಕ ಬಳಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಬಹಿರಂಗ ಪ್ರಚಾರ ಸಭೆಯಲ್ಲಿ ಗ್ಯಾರಂಟಿ ಕಾರ್ಡಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಇಂದು ಸಂವಿಧಾನ ಇರುವ ಕಾರಣ ಚುನಾವಣೆ ನಡೆಯುತ್ತಿವೆ. ಇಲ್ಲವಾದರೆ ಮೋದಿ ದರ್ಬಾರಿನಲ್ಲಿ ಚುನಾವಣೆ ನಡೆಯುತ್ತಿತ್ತು. ಮೋದಿಯ ಸರ್ವಾಧಿಕಾರಿಯ ನೀತಿಯನ್ನು ಅಂಬೇಡ್ಕರರ ಸಂವಿಧಾನ ಕಟ್ಟಿಹಾಕಿದೆ. ಅದಕ್ಕಾಗಿ ನಾವು ಅಂಬೇಡ್ಕರ ಅವರಿಗೆ ಧನ್ಯವಾದ ಹೇಳಬೇಕು.ಎಲ್ಲರೂ ಪ್ರಜಾಪ್ರಭುತ್ವವನ್ನು ಬಲ ಪಡಿಸಲು ಮತದಾನ ಮಾಡುವುದು ಅತೀ ಮುಖ್ಯ. ಎಲ್ಲರು ಕಡ್ಡಾಯವಾಗಿ ಮತದಾನ ಮಾಡಿ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಿ ಎಂದರು.

300x250 AD

ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಎನ್.ಡಿ.ಎ ಸರಕಾರ ಕಳೆದ ಹತ್ತು ವರ್ಷಗಳಲ್ಲಿ 20 ಕೋಟಿ ಉದ್ಯೋಗ ಸೃಷ್ಠಿ ಮಾಡಬೇಕಿತ್ತು. ಆದರೆ ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಲೇ ಇದೆ. ಸುಳ್ಳು ಭರವಸೆಯ15 ಲಕ್ಷ ರೂಪಾಯಿ ಯಾರ ಖಾತೆಗೂ ಬಂದಿಲ್ಲ. ಯಾವ ಅನುಷ್ಠಾನವನ್ನು ಇಂದಿಗೂ ಜಾರಿಗೆ ತಂದಿಲ್ಲ ಇದು ಬಿಜೆಪಿ ವೈಫಲ್ಯ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಹಲವಾಯಿ, ಮಾಜಿ ಅಧ್ಯಕ್ಷ ವಿ.ಆರ್‌.ಹೆಗಡೆ, ಪ್ರಧಾನ ಕಾರ್ಯದರ್ಶಿ ಇಕ್ಬಾಲ ಶೇಖ, ಯುವ ಕಾಂಗ್ರೆಸ್ ಅಧ್ಯಕ್ಷ ಉಸ್ಮಾನ್ ಮುನ್ನಾ ವಹಾಬ್, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ರೇಣುಕಾ ಬಂದಂ, ನಗರ ಸಭಾ ಸದಸ್ಯರಾದ ಸಪೂರಾ ಯರಗಟ್ಟಿ, ಶಿಲ್ಪಾ ಖೋಡೆ, ವೆಂಕಟರಮಣಮ್ಮ ಮೈತಕುರಿ, ಅನಿಲ್ ನಾಯ್ಕರ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top