Slide
Slide
Slide
previous arrow
next arrow

‘ಶರಾವತಿ ಕುಂಭ’-‘ಶರಾವತಿ ಆರತಿ’

300x250 AD

ಹೊನ್ನಾವರ: ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ಪವಿತ್ರ ಶರಾವತಿ ನದಿ ತಟದಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ “ಶರಾವತಿ ಆರತಿ” ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

ಜಾತ್ರಾ ಮಹೋತ್ಸವದ ಭಾಗವಾಗಿ ಏ.18 ರಿಂದ ಏ.21 ರವರೆಗೆ ಶರಾವತಿ ನದಿ ದಡದಲ್ಲಿ ‘ಶರಾವತಿ ಕುಂಭ’ವನ್ನು ಆಯೋಜಿಸಲಾಗಿದ್ದು, ಸಾಧು-ಸಂತರನ್ನೊಡಗೂಡಿ ಭಕ್ತಾದಿಗಳಿಗೆ ತ್ರಿಕಾಲ ಪುಣ್ಯಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪುಣ್ಯನದಿ ಶರಾವತಿಯನ್ನು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಪೂಜಿಸಿ ಗೌರವಿಸುವ ಉದ್ದೇಶದಿಂದ ಶರಾವತಿ ಕುಂಭದ ಸಂದರ್ಭದಲ್ಲಿ ಪ್ರತಿವರ್ಷವು ‘ಶರಾವತಿ ಆರತಿ’ಯನ್ನು ಆಯೋಜಿಸಿಕೊಂಡು ಬಂದಿದ್ದು ಈ ವರ್ಷವು ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಸಾನಿಧ್ಯದಲ್ಲಿ ಸಾಧು-ಸಂತರು, ಪುರೋಹಿತರು, ಭಕ್ತಾದಿಗಳು ಶರಾವತಿ ಮಾತೆಗೆ ಬಾಗಿನ ಅರ್ಪಿಸಿ, ಆರತಿ ಬೆಳಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

300x250 AD
Share This
300x250 AD
300x250 AD
300x250 AD
Back to top