Slide
Slide
Slide
previous arrow
next arrow

ಕಾಗೇರಿಗೆ ಭೀಮ ಬಲ; ತಾಲೂಕಿನೆಡೆ ಅಬ್ಬರದ ಪ್ರಚಾರ

300x250 AD

ಸಿದ್ದಾಪುರ: ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ದಾಖಲೆಯ ಗೆಲುವಿಗೆ ಈಗ ಭೀಮ ಬಲ ಬಂದಂತಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಈಗ ಲೋಕಸಭಾ ಚುನಾವಣೆಯಲ್ಲಿ ಅದೃಷ್ಠ ಖುಲಾಯಿಸಿದಂತಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದೊಳಗಿನ ಭಿನ್ನಾಭಿಪ್ರಾಯ ಹಾಗೂ ಭಿನ್ನಮತದಿಂದಾಗಿ ಮತ್ತು ಕಾರ್ಯಕರ್ತರಲ್ಲಿನ ಗೊಂದಲ, ಸಂಘಟನೆಯಲ್ಲಿ ಬಿರುಕು ಮತ್ತಿತರ ಕಾರಣಗಳು ಸೋಲಿಗೆ ಮುಳುವಾಗಿತ್ತು ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈಗ ಲೋಕಸಭಾ ಚುನಾವಣೆ ಟಿಕೇಟ್ ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಎಂದು ಘೋಷಣೆ ಆದಾಗಿನಿಂದ ಹಿಡಿದು ನಾಮಪತ್ರ ಸಲ್ಲಿಸುವ ಪೂರ್ವದವರೆಗೂ ಬಿಜೆಪಿಯ ಒಂದು ಬಣದಲ್ಲಿ ಅಸಮಾಧಾನದ ಕಾರ್ಮೋಡ ಕವಿದಿತ್ತು.
ಈ ಅಸಮಾಧಾನ ರಾಜ್ಯದ ಬಿಜೆಪಿ ಮುಖಂಡರಿಗೆ ಮೊದಲಿನಿಂದಲೂ ತಿಳಿದಿದ್ದರೂ ಅಸಮಾಧಾನವನ್ನು ಹೋಗಲಾಡಿಸಲು ಮಾಡಿದ್ದ ಪ್ರಯತ್ನ ಎಲ್ಲ ವಿಫಲವಾಗುತ್ತಿತ್ತು. ಆದರೆ ಈಗ ಲೋಕಸಭಾ ಸ್ಥಾನವನ್ನು ಗೆಲ್ಲಲೇಬೇಕು ಎನ್ನುವ ಹಟದಿಂದಾಗಿ ರಾಜ್ಯ ಬಿಜೆಪಿ ಅಧ್ಯಕ್ಷರು, ಮುಖಂಡರು, ಪ್ರಮುಖರೆಲ್ಲ ಸೇರಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಹಾಗೂ ಅಸಮಾಧಾನಗೊಂಡವರನ್ನು ಸೇರಿಸಿ ಅವರಲ್ಲಿರುವ ಭಿನ್ನಾಭಿಪ್ರಾಯ, ಭಿನ್ನಮತಕ್ಕೆ ಇತಿಶ್ರೀ ಹಾಡಿಸಿ ಎಲ್ಲರೂ ಒಂದಾಗಬೇಕು ಎಂದು ಮನವರಿಕೆ ಮಾಡಿಕೊಟ್ಟಿದ್ದು ಈಗ ಕಾಗೇರಿ ಅವರಿಗೆ ವರವಾಗಿ ಪರಿಣಮಿಸಿದಂತಿದೆ.

300x250 AD

ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ದೂರವಿದ್ದ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್ ಮತ್ತು ಅವರ ತಂಡದವರು ಈಗ ಈ ಹಿಂದಿನ ಎಲ್ಲವನ್ನು ಮರೆತು ಎಲ್ಲರೂ ಒಂದಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ದಾಖಲೆಯ ಗೆಲುವಿಗೆ ಒಂದಾಗಿ ಶ್ರಮಿಸುತ್ತೇವೆ ಎಂದು ಕೆ.ಜಿ.ನಾಯ್ಕ ಹಣಜೀಬೈಲ್ ಅವರು ಹೇಳಿಕೆ ನೀಡಿರುವುದು ಕಾಗೇರಿ ಅವರಿಗೆ ಭೀಮ ಬಲ ಬಂದಂತಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಗೊಂದಲದಲ್ಲಿದ್ದ ಕೆಲವು ಕಾರ್ಯಕರ್ತರು ತಾವೇನು ಮಾಡಬೇಕು. ತಮ್ಮ ನಿಲುವೇನು ಎಂದು ಅತಂತ್ರಸ್ಥಿತಿಯಲ್ಲಿದ್ದವರು ಸಹ ನಿಟ್ಟುಸಿರು ಬಿಟ್ಟು ಸಂತೋಷದಿಂದ ಕಾಗೇರಿ ಪರವಾಗಿ ಪ್ರಚಾರ ಕೈಗೊಳ್ಳುವುದಕ್ಕೆ ಮುಂದಾಗಿದ್ದಾರೆ. ಅದರಂತೆ ತಾವು ಯಾರನ್ನು ಬೆಂಬಲಿಸಬೇಕು ಎಂದು ತೊಳಲಾಟದಲ್ಲಿದ್ದ ಮತದಾರರಿಗೆ ನೇರ ಉತ್ತರವೂ ದೊರಕಿದ್ದರಿಂದ ಕಾಗೇರಿ ಅವರಿಗೂ ಆತ್ಮವಿಶ್ವಾಸ ಹೆಚ್ಚಿದಂತಾಗಿದೆ.

Share This
300x250 AD
300x250 AD
300x250 AD
Back to top