ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಏಪ್ರಿಲ್ 16 ರ ಬೆಳಗ್ಗೆ 9 ರಿಂದ ಏಪ್ರಿಲ್ 17 ರ ಬೆಳಗ್ಗೆ 9 ರ ವರೆಗಿನ ಅವಧಿಯಲ್ಲಿ, ಅಬಕಾರಿ ಇಲಾಖೆ ವತಿಯಿಂದ 150.68 ಲೀ ಮದ್ಯ (ರೂ.19,617) ಹಾಗೂ 1 ದ್ವಿಚಕ್ರ ವಾಹನ (ಮೌಲ್ಯ. 1,15,000) ವಶಪಡಿಸಿಕೊಂಡಿದ್ದು, ಇದುವರೆಗೆ ಅಬಕಾರಿ ಇಲಾಖೆವತಿಯಿಂದ ಒಟ್ಟು 620 ಮತ್ತು ಪೊಲೀಸ್ ಇಲಾಖೆಯಿಂದ 47 ಎಫ್.ಐ.ಆರ್. ದಾಖಲಿಸಲಾಗಿದೆ. ಸೂಕ್ತ ದಾಖಲೆಗಳಿಲ್ಲದೇ ವಶಪಡಿಸಿಕೊಂಡಿದ್ದ ರೂ.35,60,300 ರಲ್ಲಿ 26,35,200 ರೂ ಗಳನ್ನು ಬಿಡುಗಡೆಗೊಳಿಸಲಾಗಿದೆ.