Slide
Slide
Slide
previous arrow
next arrow

ಮತದಾನ ಜಾಗೃತಿಗಾಗಿ ರಂಗೋಲಿ ಸ್ವೀಪ್ ಸ್ಪರ್ಧೆ

300x250 AD

ಸಿದ್ದಾಪುರ: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಮತ್ತು ತಾಲೂಕ ಪಂಚಾಯತ್ ಸಿದ್ದಾಪುರ ತಾಲೂಕ್ ಸ್ವೀಪ್ ಸಮಿತಿ ಸಿದ್ದಾಪುರ ಸಹಭಾಗಿತ್ವದಲ್ಲಿ ಹಲಗೇರಿ ಗ್ರಾಮ ಪಂಚಾಯಿತದ ಅಂಬೇಡ್ಕರ್ ಸಭಾಭವನದಲ್ಲಿ ಮತದಾನ ಜಾಗೃತಿಗಾಗಿ ರಂಗೋಲಿ ಸ್ವೀಪ್ ಸ್ಪರ್ಧೆಯನ್ನು ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳು ಹಾಗೂ ಸದಸ್ಯರುಗಳಿಗೆ ಹಮ್ಮಿಕೊಳ್ಳಲಾಗಿತ್ತು.

ಮತದಾನ ಜಾಗೃತಿ ರಂಗೋಲಿ ಸ್ಪರ್ಧೆಯಲ್ಲಿ ವಿಜೇತ ರಂಜಿತಾ ನಾಯ್ಕ್ ಪ್ರಥಮ, ಛಾಯಾ ನಾಯ್ಕ ದ್ವಿತೀಯ, ನಾಗರತ್ನ ನಾಯ್ಕ ತೃತೀಯ ಹಾಗೂ ಸೌಜನ್ಯ ನಾಯ್ಕ ಪ್ರೋತ್ಸಾಹಕ ಬಹುಮಾನವನ್ನು ಪಡೆದುಕೊಂಡರು. ನಂತರ ಮತದಾನ ಜಾಗೃತಿ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಸಿದ್ದಾಪುರ- ಮಾವಿನಗುಂಡಿ- ಜೋಗ ಮಾರ್ಗದಲ್ಲಿ ಮಾನವ ಸರಪಳಿಯನ್ನು ಏರ್ಪಡಿಸಿ ಮತದಾನ ಜಾಗೃತಿ ಜಾಥಾವನ್ನು ಮಾಡಲಾಯಿತು. ಈ ಕಾರ್ಯಕ್ರಮವನ್ನು ತಾಲೂಕ ಕಾರ್ಯನಿರ್ವಹಣಾಧಿಕಾರಿಗಳು ಶ್ರೀಮತಿ ವಿಜಯ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ತಾಲೂಕ ಯೋಜನಾಧಿಕಾರಿಗಳಾದ ಬಸವರಾಜ್, ಸಹಾಯಕ ನಿರ್ದೇಶಕರಾದ ವಿದ್ಯಾ ದೇಸಾಯಿ, ಸಿಡಿಪಿಓ ಪೂರ್ಣಿಮಾ, ಮ್ಯಾನೇಜರ್ ಮೊಹಮ್ಮದ್ ರಿಯಾಜ್, ತಾಲೂಕ ಎನ್ಆರ್‌ಎಲ್ಎಮ್ ಟೀಮ್, ಹಲಗೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top