Slide
Slide
Slide
previous arrow
next arrow

ರಾಮ ಮಂದಿರದ ಕನಸನ್ನು ನನಸಾಗಿಸಿದ್ದು ಪ್ರಧಾನಿ ಮೋದಿ; ಕಾಗೇರಿ

300x250 AD

ಕೇಂದ್ರದ ಯೋಜನೆ ಹಳ್ಳಿಯ ಪ್ರತಿ ಮನೆಗೆ ತಲುಪಿಸಲು ಕರೆ

ಹೊನ್ನಾವರ: ರಾಮ ಮಂದಿರ ನಿರ್ಮಾಣ ಮಾಡಿ ನೂರಾರು ವರ್ಷದ ಕನಸನ್ನು ನನಸು ಮಾಡಿದ ಮೋದಿಜಿಯವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ಪ್ರಭು ಶ್ರೀರಾಮನ್ನು ನೆನೆಪಿಸಿಕೊಂಡು ಕಮಲದ ಹೂವಿಗೆ ಮತ ಹಾಕಬೇಕು ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಹೊನ್ನಾವರ ತಾಲೂಕಿನ ಮಂಕಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಯೋಧ್ಯೆಯ ರಾಮ ಮಂದಿರವನ್ನು ನಿರ್ಮಿಸಿ 500 ವರ್ಷಗಳ ಕನಸು ನನಸಾಗಿದೆ. ಮೋದಿಜಿ, ಯೋಗಿಜಿಯಿಂದ ಇದು ಸಾಧ್ಯವಾಗಿದೆ. ಅಂತಹ ಪ್ರಧಾನಿಯನ್ನು ಮತ್ತೊಮ್ಮೆ ಗೆಲ್ಲಿಸಬೇಕು. ಅದಕ್ಕೆ ಪೂರಕವೆಂಬಂತೆ ಇಲ್ಲಿಯೂ ಅತಿ ಹೆಚ್ಚಿನ ಮತಗಳಿಂದ ನನ್ನನ್ನು ಗೆಲ್ಲಿಸುತ್ತೀರಿ ಎಂಬ ನಂಬಿಕೆಯಿದೆ ಎಂದರು.

ಬಿಜೆಪಿಯ ಬೂತ್ ಮಟ್ಟದ, ಶಕ್ತಿ ಕೇಂದ್ರ, ಮಹಾ ಶಕ್ತಿ ಎಲ್ಲಾ ಪ್ರಮುಖರು ರಾಮನಿಗಾಗಿ, ಮೋದಿಗಾಗಿ ಪೂರ್ಣ ಶ್ರಮ ಹಾಕಿ ಕಮಲದ ಹೂವಿನ ಗೆಲುವಿಗಾಗಿ ಹೋರಾಟ ಮಾಡಬೇಕು‌. ಮೋದಿಯವರು ಹೇಳಿದಂತೆ ಬೂತ್ ಮಟ್ಟದಲ್ಲಿ ಮತಗಳಿಕೆ ಹೆಚ್ಚಿಸಿ, ಮನೆ ಮನೆ ಸಂಪರ್ಕ ಮಾಡಿ ಕಮಲದ ಹೂವಿಗೆ ಮತ ಹಾಕಿಸಬೇಕು. ಬಡವರಿಗೆ ಮೋದಿ ನೀಡಿದ ಯೋಜನೆಗಳನ್ನು ತಿಳಿಸಿ ಮತ ಹೆಚ್ಚಳಕ್ಕೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಈ ಹಿಂದೆ ಮನಮೋಹನ್ ಸಿಂಗ್ ಇದ್ದಾಗ ಕೇವಲ ಹಗರಣಗಳೇ ನಡೆದಿದ್ದವು. ಆದರೆ ಈಗ ೧೦ ವರ್ಷದ ಆಡಳಿಯ ಅವಧಿಯಲ್ಲಿ ಯಾವ ಹಗರಣವೂ ಇಲ್ಲ. ಪಾರದರ್ಶಕ ಆಡಳಿತ ನೀಡಿ ಭ್ರಷ್ಟಾಚಾರ ಮುಕ್ತ ಮಾಡಲಾಗಿದೆ. ಮೋದಿಯವರ ಆಡಳಿತದಲ್ಲಿ ಅಭಿವೃದ್ಧಿಗೆ ಮಾತ್ರ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದ ಕಾಗೇರಿ, ರಾಜ್ಯದ ಗ್ಯಾರಂಟಿ ಯೋಜನೆ ಸಮರ್ಪಕ ವಿತರಣೆ ಆಗುತ್ತಿಲ್ಲ. ಮೋದಿಯವರ ಗ್ಯಾರಂಟಿ ಎದುರು ರಾಜ್ಯದ ಗ್ಯಾರಂಟಿ ಠುಸ್ ಆಗಲಿದೆ ಎಂದರು.

ರಾಜ್ಯದಲ್ಲಿ ಅಭಿವೃದ್ಧಿಗೆ ಹಣ ಬರುತ್ತಿಲ್ಲ. ಈ ಹಿಂದಿನ ಸರ್ಕಾರದಲ್ಲಿ ಭಟ್ಕಳ ಕ್ಷೇತ್ರ ಸೇರಿದಂತೆ ಅಂದಿನ ಶಾಸಕರು ಹೆಚ್ಚಿನ ಅನುದಾನ ತಂದು ಕೆಲಸ ಮಾಡಿದ್ದರು. ಈಗಲೂ ಅಂದು ತಂದಿರುವ ಕೆಲಸವೇ ನಡೆದಿದೆ. ಹೊಸ ಕಾಮಗಾರಿಗಳು ಮಂಜೂರಾಗುತ್ತಿಲ್ಲ ಎಂದು ಟೀಕಿಸಿದ ಕಾಗೇರಿ, ಜೆಡಿಎಸ್, ಬಿಜೆಪಿ ಮೈತ್ರಿ ಶಕ್ತಿಯಿಂದ ರಾಜ್ಯದಲ್ಲಿ ೨೮ ಕ್ಕೆ ೨೮ ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

300x250 AD

ಅಲ್ಪ ಸಂಖ್ಯಾತ ಬಂಧುಗಳೂ ಸಹ ಬಿಜೆಪಿಯನ್ನು ಬೆಂಬಲಿಸಿ ರಾಷ್ಟ್ರ ಭಕ್ತಿಯನ್ನು ಮೆರೆಯಬೇಕು. ಅವರು ಒಂದೇ ಕಡೆ ಮತ ಹಾಕಿದಲ್ಲಿ‌ ಹಿಂದೂಗಳು ಹಾಗೇ ಮಾಡಿದಲ್ಲಿ ಏನಾಗಲಿದೆ ? ಕಾರಣ ರಾಷ್ಟ್ರ ಭಕ್ತಿಯುಳ್ಳ ಎಲ್ಲರೂ ಬಿಜೆಪಿ ಬೆಂಬಲಿಸಬೇಕು. ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್ ನಾಯ್ಕ ಹಾಗೂ ಇತರ ಬಿಜೆಪಿ, ಜೆಡಿಎಸ್ ಮುಖಂಡರುಗಳು ಇದ್ದರು.‌

ಹಾಲು ಜೇನಿನಂತೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕಾರ್ಯ ರಾಜ್ಯದೆಲ್ಲೆಡೆ, ಉತ್ತರ ಕನ್ನಡ ಕ್ಷೇತ್ರದಲ್ಲೂ ನಡೆದಿದೆ. ಎಲ್ಲಾ ಕಾರ್ಯಕರ್ತರ ಸಹಕಾರದಿಂದ ಬಿಜೆಪಿ ಗೆಲ್ಲಲಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಅಭ್ಯರ್ಥಿ.

ಹೊನ್ನಾವರದ ಪ್ರಚಾರದ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪೇ ಗೌಡ ಅವರನ್ನು ಕಾಗೇರಿ ಭೇಟಿ ಮಾಡಿ ಸಹಕಾರ ಕೇಳಿದರು. ಗಣಪೇ ಗೌಡ ಅವರ ಸ್ವ ಗೃಹದಲ್ಲಿ ಜೆಡಿಎಸ್, ಬಿಜೆಪಿ ನಾಯಕರ ಸಮ್ಮೀಲನ ನಡೆಯಿತು. ಮೈತ್ರಿ ಮಾತುಕತೆಯಂತೆ ಬಿಜೆಪಿಯ ಗೆಲುವಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷರು ತಿಳಿಸಿದರು. ‘ಜೆಡಿಎಸ್ ಬಿಜೆಪಿ ಜೊತೆ ಸೇರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿ, ಮೋದಿಜೀಯವರು ಮೂರನೇ ಬಾರಿಗೆ ಪ್ರಧಾನಿಯಾಗಲು ಕೊಡುಗೆ ನೀಡಬೇಕು ‘ ಎಂದು ಕಾಗೇರಿ ಇದೇ ವೇಳೆ ಹೇಳಿದರು.

ಪ್ರಚಾರದ ಭರಾಟೆಯ ನಡುವೆಯೇ ಕಾಗೇರಿ ಅವರು ಇಡಗುಂಜಿ ಮಹಾಗಣಪತಿ ದೇವಸ್ಥಾನ, ಗುಣವಂತೆಯ ಶಂಭುಲಿಂಗೇಶ್ವರ ದೇವಸ್ಥಾನ, ನೇಟೆ ವೀರ ವೆಂಕಟ್ರಮಣ ಜಾತ್ರಾ ಮಹೋತ್ಸವಕ್ಕೆ ಭೇಟಿ ನೀಡಿ ದೇವರ ಆಶೀರ್ವಾದವನ್ನು ಪಡೆದುಕೊಂಡರು. ರಾಮ ನವಮಿಯ ನಿಮಿತ್ತ ರಾಮತೀರ್ಥಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದರು.

Share This
300x250 AD
300x250 AD
300x250 AD
Back to top